ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಓ..ಮನಸ್ಸೇ.. ಹೇಳು ನಿನ್ನ ಕಲ್ಪನೆಯ ಭಾವವೇನು...
ಆಸೆಗಳು ಗರಿಬಿಚ್ಚಿ ಹಾರುತಿದೆ,ಕಾಲ ಚಲಿಸುತಿದೆ...
ಆವತ್ತು ನೀ ಹೋಗು ಅಲ್ಲಿಗೆ ಅಂದೆ...
ಹೋದೆ ನಿನ್ನ ಮಾತಕೇಳಿ..ಆಸೆಯ ಹಂದರದೊಂದಿಗೆ..
ಮತ್ತೊಮ್ಮೆ,ಬಾ ಅಂದೆ..ಬಂದೆ ನಿನ್ನ ಅಸೆಯಂತೆ...
ಇವತ್ತು ಮತ್ತೆ ಅಲ್ಲಿ ಹೋಗು ಅನ್ನುವೆಯಾ ಅಂತರಾತ್ಮವೆ...
ತಿಳಿಸು ನಿನ್ನ ಬಾವವೇನು...ಗರಿಬಿಚ್ಚಿದ ಹಕ್ಕಿಯಂತೆ ಹೋದೆ ಅಲ್ಲಿಗೆ...
ಕನಸ ಕಂಡೆ,ಕಟ್ಟಿದೆ ಕಲ್ಪನೆಯ ಸೌದವನ್ನೆ...
ಹಾರುವ ಭರದಲ್ಲಿ ಮರೆತಿದ್ದೆ ವಾಸ್ತವದ ಸತ್ಯವನ್ನೆ...
ಅಷ್ಟರಲ್ಲೆ ಮುರಿದಿತ್ತು ಕಲ್ಪನೆಯ ಸೌದ...
ಕರೆದೆ ನೀನು...ಮರಳಿ ಬಾ ಎಂದು...
ಬಂದೆ ನಿನ್ನ ಒಲವಿನ ಕರೆಗೆ ಓ ಗೊಟ್ಟು...
ತಿಳಿಸು ನಿನ್ನ ಬಾವವೇನು...

ಅಂತರಾತ್ಮವೇ ಈಗಲಾದರು ಹೇಳು...
ನಿನ್ನ ಆತ್ಮ ಸತ್ಯವನ್ನ…ಭಾವ ಸಾರವನ್ನ...
ಕಟ್ಟಿದೆ...ಮುರಿದ ಕಲ್ಪನೆಯ ಸೌದವನ್ನು...
ಅನುಭವದ ಸೆಲೆಯೊಂದಿಗೆ...ಅರಿವಿನ ಬಣ್ಣದೊಂದಿಗೆ...
ಸೌದವೀಗ ಆಗಿದೆ ಅರಮನೆ...
ಅಲ್ಲಿ ಬೆಳಗುತಿದೆ ಜ್ಞಾನ ದೀಪ...
ಆದರೂ ನೀನು ಮತ್ತೆ ಇನ್ನೆಲ್ಲಿಯೋ ಹೋಗು ಅನ್ನುವೆಯಾ...
ತಿಳಿಸು ನಿನ್ನ ಬಾವವೇನು...

- ಮಾಧವ ಹೊಳ್ಳ.ಮಡಿಮೊಗರು

ಈ ಮನಸ್ಸೆ ಹಾಗೆ ಇಂಟರನೆಟ್ ಪೇಜ್ ಇದ್ದ ಹಾಗೆ ಕೆಲವೊಮ್ಮೆ ವೇಗವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತದೆ, ಮತ್ತೊಮ್ಮೆ ಅಲ್ಲೆ ಸ್ಟ್ರಕ್ ಆಗಿಬಿಡುತ್ತದೆ. ಕೆಲವೊಮ್ಮೆ ನಾವೆಷ್ಟು ಅಡ್ರಸ್ ಹಾಕಿದ್ರು ಅದು ಹುಡುಕಾಡುವುದಿಲ್ಲ, ಬದಲಾಗಿ ಬೇರೆಯದೆ ವಿಷಯಕ್ಕೆ ಹಾತೊರೆಯುತ್ತಿರುತ್ತದೆ. ಬಹುಷ ಮನುಷ್ಯನ ಮನಸ್ಸಿನಷ್ಟು ಚಂಚಲ ಇನ್ನೊಂದಿಲ್ಲ. ಅಂತಹ ಚಂಚಲ ಮನಸ್ಸಿನ ಬಾವನೆಗಳು ಬರವಣಿಗೆಯಲ್ಲಿ ಮೂಡಿದಾಗ ಅದು ಕವಿತೆಯಾದದ್ದು ಹೀಗೆ...


0 comments:

Post a Comment