ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:39 PM

ಕಾವ್ಯ ಗುಚ್ಛ

Posted by ekanasu

ಭಾವನೆಗಳ ಹೊತ್ತಗೆ
ಹೊರುತ್ತಾ ಹೊರಟೆ
ಬರಹದ ಕನಸ
ಸಾಕಾರಕ್ಕಾಗಿ ಪರಿತಪಿಸಿದೆ
ನನಸಾಗಲೆಂದು ಆ ಕನಸು
ಇಂದು ಅದಕ್ಕೆಲ್ಲಾ
ಜೀವ ತುಂಬುತಿದೆ ಈ ಕನಸು
ಕಾರಣ ನನ್ನ ಭಾವನೆಗಳ
ಹೊತ್ತಗೆ e-ಕನಸು!
ಮೊಬೈಲ್ ಧಣಿಗಳು

ಎಲ್ಲಿ ನೋಡಿದರಲ್ಲಿ
ಹುಚ್ಚರ ಸಂತೆ
ಅವರಷ್ಟಕ್ಕೇ ಮಾತನಾಡುತ್ತಾರೆ
ಹರಟುತ್ತಾರೆ, ನಗ್ತಾರೆ
ತಂತಿಯೊಂದನ್ನು ಕಿವಿಗೆ
ತಗಲಿಸಿ ಸಾಗುತ್ತಾರೆ
ಅಯ್ಯಯ್ಯೋ!
ಹುಚ್ಚರಲ್ಲ ಕಣ್ರೀ
ಅದು ಮೊಬೈಲ್
ಸಾಚಾಗಳ ಕಂತೆ!


ಸ್ತ್ರೀ
ಮಾತೆಯಾಗಿ ಮಮತೆಯ
ಧಾರೆಯನ್ನೇ ಹರಿಸುವಳು
ವಾತ್ಸಲ್ಯದಿಂದ ಹರಸಿ
ಹೆಮ್ಮರದಂತೆ ಬೆಳೆಸುವಳು
ಪತ್ನಿಯಾಗಿ ಪ್ರೇಮದ
ಅಮೃತ ಸುಧೆಯನ್ನೇ ಸುರಿಸುವಳು
ಸಂಗಾತಿಯಾಗಿ ಸ್ಪೂರ್ತಿಯ
ಚಿಲುಮೆಯನ್ನೇ ಹರಿಸುವಳು
ಸೋದರಿಯಾಗಿ ಪ್ರೀತಿಯಿಂದ
ದಾರಿದೀಪ ತೋರುವಳು
ಒಡನಾಡಿಯಾಗಿ ಬಾಳಿಗೆ
ಜೀವಕಳೆ ತುಂಬುವಳು
ಗೆಳತಿಯಾಗಿ ನಗುವಿನಿಂದ
ಮನಕೆ ಸ್ಥೈರ್ಯ ಕೊಡುವಳು
ಕಷ್ಟ-ಸುಖಗಳಲೆಲ್ಲಾ ಭಾಗಿಯಾಗಿ
ಮನದ ದಿವ್ಯ ಚೇತನವಾಗುವಳು

- ವಿಸ್ಮಿತಾ ಎಡಮಂಗಲ

0 comments:

Post a Comment