ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು.ಕಾಂ ಸಂಡೇ ಸ್ಪೆಷಲ್
ಹೌದು... ಜಲಧಾರೆಗಳ ನಾಡು ದೇಗುಲಗಳ ಬೀಡೆಂದು ದೊಡ್ಡದೊಡ್ಡ ಫಲಕಹಾಕಿರೋ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸ್ವಕ್ಷೇತ್ರವಾಗಿರೋ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ತಾವರೆಕೊಪ್ಪ ಹುಲಿ - ಸಿಂಹ ಧಾಮದಲ್ಲಿರುವ ಪ್ರಾಣಿಗಳು "ಸೇಫ್" ಆಗಿಲ್ಲ!!!
ಖಂಡಿತ ಅಚ್ಚರಿಯಾಗೋದ್ರಲ್ಲಿ ಸಂದೇಹವೇ ಇಲ್ಲ. ತಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಫಾರೆಸ್ಟ್ ಆಫೀಸರ್ ಎಚ್.ಆರ್ .ಹೀರೇಮಟ್ ಪ್ರಕಾರ 12ಹುಲಿಗಳಿವೆ.ಆ ಪೈಕಿ 7ಹೆಣ್ಣು .ಉಳಿದವು ಗಂಡು.4 ಸಿಂಹಗಳಿವೆ. ಆ ಪೈಕಿ 1ಮಾತ್ರ ಗಂಡು .ಮಿಕ್ಕವು ಹೆಣ್ಣು. ಉಳಿದಂತೆ 20 ಪ್ರಬೇಧಗಳ ವೈವಿಧ್ಯಮಯ ಪ್ರಾಣಿಗಳಿವೆ. ಒಂದಷ್ಟು ಪಕ್ಷಿಗಳೂ ಇವೆ. ದಿನಂಪ್ರತಿ ದೂರದೂರುಗಳಿಂದ ಪ್ರವಾಸಿಗರು ಈ ಧಾಮ ವೀಕ್ಷಣೆಗೆ ಆಗಮಿಸುತ್ತಾರೆ.ವಿದೇಶೀ ಪ್ರವಾಸಿಗರೂ ಬರ್ತಾರೆ. ಈ ಧಾಮದ ಒಳ ಪ್ರವೇಶಿಸಬೇಕಾದರೆ ಒಬ್ಬರಿಗೆ ರು.50 ಪ್ರವೇಶ ಶುಲ್ಕ. ಕ್ಯಾಮರಾ ಇದ್ದರೆ ಅದಕ್ಕೆ ಹೆಚ್ಚುವರಿ.ಸಫಾರೀ ಹೋಗೋದಾದ್ರೆ ಮತ್ತೆ 50ರು.ಕ್ಯಾಮರಾಕ್ಕೆ ಬೇರೆ.ಇರಲಿ...
ಆದ್ರೆ ವಿಷ್ಯಾ ಇರೋದು ಅದಲ್ಲ.ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ತಾವರೆಕೊಪ್ಪ ಹುಲಿ - ಸಿಂಹ ಧಾಮ ಇದೆಯಾದರೂ ಆ ಪ್ರಾಣಿಗಳು ಇಲ್ಲಿ ಸೇಫಾಗಿಲ್ಲ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡೋದು ಸಹಜ. ಸಫಾರೀ ವಾಹನದಲ್ಲಿರುವ ಈ ಧಾಮದ ಸಿಬ್ಬಂದಿಯ ಪ್ರಕಾರ ಇಲ್ಲಿ ಒಂದೇ ಒಂದು ಸಿಂಹ ಇದೆ.ಅದೂ ಹೆಣ್ಣು ಸಿಂಹ.ಪ್ರಾಯ 19ವರುಷ.

ಆ ಸಿಂಹವನ್ನು ನೋಡಿದ್ರೆ ಇನ್ನೇನು ಇಂದೋ... ನಾಳೆಯೋ ಎಂಬಂತಾಗಿದೆ. ಅದರ ಹಿಂಭಾಗದಲ್ಲಿ ದೊಡ್ಡದಾದ ಗಾಯವೊಂದಾಗಿದೆ.ನೋವಿನಿಂದ ನರಕ ಯಾತನೆ ಅನುಭವಿಸುತ್ತಿದೆ. ಇಲ್ಲಿರೋ ಹುಲಿಗಳ ಪೈಕಿ ದೊಡ್ಡ ಹುಲಿಯೊಂದರ ಎಡ ಭುಜದಲ್ಲಿ ಬೃಹತ್ ಗಾಯವಾಗಿದ್ದು ಅದರ ಆರೋಗ್ಯ ಸ್ಥಿತಿಯೂ ಅಷ್ಟೊಂದು ಉತ್ತಮವಾಗಿದೆ ಎಂದರೆ ನಂಬಲಾಗುತ್ತಿಲ್ಲ.ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆ ಈ ಧಾಮದೊಳಗಿದೆ. ಮಾಂಸಾಹಾರಿ ಪ್ರಾಣಿಗಳಿಗೆ ಸೂಕ್ತ ಆಹಾರ ಕಾಲ ಕಾಲಕ್ಕೆ ನೀಡಲಾಗುತ್ತದೆ ಎಂಬ ಮಾತು ಫೋರೆಸ್ಟ್ ಆಫೀಸರ್ ಅವರಿಂದ ದೊರಕುತ್ತಿದೆ.

ಒಟ್ಟಿನಲ್ಲಿ ಈ ಧಾಮ ವನ್ಯಪ್ರಾಣಿಗಳಿಗೆ ಅಷ್ಟಾಗಿ "ಸೇಫ್" ಆಗಿಲ್ಲ ಎಂಬುದಂತೂ ಸತ್ಯ.

1 comments:

Anonymous said...

ಮೊದಲೆಲ್ಲ ತುಂಬಾ ಕೇರ್ ತಗೊತಾ ಇದ್ರು. ಈಗ ಯಾಕೆ ಹಾಗೆ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಹೀಗೇ ಆದ್ರೆ ಇನ್ನ ಸ್ವಲ್ಪ ದಿನಕ್ಕೆ ಈ ಲಯನ್ ಸಫಾರಿನ ಮುಚ್ಚಬೇಕಾಗುತ್ತದೆ.

ದರ್ಶನ್ ಶಿವಮೊಗ್ಗ,
ಆಳ್ವಾಸ್ ಕಾಲೇಜ್,
ಮೂಡುಬಿದಿರೆ

Post a Comment