ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:22 PM

ರಹಸ್ಯ

Posted by ekanasu

ಈ ಕನಸು ಅವಾರ್ಡ್
ಎದೆಯಲೊಂದು ಮಾತಿದೆ
ಅದ ನಾ ಹೇಗೆ ಹೇಳಲಿ
ನೀ ತಿಳಿದುಕೋ ಗೆಳೆಯಾ
ನನ್ನ ಕಿರು ನೋಟದಲಿ
ನೂರಾರು ಕನಸಿದೆ...


ನಾಲಿಗೆಯ ತುದಿಯಲಿ
ಕಟ್ಟಿಟ್ಟ ಮಾತಿದೆ
ಅದ ನಾ ಹೇಗೆ ಹೇಳಲಿ
ನೀ ಅರಿತುಕೋ ಇನಿಯಾ


ನನ್ನ ತುಟಿಯಂಚಿನ
ಪಿಸುಧ್ವನಿಯ ಸನ್ನೆಯಲಿ
ಕೋಟಿ ಮಾತಿದೆ ಕಣ್ಣಲಿ
ನಾ ಹೇಗೆ ಹೇಳಲಿ ನಿನ್ನೊಡನೆ
ಧೈರ್ಯ ಇಲ್ಲ ಒಲವೇ
ನನ್ನೀ ಈ ಗುಂಡಿಗೆಯಲಿ...

- ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್. ಡಿ. ಎಂ. ಕಾಲೇಜು ಉಜಿರೆ

3 comments:

Sudhakar said...

Nice one...

Prmod said...

good...

vignesh said...

very nice....

Post a Comment