ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು: ಪನೂನ್ ಕಾಶ್ಮೀರ ಅಂದರೆ ಕಾಶ್ಮೀರದಿಂದ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಸಂಘಟನೆಯಾಗಿರುತ್ತದೆ. ಇವತ್ತು ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಮತ್ತು ಬದ್ರತಾ ಪರಿಸ್ತಿತಿ ಗಂಭೀರ ಮತ್ತು ಸೂಕ್ಷ್ಮವಾಗಿದೆ. ಪಾಕಿಸ್ಥಾನದಿಂದ ಭಯೋತ್ಪಾದಕರು ಹಾಗೂ ಧಾಳಿಕೋರರು ನುಸುಳಿ ಬರುವುದು ಮತ್ತೆ ಪ್ರಾರಂಭವಾಗಿದೆ. ಹಲವಾರು ಭದ್ರತಾ ಪಡೆಗಳ ಯೋಧರು ನುಸುಳುಕೋರರಿಂದ ಹತ್ಯೆಯಾಗುತ್ತಿದ್ದಾರೆ. ಸ್ವದೇಶದಲ್ಲಿ ಜನಾಂಗೀಯ ಧಾಳಿಗೆ ತುತ್ತಾಗಿರುವ ಕಾಶ್ಮೀರಿ ಪಂಡಿತರು ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ವಾಸಿಸುವದು ಮುಂದುವರೆದಿದೆ ಎಂದು ಪನೂನ ಕಾಶ್ಮೀರ ಸಂಘದ ಅಧ್ಯಕ್ಷ ಅಶ್ವಿನಿ ಕುಮಾರ ಚ್ಯುಂಗೋ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಶ್ಮೀರದಿಂದ ಓಡಿಸಲ್ಪಟ್ಟಿರುವ ಪಂಡಿತರು ಭಾರತದ ಹಲವಾರು ರಾಜ್ಯಗಳಲ್ಲಿ ಆಶ್ರಯ ಪಡೆಯುತಿದ್ದಾರೆ. ಪನೂನ್ ಕಾಶ್ಮೀರ ಸಂಘಟನೆ ದೇಶಾದ್ಯಂತ,ಕಾಶ್ಮೀರ ಹಾಗೂ ಅಲ್ಲಿನ ಮೂಲ ನಿವಾಸಿಗಳಿಂದ ಪಂಡಿತರ ದುಸ್ಥಿತಿಯ ಕುರಿತು ಜಾಗೃತಿ ಉಂಟು ಮಾಡುತ್ತಿದೆ.ಮತ್ತು ಇಲ್ಲಿನ ಪದಾಧಿಕಾರಿಗಳು ಭಾರತದಾದ್ಯಂತ ಪ್ರವಾಸ ಮಾಡಿ ಕಾಶ್ಮೀರ ಸ್ಥಿತಿಯ ಬಗ್ಗೆ ಜಾಗೃತಿ ಉಂಟು ಮಾಡುತ್ತಿದ್ದಾರೆ ಎಂದರು.
ಪಾಕಿಸ್ಥಾನವು ಭಯೋತ್ಪಾದಕರನ್ನು ಹಾಗೂ ಅವರ ತಾಣಗಳನ್ನು ಮತ್ತು ಶಿಬಿರಗಳನ್ನು ರಕ್ಷಿಸುತ್ತಿದೆ, ಪ್ರೋತ್ಸಾಹಿಸುತ್ತಿದೆ ಮತ್ತು ಭಾರತದ ವಿರುದ್ದ ಉಗ್ರ ಕೃತ್ಯಗಳಿಗೆ ಮತ್ತೆ ಚಾಲನೆ ನೀಡಿದೆ. ಆದರೂ ಭಾರತ ಸರಕಾರ ಲಕ್ವ ಹೊಡೆದವರಂತೆ ನಿಷ್ಕ್ರಿಯವಾಗಿ ಕಾಲಹರಣ ಮಾಡುತ್ತಿದೆ ಎಂದವರು ಹೇಳಿದರು.

0 comments:

Post a Comment