ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ... ಚಂದ್ರನ ಗೆಳೆತನಕೆ ಕಿರಣಗಳೇ ಸಾಕ್ಷಿ...ನನ್ನ-ನಿನ್ನ ಗೆಳೆತನಕ್ಕೆ ಕಾಲೇಜು ಜೀವನವೇ ಸಾಕ್ಷಿ. ಇದು ನೂರಾರು ಕೈಗಳು ಅಟೋಗ್ರಾಫ್ಗೆ ಪೆನ್ಡೌನ್ ಮಾಡುವ ನಾಣ್ನುಡಿ. ಆದ್ರೆ ಗೆಳೆಯ ಗೆಳೆತನ ಅಂದ್ರೆ ತುಂಬಾ ವ್ಯಾಖ್ಯೆಗಳನ್ನು ತಿಳಿದವರು ಹೇಳಿದ್ದಾರೆ. ಅದನ್ನು ನಾವು ದಿನನಿತ್ಯ ಕೇಳುತ್ತೇವೆ ಕೂಡಾ. ಆದ್ರೆ ನಾನು ಹೇಳುವ ನಮ್ಮ ಗೆಳೆತನದಲ್ಲಿ ಅಮ್ಮನ ಮಮತೆಯಿತ್ತು, ಅಪ್ಪನ ಗದರಿಕೆಯಿತ್ತು, ಅಕ್ಕನ ಪ್ರೀತಿಯಿತ್ತು, ತಂಗಿಯ ಜಗಳವಿತ್ತು, ಅಣ್ಣನ ಆಸರೆಯ ಭರವಸೆಯಿತ್ತು. ಆದರೂ ಕಾಡ ನಮ್ಮ ಗೆಳೆತನ ಕದಲಿತ್ತು! ಕಾರಣ ಹುಡುಕಾಡಬೇಕಿಲ್ಲ. ಅದು ನಿಂಗೆ ತಿಳಿದಿದೆ ತಾನೇ?!


ಮುಸ್ಸಂಜೆಯಾಗುವಾಗ ಶಶಿ ಮುಳುಗುವಾಗ ಪ್ರಕಾಶಮಾನವಾಗಿರುತ್ತೆ, ನೋಡಲು ಇಂಪಾಗಿರುತ್ತೆ. ಆಸ್ವಾದನೆಗೂ ಮನ ಬಯಸುತ್ತೆ. ಹಾಗೆಯೇ ನಮ್ಮ ಗೆಳೆತನ ಕೂಡ ಇರಬೇಕೆಂದು ಬಯಸಿದ್ದು. ನಮ್ಮ ಸ್ನೇಹ ಪವತ್ರವಾದದ್ದು. ಅಲ್ಲಿ ನೋವಿತ್ತು, ನಲಿವಿತ್ತು, ಪ್ರೀತಿ, ಜಗಳ ಎಲ್ಲವೂ ಇತ್ತು. ನಾನು ನಿನ್ನನ್ನು ಬಹುವಚನದಲ್ಲಿ ಕರೆಯುವಾಗ ಏಕವಚನದಲ್ಲಿ ಕರೆಯಲು ಸೂಚಿಸಿದವನೂ ನೀನೇ! ಅಲ್ವಾ? ಹೌದು ನಾನು ಕೂಡಾ ಹಾಗೇ ಮಾಡಿದೆ. ದಿನಗಳು ಹಾಗೇ ಕಳೆಯುತ್ತಿದ್ದವು. ಒಂದು ದಿನ ನಿನ್ನ ಮಾತಾಡಿಸಿಲ್ಲ ಅಂದ್ರೂ ಮನಸ್ಸು ನಿನಗಾಗಿ ಪರಿತಪಿಸುತ್ತಿತ್ತು. ನನ್ನ ಭಾವನೆಗಳನ್ನು ಹಂಚಿಕೊಳ್ಬೇಕು ಅಂತ ಅನಿಸುತ್ತಿತ್ತು. ಅದಕ್ಕಾಗಿ ಕಣ್ಣುಗಳು ನಿನ್ನನ್ನು ಹುಡುಕಾಡುತ್ತಿದ್ದವು. ಅದು ಖಂಡಿತಾ ಪ್ರೇಮವಲ್ಲ. ಕೇವಲ ಪವಿತ್ರ ಸ್ನೇಹದ ಪರಿ.

ಒಂದು ಸಲ ನಾನು ಎಸ್ಎಂಎಸ್ ಮಾಡಿಲ್ಲ ಅಂತ ನನ್ನ ಜೊತೆ ಜಗಳವಾಡಿದ್ದೆ ಎಷ್ಟು ನೋವಾಗಿತ್ತು ಗೊತ್ತಾ? ನನ್ನ ಕಳ್ಕೊಳ್ಳೊದು ಬಿಡು, ನನ್ನಲ್ಲಿ ಮಾತಾನಾಡದೇ ಇರುವುದೂ ನಿನ್ನಿಂದ ಸಾಧ್ಯವಿಲ್ಲ.
ಆದ್ರೆ ಒಂದು ದಿನ! ಗೊತ್ತಾಯಿತು ನಿಂಗೆ ನನ್ಜೊತೆ ಇದ್ದಿದ್ದು ಸ್ನೇಹವಲ್ಲ. ಅದು ಪ್ರೇಮ ಅಂತ. ಯಾಕಂದ್ರೆ ನೀನಂದು ನಂಗೆ ಪ್ರಪೋಸ್ ಮಾಡಿದ್ದೆ. ಏನೆಂದು ಹೇಳಲಿ ಗೆಳೆಯಾ, ಯಾವತ್ತು ಸ್ನೇಹ ಸ್ನೇಹ ಅಂತಾ ಒದ್ದಾಡುತ್ತಿದ್ದ ನಂಗೆ ಒಮ್ಮೆಲೇ ನನ್ನ ಭಾವನೆಗಳಿಗೆ ಸಿಕ್ಕಿದ ಬೆಲೆ ಇಷ್ಟೇನಾ? ಸ್ನೇಹ ಅಂದ್ರೆ ಇದೇನಾ? ಅಂತ ಅನಿಸಿತ್ತು. ನಾನವಗಲೇ ನಿಂಗೆ ತಿಳಿಸಿ ಹೇಳಿದ್ದೆ. 'ಇಲ್ಲ ಕಣೋ ನಮ್ಮ ನಡುವೆ ಇರೋದು ಪವಿತ್ರ ಸ್ನೇಹ... ಅದು ಯಾವತ್ತಿಗೂ ಪ್ರೇಮವಾಗಲ್ಲ ಎಂದು. ಆಗ ನೀನೆಲ್ಲಿ ಕೇಳುತ್ತೀಯಾ? ನೀನು ಕೇಳೋ ಪರಿಸ್ಥಿತಿಯಲ್ಲಿ ರಲಿಲ್ಲ. ನಿನ್ನ ಪ್ರೇಮವೆಂಬ ಹುಚ್ಚಿನ ಪರಾಕಾಷ್ಠೆ ಮುಗಿಲು ಮುಟ್ಟತ್ತು. ಯಾರದೋ ಯಾವುದೋ ಮಾತು ಕೇಳಿ ನನ್ ತೊರೆದು ಹೋದೆ.

ಒಂದಂತೂ ನಿಜ ಕಣೋ ಈಗಲೂ ನಂಗೆ ನಿನ್ನಲ್ಲಿ ಅದೇ ಪವಿತ್ರ ಸ್ನೇಹ ಇದೆ. ಈಗಲೂ ನನ್ನ ನೋವಿಗೆ ನಿನ್ನ ಹೃದಯ ಹೇಗೆ ಮಿಡಿಯುತ್ತೋ ಹಾಗೆ ನನ್ ಹೃದಯ ಕೂಡ ಮಿಡಿಯುತ್ತೆ. ನಿನ್ನ ಕಳ್ಕೊಂಡಿದ್ದಕ್ಕಾಗಿ ಸ್ಸಾರೀ ಕಣೋ ಅನು ಯಾವತ್ತು ನಿನ್ನ ಸ್ನೇಹಕ್ಕೆ ನನ್ನ ಹೃದಯ ಕಾದಿದೆ.
ಇಂತೀ ನಿನ್ನ
ಸವಿ

-ವಿಸ್ಮಿತಾ ಎಡಮಂಗಲ

1 comments:

BIDIRE said...

ಬಹಳ ಸೊಗಸಾಗಿ ಭಾವನೆಗಳಿಗೆ ಬರಹದ ರೂಪ ನೀಡಿದಿರಿ.....ವಿಸ್ಮಿತಾ

Post a Comment