ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅದೊಂದು ದಿನ ಕಂಪ್ಯೂಟರ್ ಮುಂದೆ ಕೂತ್ಕೊಂಡು, ಏನೋ ಮಾಡ್ತಾ ಇದ್ದಾಗ ಕ್ಲಾಸ್ಮೇಟ್ ಸ್ಮಿತಾ ಕೈಯಲ್ಲಿ ಪೆನ್ಡ್ರೈವ್ ಹಿಡ್ಕೊಂಡು ಬಂದ್ಳು. ಅಷ್ಟೇ ಅಲ್ಲ, ಚಟಪಟ ಅಂತ ಮಾತಾಡಿ, ನಮ್ಮೆಲ್ಲರ ತಲೆ ತಿಂದು, ತಲೆಯಲ್ಲಿ ಏನಾದ್ರೂ ಹುಳ ಬಿಟ್ಟು ಹೋಗೋದು ಅವಳ ಅಭ್ಯಾಸ. ಆ ದಿನ ಬಂದವಳು, ಪೆನ್ಡ್ರೈವ್ ತಿರುಗಿಸಿಕೊಂಡು, ನಾವೆಲ್ಲಾ ಪೆನ್ಡ್ರೈವ್ ಪತ್ರಕರ್ತರಲ್ವಾ? ಅಂದ್ಳು. ಈ ಮಾತು ಮನಸ್ಸನ್ನು ನಾಟಿ, ಎಷ್ಟು ನಿಜ ಅಲ್ವಾ ಅಂತ ಅನ್ನಿಸ್ತು. ಯಾಕೆ ಗೊತ್ತಾ?ಹಿಂದೊಂದು ಕಾಲವಿತ್ತು. ಆಗ ಪೆನ್ಡ್ರೈವ್ ಇರಲಿಲ್ಲ, ಕಂಪ್ಯೂಟರ್ ಇರಲಿಲ್ಲ. ಆದರೂ ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಪತ್ರಿಕೆ ಬರುತ್ತಿತ್ತು. ಎಲ್ಲಾ ಪತ್ರಕರ್ತರಿಗೂ ಪೆನ್ನು ಶಸ್ತ್ರವಾಗಿತ್ತು. ಮೊಳೆಗಳನ್ನು ಜೋಡಿಸಿ, ಮುದ್ರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಇಷ್ಟೆಲ್ಲಾ ಕಷ್ಟಗಳ ನಡುವೆ ಪ್ರತಿದಿನ ಸರಿಯಾದ ಸಮಯಕ್ಕೆ ತಪ್ಪಿಲ್ಲದೆ ಪತ್ರಿಕೆ ಬರುತ್ತಿತ್ತು.

ಇತ್ತೀಚೆಗೆ ಪೆನ್ನು ಪುಸ್ತಕ ಮಾಯವಾಗಿದೆ. ನಾವು ಕಾಲೇಜಿನಲ್ಲಿ ಹೊರತರುವ ಪ್ರಾಯೋಗಿಕ ಪತ್ರಿಕೆಗೆ ಏನಾದರು ಬರೆಯೋದಾದ್ರೆ ಸೀದಾ ಕಂಪ್ಯೂಟರ್ ಬಳಸಿಯೇ ಟೈಪಿಂಗ್. ಆ ಬರಹ ನಮಗೆ ಬೇಕಾದರೆ ಪೆನ್ಡ್ರೈವ್ ನಲ್ಲಿ ಹಾಕಿಟ್ಟುಕೊಳ್ಳುತ್ತೇವೆ. ಅಷ್ಟೇ ಅಲ್ಲಾ, ಕಂಪ್ಯೂಟರ್ ಮುಂದೆ ಕುಳಿತುಕೊಂಡು ಪುಟವಿನ್ಯಾಸ ಮಾಡಿ ಪತ್ರಿಕೆ ಹೊರ ತರುತ್ತೇವೆ. ಇಲ್ಲಿ ಮೆರೆದಾಡುವುದು ಪೆನ್ಡ್ರೈವ್ ಗಳು ಮತ್ತು ಕಂಪ್ಯೂಟರ್ ಮಾತ್ರ. ಹಾಗಾಗಿಯೇ, ನಾವೆಲ್ಲಾ ಪೆನ್ಡ್ರೈವ್ ಪತ್ರಕರ್ತರು ಎಂದ ಆಕೆಯ ಮಾತುಗಳು ಮನಸ್ಸನ್ನು ನಾಟಿ ನಿಜವೆನಿಸಿತು.

-ಶ್ವೇತಾ ಇಂದಾಜೆ,
ದ್ವಿತೀಯ ಎಂಸಿಜೆ, ಎಸ್ಡಿಎಂ ಕಾಲೇಜು, ಉಜಿರೆ.

0 comments:

Post a Comment