ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಅದು ಏಕಾಂಗಿತನದ ಆ ದಿನ... ಕಡಲಬ್ಬರಿಸೋ ಸದ್ದು, ಆ ಬೋರ್ಗರೆಯುವ ಸದ್ದಿನಲ್ಲಿ.. ಅಲ್ಲೊಂದು ಏಕಾಂಗಿ ತನದ ಸದ್ದಿಲ್ಲದ ಸದ್ದು, ಅಲ್ಲಿ ಎಂದಿನಂತೆ ಮುಸ್ಸಂಜೆ ಸೂರ್ಯನ ಬೆಳಕು, ಕೆಲ ಹಕ್ಕಿಗಳು ಆಹಾರಕ್ಕೆಂದು ಹೊರಟರೆ, ಕೆಲವೊಂದು ಗೂಡು ಸೇರುವ ಆತುರ, ಹತ್ತಿರದಲ್ಲೇ ಆ ಪುಟ್ಟ ಮಗು ಮರಳ ರಾಶಿಯಲ್ಲೊಂದಿಷ್ಟು ಏಕಾಂಗಿತನದ ಆಟ, ಯಾರ ನಿರೀಕ್ಷೆಯಲ್ಲೂ ಇರದೆ, ಯಾರ ಪ್ರೀತಿಯೂ ಸಿಗದೆ, ನೆರಳಾದರೇನು ಬಿಸಿಲಾದರೇನು? ಆಟಕ್ಕಿಲ್ಲ ಇತಿಮಿತಿ ಹೊಟ್ಟೆಹಸಿವಾದರೇನಂತೆ, ಆಟವಾಡಿಕೊಂಡರೆ ಹಸಿವೂ ನೀಗುತ್ತದೆ ಎನ್ನುತ್ತಿತ್ತು ಆ ಮುಗ್ಧ ಮಗುವಿನ ಕಣ್ಣುಗಳು..


ಮೀನುಗಾರನಾದ ತಂದೆಗಾಗಿ ಕಾಯುವ ಆ ಮುಗ್ದ ಮಗು, ಸಿಡಿಲು ಬಂದರೂ ಅದಕ್ಕೆ ಸಮುದ್ರದ ಅಲೆಯೇ ಆಟದ ವಸ್ತು, ನೀರೇ ಆ ಮಗುವಿಗೆ ಕಾರಂಜಿ, ಕುತ್ತಿಗೆಯಲ್ಲಿ ಸಮುದ್ರದಲ್ಲಿ ಸಿಗೋ ಚಿಪ್ಪುನ್ನೇ ಕೊರಳ ಮಾಲೆಯಂತೆ ಧರಿಸಿತ್ತು. ಸಮುದ್ರದ ಅಲೆಗಳೇ ಮಗುವಿಗೆ ತಾಯಿಯಂತೆ, ತಾಯಿಯ ಮುಖವನ್ನೇ ನೋಡದ ಮುಗ್ದ ಮಗು ಇನ್ಯಾರನ್ನು ತಾನೇ ತನ್ನ 'ತಾಯಿ' ಎಂದು ಕರೆಯಲಿ?

ಒಂದು ಗುಬ್ಬಿ ತನ್ನ ತಾಯಿಯ ಆಗಮನಕ್ಕೆ ಎಷ್ಟು ಕಾಯುತ್ತಲಿರುತ್ತದೋ ಅದಕ್ಕಿಂತ ಹೆಚ್ಚು ಆ ಮಗು ತನ್ನ ತಂದೆಯ ಆಗಮನದ ನಿರೀಕ್ಷೆಯಲ್ಲಿತ್ತು. ಯಾವುದೇ ರೀತಿಯ ಪ್ರೀತಿಗಾಗಿ ಅಲ್ಲ. ಕೇವಲ ಹೊಟ್ಟೆಯ ಹಸಿವಿಗಾಗಿ, ತನ್ನ ತಂದೆ ಏನನ್ನಾದರೂ ತರುತ್ತಾರೆ ಎಂಬ ನಂಬಿಕೆಯಿಂದ.. ಆ ನಂಬಿಕೆ ಮಗುವನ್ನು ಹುಸಿಗೊಳಿಸಲಿಲ್ಲ


- ಸನತ್ ಕುಮಾರ್

0 comments:

Post a Comment