ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನಮ್ಮ ಅಕ್ಕರೆಯ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿ. ವಿ. ಸದಾನಂದ ಗೌಡರು ತಮ್ಮಿಂದ ತಪ್ಪುಗಳಾದಾಗ ಎಚ್ಚರಿಸಿ ಎಂತ ಭಾಷಣಗಳಲ್ಲಿ ಹೇಳುತ್ತಿರುವುದರಿಂದ ನಾನೀಗ ಆ ಕೆಲಸವನ್ನು ಮಾಡುತ್ತಿದ್ದೇನೆ. ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆಯ ಬೆಳ್ಳಿಹಬ್ಬದಲ್ಲಿ ದೀಪ ಬೆಳಗಿಸಿದ ಅವರು ತಾನು ಮುಖ್ಯ ಮಂತ್ರಿ ಆಗಿರುವಷ್ಟು ಕಾಲ ತನ್ನ ಒಂದು ತಿಂಗಳ ಸಂಬಳವನ್ನು ಆ ಶಾಲೆಗೆ ನೀಡುವುದಾಗಿ ಘೋಷಿಸಿದರು. ಜನರೆಲ್ಲಾ ಚಪ್ಪಾಳೆ ತಟ್ಟಿದರು. ಎಲ್ಲರಿಗೂ ಖುಷಿಯಾಯಿತು. ಆದರೆ ಇದು ಸರಿಯೆ ಎಂಬುದೀಗ ಪ್ರಶ್ನೆ. ಏಕೆಂದರೆ ಇದೊಂದು ತಪ್ಪು ಸಂದೇಶ ನೀಡಿದಂತಾಗುತ್ತದೆ.ಸನ್ಮಾನ್ಯ ಮುಖ್ಯ ಮಂತ್ರಿಗಳ ಸಂಬಳ ಎಷ್ಟೆಂದು ನನಗೆ ಗೊತ್ತಿಲ್ಲ. ಅದು ಎಷ್ಟೇ ಇರಲಿ, ಒಂದೇ ರುಪಾಯಿ ಆಗಿರಲಿ. ಆದರೆ ಅವರಿಂದ ದೇಣಿಗೆ ಪಡೆಯುವುದೆಂದರೆ ಅದಕ್ಕೆ ಗೌರವ ಬೇರೆಯೆ ಇದೆ. ಇದೀಗ ಆ ಗೌರವವು ಒಂದು ಆಂಗ್ಲ ಮಾಧ್ಯಮ ಶಾಲೆಗೆ ಹೋಯಿತಲ್ಲಾ! ಇದು ಚಿಂತಿಸ ತಕ್ಕ ವಿಚಾರ. ಅದರ ಬದಲು ಅವರು ಅದೇ ವೇದಿಕೆಯಿಂದ ಅದೇ ಸಂಸ್ಥೆ ನಡೆಸುತ್ತಿರುವ 'ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ' ಕೊಡುತ್ತೇನೆಂದಿದ್ದರೆ ಕನ್ನಡಿಗರೆಲ್ಲ ಆನಂದಿಸ ಬಹುದಿತ್ತು. ಕರ್ನಾಟಕದ ಆಡಳಿತದ ಚುಕ್ಕಾಣಿ ಹಿದಿದ ಅವರು ನೀಡುವ ಒಳ್ಳೆಯ ಸಂದೇಶವಾಗುತ್ತಿತ್ತು. ಆದರೆ ನಮ್ಮ ಕರುನಾಡಿನ ಮುಖ್ಯ ಮಂತ್ರಿ ಕನ್ನಡದ ಕರುಳು ಹಿಂಡುತ್ತಿರುವ ಆಂಗ್ಲ ಮಾಧ್ಯಮಕ್ಕೆ ಶಕ್ತಿ ನೀಡುತ್ತಿರುವುದು ಎಂತಹ ವಿಪರ್ಯಾಸ! ಇದು ಎಡವಿದ್ದೇ ಅಲ್ಲವೇ? ಇದನ್ನು ಇನ್ನಾದರೂ ಸರಿಪಡಿಸ ಬಹುದು. ಮನಸ್ಸಿದ್ದರೆ ಕೊಡುವವರಿಗೂ ಪಡೆ0ುುವವರಿಗೂ ನಷ್ಟವಿಲ್ಲ.

- ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ

0 comments:

Post a Comment