ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:44 PM

ಅಸ್ಪೃಶ್ಯರು

Posted by ekanasu

ಕಳೆದ ಸಂಚಿಕೆಯಿಂದ...
ವೈದೇಹೀ ಕಾದಂಬರಿ...

`ಇದೀಗ ಕತೆ. ನೀನು ತೊಳೆಯುವುದಿಲ್ಲವೆಂದರೆ ಮತ್ತೆ ಯಾವ ಜನ ಉಂಟು ಇಲ್ಲಿ ?' `ಹೇಳಬೇಕಿತ್ತು ಅವನಿಗೇ...ಪ್ಯಾಂಟು ಶರಟು ಹಾಕಿದ ಕೂಡಲೇ ಕುಡಿದ ಲೋಟೆ ತೊಳೆದಿಡಬಾರದು ಅಂತಿದೆಯಾ? ಸಾಯಂಕಾಲ ಬರುತ್ತಾಳಲ್ಲ, ಅವನ ಅಕ್ಕ ಗಾಂಧಾರಿ! ತೊಳೆಯಲಿ.'
ಕಣ್ಣು ಬಾಯಿ ಮಾಡಿ ಉರಿಕಾರುತ್ತಿದ್ದಳು ರುಕ್ಕು. ಈಗೀಗ ಅವಳ ನಾಲಗೆಯೆಂದರೆ ಜಮನಾಲಗೆ.
`ಬಾಯಿ ಬಿಗಿ ಹಿಡಿ. ನಿನ್ನಿಂದಾಗುವುದಿಲ್ಲವಾ ? ನಾ ತೊಳೆಯುತ್ತೇನೆ. ಧಿಮಾಕೇ ? ' ಎಂದು ಸೀರೆ ನೆರಿಗೆ ಸೊಂಟಕ್ಕೆ ಸಿಕ್ಕಿಸಿಕೊಂಡು ಮುಂದೆ ಬಂದಳು ಸರೋಜ.
ರುಕ್ಕು ಮಾತು ಕಳೆದಳು. ಮುಖ ಹೊತ್ತುಕೊಂಡು ಲೋಟ ತೊಳೆದಿಟ್ಟಳು. ಗರಾಸಿಯಂತೆ ಮಾತಾಡುತ್ತ ಆಡುತ್ತ ಕೊನೆಗೆ ಅಳುವುದಕ್ಕೇ ಸುರುಮಾಡುವ ರುಕ್ಕುವಿನ ಕಣ್ಣುಗಳಲ್ಲಿ ಆಗಲೇ ಗಂಗಾ ಭವಾನಿ.


`ಆ ನಮೂನೆ ನಾಲಗೆ ಮಾಡುವವರು ಈ ನಮೂನೆ ಮರುಕಬಾರದು. ಬರೀ ಸೊಂಯ್ ಸೊಟ್ಟಿ' - ಎಂಬ ನಾಲಗೆ ಅವಳಿಗೆ ಕೇಳಿಸುವಂತೆಯೇ ನೆಗೆಯಿತು.
ಸ್ವಲ್ಪ ಹೊತ್ತಿನ ಮೇಲೆ ವಾಸುದೇವರಾಯರು ಒಳಗೆ ಬಂದರು. ನಡೆದದ್ದು ತಿಳಿಯಿತು. ಯಾರ ಬಾಯಿ ಒತ್ತಿ ಹಿಡಿದರೂ ಮಕ್ಕಳ ಬಾಯಿ ಒತ್ತಿ ಹಿಡಿಯಲಿಕ್ಕಾದೀತೇ...? `ಯಾರೇ ಆಗಲಿ . ಒಂದು ಸ್ಥಾನ ಪಡೆದುಕೊಂಡು ಬಂದರೆ ಗೌರವವುಂಟೇ ಉಂಟು. ಹೇಳಿಕೆ ಇಲ್ಲದೆ ಊಟಕ್ಕೆ ಬಂದು ಕುಳಿತುಕೊಳ್ಳುವ ನಾರಟೆ ಬ್ರಾಹ್ಮಣನಿಗಿಂತ ಕುರ್ಚಿ ಮೇಲೆ ಕೂಡುವ ಸ್ಥಾನವಂತ ೂಸನಿಗೆ ಹೆಚ್ಚು ಮರ್ಯಾದೆ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ.ಬ್ರಾಹ್ಮಣ ಎಂದರೆ ಎಂತದೆಂತ ನೀವು ಹೇಳುವುದು? ಮನುಷ್ಯ ಮನುಷ್ಯನನ್ನು ಗುರುತಿಸುವುದೇ ನೀತಿ ನಡತೆಯಿಂದ. ಹುಟ್ಟಿನಿಂದಲ್ಲ.'

ಅದಕ್ಕೆ ಗೌರಮ್ಮ `ಆಯಿತಪ್ಪ ಇದೆಲ್ಲ ಕೇಳಲಿಕ್ಕೆ ಮಾತ್ರ ರಂಗಾಗುತ್ತದೆ. ಕೇಳುವ. ಹೌದೆಂದೇ ಒಪ್ಪುವ. ಅವ ಹುಲ್ಲುಕೂಸಿನ ತಮ್ಮ ಎಂದು ನಂಬಲಿಕ್ಕಾಗಲಿಲ್ಲ ನಂಗೆ. ಅಷ್ಟು ಚೊಕ್ಕವಿದ್ದ. ಆದರೆ ಒಂದು. ತಾನೊಂದು ದೊಡ್ಡ ಸ್ಥಾನದಲ್ಲಿದ್ದ ಮೇಲೆ ತನ್ನ ಬಳಗಕ್ಕೆಲ್ಲ ಒಂದು ಊತದಂತಿರಬೇಕು. ಅವರಿಗೆಲ್ಲ ಬೇಕು ಅನ್ನಿಸಿಕೊಳ್ಳಬೇಕು. ಅವರನ್ನು ದೊಡ್ಡ ಸ್ಥಾನಕ್ಕೆ ಎಳೆಯಲು ಪ್ರಯತ್ನ ಮಾಡಬೇಕು. ಅದು ಬಿಟ್ಟು ತಾನೇ ದೊಡ್ಡ ಪುಳಕ ಅಂತಂದುಕೊಂಡರೆ! ಅದೆಂತದು ? ತನ್ನ ಯೋಗ್ಯತೆಗೆ ನೀನು ಸರಿಯಿಲ್ಲ ಅಂತ ತನ್ನ ಅಕ್ಕನಿಗೆ ಹೇಳುತ್ತಾನಂತೆ. ಅವನ ಹೆಂಡತಿ ತಾನು ದೊಡ್ಡ ಆಫೀಸರನ ಹೆಂಡತಿಯೆಂತ ಭಾರೀ ಜಂಭವಂತೆ!'

`ಅದು ಯಾರನ್ನು ಬಿಟ್ಟಿದೆ? ಮೇಲು ಜಾತಿಯವರನ್ನು ಬಟ್ಟಿದಿಯಾ? ಆ ಜಾಗವೇ ಅಂಥದ್ದು. ಏನೂ ಅಲ್ಲವೆಂತ ಗುಡಿಸಿ ಮೂಲೆಗೊತ್ತಲ್ಪಟ್ಟ ಒಂದು ಜಾತಿಯಲ್ಲಿ ತಾನೊಬ್ಬ ಮನುಷ್ಯ ಎಂಬುದನ್ನು ಆತ ಸಾಧಿಸಿಕೊಂಡಿದ್ದಾನೆ. ಜರ್ಬು ಸಹಜವಾಗಿಯೇ ಬಂತು...ಅದಿಲ್ಲದಿದ್ದರೆ ಘನತೆ ಇನ್ನೂ ಹೆಚ್ಚುತ್ತಿತ್ತು ಅನ್ನು...'

ಮುಂದುವರಿಯುತ್ತದೆ...

- ವೈದೇಹಿ.

0 comments:

Post a Comment