ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಹೂವೂ...ಚೆಲುವೆಲ್ಲಾ ತಾನೆಂದಿತೂ... ಹೌದು...ಇಳೆಗೆ ಮಳೆ ಸುರಿಯುವ ಸಮಯ...ಭೂ ತಾಯಿ ತನ್ನೊಡಲೊಳಗಿನ ಪುಟ್ಟ ಪುಟ್ಟ ಜೀವಗಳಿಗೆ ಜನ್ಮ ನೀಡುವ "ಪ್ರಸವ"ಸಂತತ... ಮಲೆನಾಡಿನ ಮಳೆಗಾಡಿನ ಸೌಂದರ್ಯ ಇಮ್ಮಡಿಯಾಗುವ ಕಾಲ... ಹೌದು...ಇದೀಗ ಮಳೆಯ ಅಬ್ಬರಕ್ಕೆ ಕೊಂಚ ಬ್ರೇಕ್...ಚುಮುಚುಮು ಚಳಿಗೆ ಮಲೆನಾಡು ಮೈಹೊರಳಿಸಿದೆ...ಮಂಜ ಹನಿಗಳು ಹಸಿರೆಲೆಗಳ ಮೇಲೆ ಕಂಗೊಳಿಸತೊಡಗಿವೆ...ಬಿಡುವಿಲ್ಲದ ಕೆಲಸದಿಂದ ಕೆಲ ದಿನಗಳ ಕಾಲ ರಜೆಪಡೆದು ಮಲೆನಾಡ ಮಡಿಲು ಶಿವಮೊಗ್ಗಕ್ಕೆ ಭೇಟಿನೀಡಿದೆ...ತಣ್ಣನೆಯ ವಾತಾವರಣದೊಳು ವರ್ಣ ವೈವಿಧ್ಯದ ಪುಷ್ಪಸುಂದರಿಯರ ಸ್ವಾಗತ...


ಮಲೆನಾಡಿನ ಪ್ರತಿಯೊಂದು ಹಳ್ಳಿಮನೆಗಳಲ್ಲಿ ವಯ್ಯಾರದ ಬೆಡಗಿಯರ ನರ್ತನ ಸಾಮಾನ್ಯ... ಬಣ್ಣ ಬಣ್ಣದ ಬಣ್ಣದ ರಾಣಿಗಳು ಹಿತವಾದ ಗಾಳಿಗೆ ಮೈಯೊಡ್ಡಿ ಬಳುಕಿ ಬಾಗಿ ಸೌಂದರ್ಯವನ್ನು ಮೊಗೆ ಮೊಗೆದು ನೀಡುತ್ತಾ ನೋಡುಗರನ್ನು ಮೋಡಿ ಮಾಡುವ ಪರಿ ಅವರ್ಣನೀಯ...
ವಿವಿಧ ರೀತಿಯ ವಿವಿಧ ಪ್ರಕಾರಗಳ ಸೇವಂತಿಗೆ, ಎರವಂತಿಗೆ, ನಾಗದಾಳಿ, ಜೀನಿಯಾ, ಡೇಲ್ಯಾ...ವರ್ಣವೈವಿಧ್ಯದ ದಾಸಾವಳ , ತಾವರೆ ಹೀಗೆ ಯಾವೆಲ್ಲಾ ಪುಷ್ಪಪ್ರಬೇಧಗಳಿವೆಯೋ ಅವೆಲ್ಲವೂ ಈ ಮಲೆನಾಡಿನ ಮನೆಯಂಗಳದಲ್ಲಿ ಕಾಣಸಿಗುತ್ತವೆ...ಮಲೆನಾಡಿಗರು ಆತಿಥ್ಯಕ್ಕೆ ಹೇಳಿಮಾಡಿಸಿದ ಜನ. ಅವರಂಗಳದಲ್ಲಿ ಬೆಳೆದ ಹೂವಿನ ಸೌಂದರ್ಯದಂತೆ ಆ ನಾಡಿನ ಮನೆ ಮಂದಿಯ ಮನಸ್ಸೂ ಅಷ್ಟೇ ವಿಶಾಲ...ಚುಮು ಚುಮು ಚಳಿಗೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ಮಲೆನಾಡ ಮನೆಯಂಗಳದಿ ಅರಳಿನಿಂತ ಹೂಗಳ ನೋಡುವುದೇ ಒಂದು ಅಂದ...ಚೆಂದ...

- ಸೌಮ್ಯ ಸಾಗರ.

0 comments:

Post a Comment