ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಇದು ಉತ್ತರ ಕನ್ನಡ ಜಿಲ್ಲೆಯ ಓರ್ವ ಸಾಧಕರ ಕಿರು ಪರಿಚಯ. ಗ್ರಾಮೀಣ ಪ್ರದೇಶದ ಮಂದಿ ನಗರವಾಸಿಗಳಿಗಿಂತ ಅದೆಷ್ಟೋ ಬಾರಿ ಬುದ್ದಿವಂತರಾಗಿರುತ್ತಾರೆ. ಇಂತಹ ಸಾಧಕರ ಪುಟ್ಟ ಪರಿಚಯ ನಮ್ಮ ಓದುಗರ ಮೂಲಕ ಇಡೀ ವಿಶ್ವವ್ಯಾಪಿಯಾಗಲಿ ಎಂಬ ಸದುದ್ದೇಶದಿಂದ ಈ ವರದಿ ನಿಮ್ಮ ಕೈಗಿಡುತ್ತಿದ್ದೇವೆ. ಓದಿ ಅಭಿಪ್ರಾಯಿಸಿ. ಭಾರತದ ಮೂಲೆ ಮೂಲೆಯಲ್ಲಿರುವ ಅದೆಷ್ಟೋ ಹಳ್ಳಿಗಳಲ್ಲಿ ಇಂತಹ ಸಾಧಕರು ಸದ್ದಿಲ್ಲದೆ ಕೂತಿರುತ್ತಾರೆ. ಅವರೆಲ್ಲರನ್ನು ಜಗತ್ತಿಗೆ ನೀವು ಪರಿಚಯಿಸಬಹುದು. ನಮ್ಮ ಅಂತರ್ಜಾಲ ತಾಣ ಮುಕ್ತ ಅವಕಾಶ ನೀಡುತ್ತದೆ. ನೀವೂ ಈ ಪ್ರಯತ್ನ ನಡೆಸಿ...ಈ ವರದಿಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ನಮಗೆ ಕಳುಹಿಸಿ editor@ekanasu.com, info@ekanasu.com
- ಸಂ
.ಶಿರಸಿ ತಾಲೂಕಿನ ಮತ್ತಿಘಟ್ಟ ಸಮೀಪದ ಒಂದು ಪುಟ್ಟ ಊರು ಅಸೊಳ್ಳಿ.ನಿಸರ್ಗದತ್ತ ಮುಗ್ಧತೆಯೇ ಮೈದೋರಿದ್ದ ಈ ಪ್ರದೆಶದಲ್ಲಿ ಹೊರಜಗತ್ತಿನ ಅರಿವಿರದ ಜನ ತಮ್ಮಲ್ಲೊಂದು ವೈಜ್ಞಾನಿಕ ದೃಷ್ಟಿಕೋನವಿದೆ ಎಂಬುದನ್ನು ತೊರಿಸಿಕೊಟ್ಟಿದ್ದಾರೆ.ಬಹುಶಃ ಅಲ್ಲಿನ ಜನರಿಗೆ ತಮ್ಮ ಸಾಧನೆಯ ಹಿಂದಿನ ಶ್ರಮಕ್ಕೊಂದು ಆಧುನಿಕತೆಯ ಸ್ಪರ್ಶವಿದೆ ಎನ್ನುವುದು ಗಮನಕ್ಕೆ ಬರಲಿಲ್ಲವೇನೋ!

ಕುಂಟಗುಣಿ ಗ್ರಾಮದ ಈ ಪ್ರದೇಶದಲ್ಲಿ ಹಿಂದುಳಿದ ಗುಡ್ಡಗಾಡು ಜನರ ವಾಸವಿದೆ.ಇವರು ನಿರ್ಮಿಸಿಕೊಂಡ ವಿಕಾಸ ಸಂಘದ ಫಲವಾಗಿ ಆ ಊರಿನಲ್ಲಿರುವ ಎಲ್ಲ ಮನೆಗಳಿಗೆ ಪಿಕೋ ಜಲ ವಿದ್ಯುತ್ ಯೊಜನೆ ವರದಾನವಾಗಿದೆ.ಒಂದೇ ಕುಟುಂಬದ ಆರು ಮನೆಗಳು ಆ ಹಳ್ಳಿಯಲ್ಲಿದ್ದು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.ಈ ಎಲ್ಲಾ ಮನೆಯವರೂ ಸೇರಿ ತಲಾ ಐದು ಸಾವಿರದಂತೆ ಖರ್ಚನ್ನು ನಿಭಾಯಿಸಿ ಎತ್ತಲಿಂದಲೋ ಹೊಳೆಯ ಮೂಲಕ ರಭಸವಾಗಿ ಬೀಳುವ ನೀರನ್ನು ಅಲ್ಪ ಪ್ರಮಾಣದಲ್ಲಿ ಸಂಗ್ರಹಿಸಿ ವಿದ್ಯುತ್ ತಯಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

ವರ್ಷಪೂರ್ತಿ ಹರಿಯುವ ಝರಿಯ ಮೂಲದ ನೀರು ವಿದ್ಯುತ್ ತಯರಿಕೆಗೆ ಬಳಕೆ.ಇಲ್ಲಿ ಪವರ್ ಕಟ್ ಭಯವಿಲ್ಲ... ಒಂದು ಸೆಕೆಂಡಿಗೆ ಮೂವತ್ತು ಲೀಟರ್ ನೀರನ್ನು ಪಡೆದುಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆ.ಈ ಸಂದರ್ಭದಲ್ಲಿ ಪೋಲಾಗುವ ನೀರಿಗೂ ಸಹ ಒಂದು ಮಾರ್ಗವನ್ನು ಹುಡುಕಿರುವುದು ವಿಶೇಷ.ಪೋಲಾಗುವ ನೀರಿನಲ್ಲಿ ಕೃಷಿ... ಅಲ್ಲಿನ ಜನ ಕೃಷಿಗೆ ಎಷ್ಟು ಒತ್ತು ನೀಡಿದ್ದಾರೆ ಎಂಬುದನ್ನು ಮನದಟ್ಟಾಗಿಸುತ್ತದೆ.ವಿದ್ಯುತ್ತಿಗೆ ಪೂರೈಕೆಯಾಗುವ ಈ ನೀರು ಹೆಚ್ಚು ಪ್ರಮಾಣದಲ್ಲಿ ಬಂದರೆ ಅದು ತೋಟಗಳಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.ಅಲ್ಲದೇ ಸಮತಳದಲ್ಲಿ ಹರಿಯುವ ನೀರಿನಿಂದ ವಿದ್ಯುತ್ ತಯಾರಿಸಲು ಕಷ್ಟವಾಗುತ್ತದೆ ಎನ್ನುತ್ತಾರೆ ಈ ವಿದ್ಯುತ್ ಪೂರೈಕೆಯ ನಿರ್ವಹಣೆ ನಡೆಸುತ್ತಿರುವ ಲೋಕ ವಾಸು ಗೌಡ.

ಸಂಜೆ ಆರರಿಂದ ಬೆಳಿಗ್ಗೆ ಎಂಟು ಘಂಟೆಯವರೆಗೆ ಇದರ ಉಪಯೋಗವನ್ನು ಮಾಡಿಕೊಳ್ಳಲಾಗುತ್ತದೆ. ನಿರ್ವಹಣಾಕಾರನ ಮನೆಗೆ ಮಾತ್ರವೇ ವಿದ್ಯುತ್ ಉಪಯೋಗಿಸಿಕೊಳ್ಳುವ ವ್ಯವಸ್ಥೆಯನ್ನು ಮನೆಯಲ್ಲಿಯೇ ಒಂದು ಪುಟ್ಟ ಯಂತ್ರದ ಸಹಾಯದಿಂದ ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರತ್ಯೇಕವಾದ ಮೀಟರ್ ಬೋರ್ಡ ಮನೆಮನೆಗಳಲ್ಲಿಲ್ಲ.ವಿದ್ಯುತ್ ತಯಾರಿಕಾ ಯಂತ್ರದ ಪಕ್ಕವೇ ಈ ವ್ಯವಸ್ಥೆಯಿದೆ.ಜನರೇಟರ್ ಸಹಾಯದಿಂದ ಮೋಟಾರ್ ತಿರುಗುತ್ತದೆ.ಪ್ರತೀ ಮನೆಗಳಿಗೂ ವಿದ್ಯುತ್ತನ್ನು ವೈಯರ್ ಗಳ ಮೂಲಕ ಪೈಪುಗಳ ಬಧ್ರತೆಯಲ್ಲಿ ನೆಲದಡಿಯಿಂದ ಕೊಂಡೊಯ್ಯಲಾಗಿದೆ.

ಪ್ರತೀ ಮನೆಗಳಲ್ಲಿಯೂ ಐದರಿಂದ ಆರು ಸಾಮಾನ್ಯ ವ್ಯಾಟ್ನ ಬಲ್ಬ್ಗಳನ್ನು ಬಳಸಿದ್ದಾರೆ.ಈ ವಿದ್ಯುತ್ ಯಂತ್ರದಿಂದ ಸುಮಾರು ಒಂದೂವರೆ ಕಿ.ಮೀ ಗಳ ವರೆಗೆ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ.ಆದರೆ ಇಲ್ಲಿ ಆರು ಕುಟುಂಬಗಳಿಗೆ ಮಾತ್ರ ಈ ಯಂತ್ರ ಉಪಕಾರಿಯಾಗಿದ್ದು,ಇನ್ನೂ ಹೆಚ್ಚಿನ ವಿದ್ಯುತ್ ಪಡೆಯಲು ಮತ್ತು ಹೆಚ್ಚಿನ ದೂರದವರೆಗೆ ಹರಿಸಲು,ರಭಸವಾಗಿ ಬೀಳುವ ಬಹು ಪ್ರಮಾಣದ ನೀರಿನ ಅವಶ್ಯಕತೆ ಹಾಗೂ ದೊಡ್ಡ ಗಾತ್ರದ ಯಂತ್ರದ ಅವಶ್ಯಕತೆಯಿದೆ ಎನ್ನುವ ಆ ಊರಿನವರ ಈ ವಿದ್ಯುತ್ತಿಗೆ ಸಂಬಂಧಪಟ್ಟ ಖರ್ಚೆಂದರೆ ಯಂತ್ರದ ಬೆಲ್ಟ್ ತುಂಡಾದರೆ ಮಾತ್ರ!


ಹೀಗಿದ್ದೂ ಇಂಥಹ ಕಲ್ಪನೆ ಗುಡ್ಡಗಾಡು ಜನರ ಮನದಲ್ಲಿ ಹುಟ್ಟಿದ್ದಾದರೂ ಹೇಗೆ? ಎಂಬ ಪ್ರಶ್ನೆ ನಮ್ಮೆದುರಲ್ಲಿ ತೆರೆದುಕೊಳ್ಳದೇ ಇರಲಾರದು! ಚಿಕ್ಕಮಗಳೂರಿನ ಯಳ್ಳೂರು ಗ್ರಾಮದಲ್ಲಿ ಮೂವತ್ತು ಮನೆಗಳಿಗೆ ಸಂಬಂಧಿಸಿದಂತೆ ಪಿಕೋ ಜಲ ವಿದ್ಯುತ್ ಯೋಜನೆಯನ್ನು ಮಾಡಿದ ಸುದ್ದಿ ತಿಳಿದು ಅಸೊಳ್ಳಿಯ ಲೋಕ ವಾಸು ಗೌಡ,ವೆಂಕಟ್ರಮಣ ಯಂಕು ಗೌಡ ಹಾಗೂ ಈ ಮೊದಲು ಗುಡ್ಡಗಾಡು ಸಂಘದಲ್ಲಿದ್ದ ಗಣೇಶ ಶೆಟ್ರು ಅಲ್ಲಿಗೆ ಹೋಗಿ ನೋಡಿ ತಮ್ಮೂರಲ್ಲೂ ಇಂಥದ್ದೊಂದು ಪ್ರಯೋಗ ಮಾಡಲು ನಿರ್ಧರಿಸಿ ಬಂದಿದ್ದರು.

ತಮ್ಮೂರು ಇನ್ನೂ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ.ಆ ಕಾರಣಕ್ಕಾಗಿ ವಿದ್ಯುತ್ ತಯಾರಿಸುವ ಈ ಯೋಜನೆಗೆ ಹುಮ್ಮನಸ್ಸಿನಿಂದ ಕೈ ಹಾಕಿ ತಮ್ಮ ತೋಟದಲ್ಲಿಯೇ ಕಟ್ಟಡ ನಿರ್ಮಿಸಿ ಮೂವತ್ತು ಲಕ್ಷ ಖರ್ಚಿನಲ್ಲಿ ಒಂದು ಮೂರ್ತ ರೂಪ ನೀಡಿದೆವು,ಉಳಿದ ಖರ್ಚನ್ನು ವಿಕಾಸ ಸಂಘ ಹಾಗೂ ತಮ್ಮ ಕಾರ್ಯವನ್ನು ಮೆಚ್ಚಿದ ಕೆಲವರು ಭರಿಸಿರುವುದಾಗಿ ಇದರ ಫಲಾನುಭವಿ ಜನ ಹೇಳುತ್ತಾರೆ. ಅಲ್ಲಿಯ ಜನರ ಅ ಮುಗ್ಧ ಮನಸ್ಸಿಗೇ ಗ್ರಹಿಸಲ್ಪಟ್ಟ ಒಂದು ವೈಜ್ಞಾನಿಕ ಚಿಂತನೆ ಕಾರ್ಯರೂಪಕ್ಕೆ ಬಂದಿರುವಾಗ,ಶಿಕ್ಷಣ ಪಡೆದು ತಮ್ಮತನವನ್ನು ಗುರುತಿಸಿಕೊಳ್ಳಲು ಹಂಬಲಿಸುವ ಜನ ಇಂಥ ಯೋಜನೆಯ ಬೆನ್ನನ್ನೇಕೆ ಏರಬಾರದು?

ಭವ್ಯಾ ನೇರಲಜಡ್ಡಿ. ಸೋಂದಾ,ಶಿರಸಿ.

4 comments:

s.magod said...

ಕೆಲ ವಾಕ್ಯಗಳು ಗೌಣವೆನಿಸುತ್ತದೆ ಭವ್ಯಾ,"ಸಮತಳದಲ್ಲಿ ಹರಿಯುವ ನೀರಿನಿಂದ ವಿದ್ಯುತ್ ತಯಾರಿಸಲು ಕಷ್ಟವಾಗುತ್ತದೆ ಎನ್ನುತ್ತಾರೆ" ಸಹಜವಲ್ಲವಾ?ಅದು ಅಸಾಧ್ಯ ಕೂಡ. ಜಲವಿದ್ಯುತ್ ಉತ್ಪಾದನೆಗೆ ನೀರಿನ ಹರಿವು ರಭಸವಾಗಿಯೇ ಇರಬೇಕಲ್ಲ?ಸಂದರ್ಶನದ ಸಂದರ್ಭದಲ್ಲಿ ಗೌಡರೇ ಈ ಮಾತನ್ನು ಹೇಳಿದ್ದರೂ ಬರಹಕ್ಕಿಳಿಸುವಾಗ ಅನಗತ್ಯವೆನಿಸುತ್ತದೆ.Anyway,good job.keep writing

[NENapu] said...

ಭವ್ಯರವರೆ...
ಲೇಖನ ಚನ್ನಾಗಿ ಮೂಡಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕು ವ್ಯಾಪ್ತಿಯ ಶಿವಪುರದಲ್ಲಿಯೂ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದನೆ ಸಾದ್ಯ ಎಂದು ಶಿವಪುರದ ಗೋಪಾಲ ಭಟ್ಟರು ಕೂಡ ಸಾದಿಸಿ ತೋರಿಸಿದ್ದಾರಲ್ಲ s.magod..?

[NENapu] said...

ಭವ್ಯರವರೆ....
ಬರಹ ಚನ್ನಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿವಪುರದಲ್ಲಿಯೂ ಹೀಗೆಯೇ ವಿದ್ಯುತ್ ತಯಾರಿಸಲಾಗುತ್ತದೆ. ಜೋಯಡಾ ವ್ಯಾಪ್ತಿಯ ಶಿವಪುರದ ಗೋಪಾಲ ಭಟ್ಟ ಸಹ ಹರಿಯುವ ನೀರಿನಿಂದ ವಿದ್ಯುತ್ ತಯಾರಿಕೆ ಸಾದ್ಯ ಎಂದು ತೋರಿಸಿದ್ದಾರೆ s.magod.

[NENapu] said...

ಬರಹ ಚನ್ನಾಗಿದೆ ಭವ್ಯರವರೆ...
ಉತ್ತರ ಕನ್ನಡದ ಶಿವಪುರದಲ್ಲಿಯೂ ಹೀಗೆ ವಿದ್ಯತ್ ತಯಾರಿಸಲಾಗುತ್ತದೆ.

Post a Comment