ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಶಿವಮೊಗ್ಗ ಜಿಲ್ಲೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಆದ್ದರಿಂದಲೇ ಶಿವಮೊಗ್ಗಕ್ಕೆ ಪ್ರವಾಸಿ ತಾಣಗಳ ತವರು ಎಂದು ಕರೆಯಲಾಗಿದೆ. ಅನೇಕ ಜಲಪಾತಗಳನ್ನು ಇಲ್ಲಿ ಕಾಣಬಹುದು. ವಿಶ್ವವಿಖ್ಯಾತ ಜೋಗ, ಒನಕೆ ಅಬ್ಬೆ, ಅಚಕನ್ಯ, ಹಿದ್ಲಮನೆ, ತುಂಗ ಅಣೆಕಟ್ಟು, ಬಿಆರ್ಪಿ ಡ್ಯಾಂ, ಲಿಂಗನಮಕ್ಕಿ ಡ್ಯಾಂ ಹೀಗೆ ಅನೇಕ ನೀರಿನ ಮೂಲಗಳನ್ನು ಕಾಣಬಹುದಾಗಿದೆ.


ಜೋಗ ಜಲಪಾತದೇಶದಲ್ಲೇ ಅತ್ಯಂತ ಪ್ರಸಿದ್ದಿ ಪಡೆದಿರುವ ಜಲಪಾತ ಇದಾಗಿದೆ. ಶಿವಮೊಗ್ಗ ನಗರದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಶರಾವತಿ ನದಿ ಇಲ್ಲಿ ವಿಸ್ಮಯವನ್ನೇ ನಿರ್ಮಿಸಿದೆ. ರಾಜ, ರಾಣಿ, ರೋರರ್ ಹಾಗೂ ರಾಕೇಟ್ ನಾಲ್ಕು ಭಾಗಗಳ ಮೂಲಕ 900 ಅಡಿ ಎತ್ತರದಿಂದ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ದೇಶ-ವಿದೇಶಗಳಿಂದ ಪ್ರವಾಸಿಗರು ವೀಕ್ಷಣೆಗೆ ದಿನೇ ದಿನೇ ಹರಿದು ಬರುತ್ತಿದ್ದಾರೆ. ಇಲ್ಲಿನ ಪ್ರವಾಸಕ್ಕೆ ಜುಲೈ ಇಂದ ಜನವರಿವರೆಗೆ ಉತ್ತಮ ಸಮಯ. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾಧನಾ ಕೇಂದ್ರ ಇಲ್ಲಿದೆ.

ವನಕೆ-ಅಬ್ಬೇ ಫಾಲ್ಸ್

ಅಬ್ಬೇ ಎನ್ನುವ ಹೆಸರನ್ನು ಸಾಮಾನ್ಯವಾಗಿ ಜಲಪಾತಗಳಿಗೆ ಕರ್ನಾಟಕದಲ್ಲಿ ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯೂ ಕೂಡಾ ಈ ಕೀರ್ತಿಗೆ ಪಾತ್ರವಾಗಿದೆ. ಈ ಜಲಪಾತ ಆಗುಂಬೆಯಿಂದ 4 ಕಿ.ಮೀ ದೂರದಲ್ಲಿದೆ. ಸೂರ್ಯಾಸ್ತ ಸಮಯಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ಈ ಫಾಲ್ಸ್ ಪ್ರಕೃತಿಯ ಹಸಿರು ಸ್ವೌಂದರ್ಯವನ್ನು ತನ್ನೊಳಗಿರಿಸಿಕೊಂಡಿದೆ.

ಅಚಕನ್ಯಾ ಫಾಲ್ಸ್

ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಅರಲ್ಸುರುಲಿ ಎಂಬಲ್ಲಿ ಕಾಣ ಸಿಗುತ್ತಿದೆ. ಕಣ್ಣಿಗೆ ತಂಪೆರೆಯುವ ಈ ಜಲಪಾತ ಶರಾವತಿ ನದಿಯಿಂದ ಈ ಜಲಪಾತ ರಚನೆಗೊಂಡಿದೆ.

ಹಿದ್ಲಮನೆ ಫಾಲ್ಸ್
ಹೊಸನಗರ ಸಮೀಪದ ನಿಟ್ಟೂರಿನ ಹತ್ತಿರ ಈ ಜಲಪಾತವನ್ನು ನೋಡಬಹುದು. ಗುಡ್ಡ-ಬೆಟ್ಟಗಳ ಮಧ್ಯದಿಂದ ಈ ಜಲಪಾತ ಮೌನವಾಗಿ ಹರಿಯುತ್ತಿದೆ.

ತುಂಗಾ ಅಣೆಕಟ್ಟು

ಶಿವಮೊಗ್ಗ ನಗರದಿಂದ 10 ಕಿಮೀ ದೂರದಲ್ಲಿನ ಗಾಜನೂರಿನಲ್ಲಿ ತುಂಗಾ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಸುತ್ತಮುತ್ತಲಿನ ರೈತರಿಗೆ ಈ ಡ್ಯಾಂ ಜೀವನಾಡಿಯಾಗಿದೆ.


ಲಿಂಗನಮಕ್ಕಿ ಡ್ಯಾಂ

ಜೋಗದಿಂದ 6 ಕಿಮೀ ದೂರದಲ್ಲಿ ಈ ಡ್ಯಾಂ ಅನ್ನು ಶರಾವತಿ ನದಿಗೆ ನಿರ್ಮಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1819 ಅಡಿ ಎತ್ತರದಲ್ಲಿ ಈ ಅಣೆಕಟ್ಟನ್ನು ಮಾಡಲಾಗಿದೆ. ಇಲ್ಲಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಯುನಿಟ್ ನಿರ್ಮಿಸಲಾಗಿದೆ.


ದರ್ಶನ್ ಬಿ.ಎಂ

ಪತ್ರಿಕೋದ್ಯಮ ವಿದ್ಯಾರ್ಥಿ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

3 comments:

Anonymous said...

good....innu tumba falls ide shimoga dist.alli,adannu include madabekittu

Anonymous said...

Nice...

Anonymous said...

Thumba chennagide.
Good collection.. ella jillegaladdu innu munde bariri..

Manu Shanbhog..

Post a Comment