ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಸ್ವಂತ ಪತ್ನಿಗೇ ಹಲ್ಲೆ ನಡೆಸಿ ಕಳೆದ 29 ದಿನಗಳಿಂದ ಜೈಲುವಾಸ ಅನುಭವಿಸಿ ಬಿಡುಗಡೆಹೊಂದಿದ ಸಿನೆಮಾ ನಟ ದರ್ಶನ್ ಬಿಡುಗಡೆಯ ಸುದ್ದಿಯನ್ನು ಸುದ್ದಿವಾಹಿನಿಗಳು ವೈಭವೀಕರಿಸಿದ್ದು ನೋಡಿದರೆ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ.


ದರ್ಶನ್ ಏನೋ ಮಹಾ ಸಾಧನೆ ಮಾಡಿಯೋ ಅಥವಾ ಇಡೀ ದೇಶಕ್ಕಾಗಿ ಜೈಲುವಾಸ ಅನುಭವಿಸಿ ಮರಳುತ್ತಿದ್ದಾನೆಯೋ ಎಂಬಂತೆ ಸುದ್ದಿವಾಹಿನಿಗಳ ವರದಿಗಾರರು ನೇರ(ಲೈವ್ ) ರಿಪೋರ್ಟಿಂಗ್ ಮಾಡುತ್ತಿರುವುದನ್ನು ನೋಡಿದರೆ ಅನ್ನಿಸುತ್ತಿತ್ತು.
ಸಿನಿ ತಾರೆಯರಿಗೆ ಅಭಿಮಾನಿಗಳು ಇರುತ್ತಾರೆ. ಪತ್ನಿಗೆ ಹಲ್ಲೆ ಮಾಡಿದ, ಅದಕ್ಕಾಗಿ ಶಿಕ್ಷೆ ಅನುಭವಿಸಿದ ವ್ಯಕ್ತಿಯೋರ್ವ ಮರಳಿ ಮನೆ ಸೇರುತ್ತಿದ್ದಾನೆ ಎಂಬುದನ್ನು ಅಷ್ಟೊಂದು ವೈಭವೀಕರಣಗೊಳಿಸುತ್ತಾ ಪ್ರತಿಯೊಂದು ಸುದ್ದಿವಾಹಿನಿಗಳೂ ಭಿತ್ತರಿಸಿರುವುದು ನಿಜಕ್ಕೂ ಅಸಹ್ಯ ಹುಟ್ಟಿಸುವಂತಿತ್ತು.

ಸಮಾಜದಲ್ಲಿ ಅದೆಷ್ಟೋ ಉತ್ತಮ ಕಾರ್ಯಗಳು ನಿರಂತರವಾಗುತ್ತಿರುತ್ತವೆ. ಸುದ್ದಿವಾಹಿನಿಗಳು ಪೈಪೋಟಿಯ ನೆಪದಲ್ಲಿ ಇಂತಹ ಸುದ್ದಿಗಳ ಬೆನ್ನು ಹತ್ತುವ ಬದಲಾಗಿ ಸಮಾಜಕ್ಕೆ ಬೇಕಾದಂತಹ, ಜನತೆಗೆ ಉಪಯೋಗವಾಗುವಂತಹ ಸುದ್ದಿಗಳತ್ತ ಗಮನ ಹರಿಸುವುದು ಒಳಿತು.

1 comments:

BIDIRE said...

ತುಂಬಾ ಅರ್ಥಪೂರ್ಣ ಲೇಖನ ಒಳ್ಳೆಯ ವೀಕ್ಷಕನಿಗೆ ಇಂತಹ ಪ್ರಶ್ನೆ ಕಾಡದೆ ಇರದು.....ಜನರಿಗೆ ದರ್ಶನ್ ಸಂಸಾರ ವಿಷಯ ಬೇಕಿಲ್ಲ......ಇಂತಹ ವರದಿಗಾರಿಕೆಯಿಂದಾಗಿ ಸಮಾಜದಲ್ಲಿ ನಡೆಯುವ ಅದೆಷ್ಟೋ ಘಟನೆಗಳು ಸುದ್ದಿಗಳು ವರದಿಯಾಗುತ್ತಿಲ್ಲ....ಸಮಾಜದ ಡೊಂಕನ್ನು ತಿದ್ದಲು ಹೋಗುತ್ತಿರುವ ಸುದ್ದಿವಾಹಿನಿಗಳು ಇಂತಹ ವಿಷಯಗಳನ್ನು ಅರಿತು ತಮ್ಮ ಕೊಂಕುಗಳನ್ನು ಸರಿಪಡಿಸಿಕೊಂಡರೆ ಮಾತ್ರ ಮಾಧ್ಯಮಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ.
ಯಶೋಧರ.ವಿ.ಬಂಗೇರ

Post a Comment