ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ರಾಜಕೀಯ ವಲಯವು ಸಹ ಇಂದು ತಲ್ಲಣ ಗೋಂಡಿದೆ. ಹಲವು ರಾಜಕೀಯನಾಯಕರುಗಳು ವಿವಿಧ ಹಗರಣಗಳಲ್ಲಿ ಸಿಲುಕಿ ಒಬ್ಬರ ಹಿಂದೆ ಒಬ್ಬರಂತೆ ಸೆರೆಮನೆ ಸೇರುತ್ತಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿಯು ಎಚ್ಚರಿಕಕೆಯ ಘಂಟೆ ಬಾರಿಸಿದೆ. ಆದರಲ್ಲಿಯು ಮಾಜಿ ಕೇಂದ್ರ ಸಚಿವರು , ಮಾಜಿ ಮುಖ್ಯ ಮಂತ್ರಿಗಳು ಬಂಧನವಾಗಿರುವುದು ರಾಜಕೀಯವಲಯವನ್ನು ಮತ್ತಸ್ಟು ಚಿಂತಿಸುವಂತೆ ಮಾಡಿದೆ. ಇವರೊಂದಿಗೆ ಸಿನಿಮಾ ನಾಯಕರು ಸಾಮಾಜದ ಉನ್ನತ ವ್ಯಕ್ತಿ ಬಂಧನ ದಿಂದ ಕಾನೂನಿನ ಮುಂದೆ ಎಲ್ಲರು ಸಮಾನರು ಎಂದು ಸಾಮಾನ್ಯ ಜನತೆಗೆ ಈಗ ಅರಿವಾಗುತ್ತಿದೆ.ಇದು ಸಂತೋಷದ ವಿಷಯ. ಆದರೆ ಈ ರಾಜಕೀಯ ನಾಯಕರು ಬಂಧನದ ನಂತರ ಸೆರೆಮನೆಯಲ್ಲಿ ಇರಲು ಬಯಸದೆ ಅನಾರೋಗ್ಯದ ಕಾರಣವನ್ನು ನೀಡಿ ಆಸ್ಪತ್ರೇ ಸೇರುತ್ತಿದ್ದಾರೆ. ಬಂಧನದ ತನಕ ಇರದ ಅನಾರೋಗ್ಯ ಬಂಧನದ ನಂತರ ಬರುವದು ಏಕೆ? ಇದು ನಾಟಕವೇ? ಎಂಬ ಪ್ರಶ್ನೆ ಸಮಾಜದಲ್ಲಿ ಎಲ್ಲರನ್ನು ಕಾಡುತ್ತಿದೆ. ಇದುವರೆವಿಗೂ ನಮ್ಮ ರಾಜ್ಯದಲ್ಲಿ ಬಂದನವಾದ ಏಲ್ಲಾ ರಾಜಕೀಯ ನಾಯಕರ ವಿಷಯದಲ್ಲಿಯು ಇದು ನಡೆದಿದ್ದೆ,.
ಸಾಮಾನ್ಯ ವ್ಯಕ್ತಿಯಂತೆ ಸೆರೆಮನೆಯಲ್ಲಿ ಇರಲು ಇವರಿಂದ ಸಾದ್ಯವಾಗುತ್ತಿಲ್ಲ. ಇದರಿಂದ ಅನಾರೋಗ್ಯದ ಕಾರಣನೀಡಿ ಆಸ್ಪತ್ರೆಗೆ ಸೇರುತ್ತಿದ್ದಾರೆಯೇ ಎಂಬುದೆ ತಿಳಿಯದು. ಸಮಾಜದ ಸೇವಕರೆ ಈ ರೀತಿ ಮಾಡುತ್ತಿರುವುದು ಸರೀಯಿಲ್ಲ. ಇವರನ್ನು ನೋಡಿ ಸಾಮಾನ್ಯ ಜನತೆಯು ಇದೇ ಚಾಳಿಯನ್ನು ಮುಂದುವರೆಸಿದರೆ ಏನುಮಾಡುವುದು. ಅವರು ಆಡುತ್ತಿರುವುದು ನಾಟಕ ಎಂದು ತಿಳಿದರೆ ಅಂತಹ ವ್ಯಕ್ತಿಗಳಿಗೆ ಸಾಮಾನ್ಯ ಜನತೆಗೆ ನೀಡುವ ಶಿಕ್ಷೆಗಿಂತ ಕಠಿಣವಾದ ಶಿಕ್ಷೆನೀಡಬೇಕು. ಈ ಮೂಲಕ ಮುಂದೆ ಬರುವ ಏಲ್ಲರಿಗೂ ಏಚ್ಚರಿಕೆ ನೀಡಬೇಕು.
.
ಶ್ರೀನಿಧಿ ಶ್ರೀಕರ್
ಅಂತಿಮ ಎಂ.ಸಿ.ಜೆ
ಮಾನಸ ಗಂಗೋತ್ರಿ
ಮೈಸೂರು.

2 comments:

Prmod said...

chennagide baraha, nijavaglu natakave idu

Prmod said...

really....

Post a Comment