ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:04 PM

ಮಡಿಲು

Posted by ekanasu

ಈ ಕನಸು ಅವಾರ್ಡ್
ಮಗುವೇ ನೀನಳುತಿರೆ
ಜಗವೆಲ್ಲ ನನ್ನದಾಗಬಾರದೇ?
ಇದೇ ನಿನ್ನ ತಾಯ ಬಯಕೆ
ಇದೇ ನಿನ್ನೊಲವಿನ ಹಾರೈಕೆ!


ನಿನ್ನ ನೋವ ಕಂಡು
ನನ್ನ ನೋವ ಮರೆಯುತಿರಲು
ಸುಖ ಕಂಡೆ ಈ ಬಾಳಲ್ಲಿ
ಸಾರ್ಥಕವಾಯಿತು ನನ್ನೀ ಜೀವನವಿಲ್ಲಿ!

ನನ್ನ ತೋಳತೆಕ್ಕೆಯಲಿ
ಹಾಯಾಗಿ ನೀ ಮಲಗಿರಲು
ನಾನನುಭವಿಸಿದೆ ಸ್ವರ್ಗ ಸುಖ
ಇದೇ ನನ್ನಲುಮೆಯ ಅಮೃತ ಶಖ
ನೀ 'ಅಮ್ಮಾ...' ಎನ್ನಿತಿರೆ
ನನ್ನೀ ಕರುಳು ಚುರುಕ್ ಎನಲು

ಪ್ರೀತಿಯ ನಗೆಯೊಂದು ನಿನ್ನಿಂದ ಹೊರಬರಲು
ಕಣ್ಣಿಂದರಳಿತು ಸಂತಸದ ಹೊನಲು
ನೀ ಜನಿಸಿರಲು ನನ್ನೀ
ಬಾಳು ಬೆಳಕಾಯಿತು
ನಾ ಹರಸುವೆ ಈ ಜಗ
ನಿನ್ನಿಂದ ಬೆಳಗಲೆಂದು

ನೀ ಈ ಜಗಕೆ ಬೆಳಕಾಗು
ಮನೆಯ ಜ್ಯೋತಿಯಾಗು
ನನ್ನ ಬಾಳ ಉಸಿರಾಗು
ನಾಡಿನೆಲ್ಲೆಡೆ ಕೀರ್ತಿಗೆ ಹೆಸರಾಗು
ನಾ ಹರಸುತಿರೆ ನಿನ್ನ ಬಾಳು ಬೆಳಗಲೆಂದು
ನಾ ಬಯಸುತಿರೆ ಜಗವನ್ನು ಜಯಿಸೆಂದು
ನನ್ನೀ ಆಶಾಗೋಪುರ ಕುಸಿಯದಿರಲಿ
ಸುಂದರ ಬದುಕಿನ ಪಥ ನಿನಗಿರಲಿ- ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್. ಡಿ. ಎಂ. ಕಾಲೇಜು ಉಜಿರೆ

2 comments:

sumithra said...

very nice really its a heart touching words of a mom

Unknown said...

hi vismita sister
totendra s makal
ma journalisam
gug
phone 9886456417
totendramkl26@gmail.com

Post a Comment