ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಅಂತರ್ಜಾಲ ತಾಣಕ್ಕೆ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಚಾಲನೆ ನೀಡಿದರು. ಬದಲಾವಣೆಯ ಕಾಲ ಘಟ್ಟದಲ್ಲಿ ಆಧುನಿಕತೆಯ ಜೊತೆ ಜೊತೆಗೆ ಸ್ಪಂದಿಸುತ್ತಾ ಸಂಪ್ರದಾಯವನ್ನು ಮರೆಯದೆ ಮುನ್ನಡೆಯುವುದು ಅತೀ ಅಗತ್ಯ ಎಂದು ಅವರು ಕರೆನೀಡಿದರು. ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಹತ್ತನೇ ವರುಷದ ಆಳ್ವಾಸ್ ನುಡಿಸಿರಿಯನ್ನು ಜಾಗತಿಕ ಮಟ್ಟದಲ್ಲಿ ನಡೆಸಲು ಈಗಾಗಲೇ ಚಿಂತನೆ ನಡೆಸಲಾಗಿದೆ.ಅದಕ್ಕಾಗಿ ಇದೀಗ ಅನಾವರಣಗೊಂಡ ಅಂತರ್ಜಾಲ ತಾಣ ಒಂದು ಉತ್ತಮ ತಳಹದಿಯನ್ನು ರೂಪಿಸಿದೆ ಎಂದರು. ವೆಬ್ ಸೈಟ್ ನ ರೂವಾರಿ ಹರೀಶ್ ಕೆ.ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಎಲ್ ಜೆ.ಫೆರ್ನಾಂಡೀಸ್ ವಂದಿಸಿದರು.

0 comments:

Post a Comment