ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಡಾ.ಕಲಬುರ್ಗಿ ಅವರಿಗೆ 'ಆಳ್ವಾಸ್ ನುಡಿಸಿರಿ' ಆಮಂತ್ರಣ

ಮೂಡಬಿದಿರೆ : ಮೂಡಬಿದಿರೆಯಲ್ಲಿ ನವೆಂಬರ್ 11,12 ಮತ್ತು 13ರಂದು ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಪದಾಧಿಕಾರಿಗಳು ತೆರಳಿ ಸಮ್ಮೇಳನಕ್ಕೆ ಆಮಂತ್ರಣ ನೀಡಿದರು.ಆಳ್ವಾಸ್ ಸಮೂಹ ಸಂಸ್ಥೆಗಳ ಮಾಧ್ಯಮ ಸಂಪರ್ಕಾಧಿಕಾರಿ, ನುಡಿಸಿರಿ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ಡಾ.ಧನಂಜಯ ಕುಂಬ್ಳೆ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರುಗಳಾದ ಧೀರೇಂದ್ರ ಜೈನ್, ನಿನ್ಯಾನಂದ ಗಾಣಿಗ ಈ ಸಂದರ್ಭದಲ್ಲಿದ್ದರು.
ಆಳ್ವಾಸ್ ನುಡಿಸಿರಿಯ ಧಾರಾವಾಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ.ಜಿನದತ್ತ ಹಡಗಲಿ, ಸುಜಾತಾ ಹಡಗಲಿ, ಡಾ.ಶಿವಾನಂದ ಗಾಳಿ, ವೀಣಾ ಸಂಕನಗೌಡರ ದಂಪತಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಆಳ್ವಾಸ್ ನುಡಿಸಿರಿ 2011ರ ಸ್ವಾಗತ ಸಮಿತಿಯ ವತಿಯಿಂದ ಈ ಸಂದರ್ಭದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಪುಷ್ಪಗುಚ್ಛ ನೀಡಿ, ಹೂಹಾರ ಸಮರ್ಪಿಸಿ, ಫಲ,ಪುಷ್ಪಗಳೊಂದಿಗೆ, ಸಾಂಪ್ರದಾಯಿಕ ಸನ್ಮಾನ ಗೌರವಗಳನ್ನು ಸಲ್ಲಿಸಲಾಯಿತು.
ಕನ್ನಡ ಮನಸ್ಸು - ಸಂಘರ್ಷ ಮತ್ತು ಸಾಮರಸ್ಯ ಪರಿಕಲ್ಪನೆ ಪ್ರಸ್ತುತವೂ ಹೌದು. ಈ ಒಟ್ಟು ಚಿಂತನೆಯನ್ನೊಳಗೊಂಡು ಸರ್ವಾಧ್ಯಕ್ಷತೆಯ ಭಾಷಣ ಮಾಡಲಿದ್ದೇನೆ. ಆಳ್ವಾಸ್ ನುಡಿಸಿರಿ ಒಂದು ಮಾದರಿ ಸಮ್ಮೇಳನ. ಅದು ಕನ್ನಡಿಗರ ಮನ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಕಲಬುರ್ಗಿ ಹೇಳಿದರು.

0 comments:

Post a Comment