ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಎಸ್ಕ್ಲೂಸಿವ್ ಸ್ಟೋರಿ
ಈ ಕನಸು ವಿಶೇಷ ಪ್ರತಿನಿಧಿ ವರದಿ
ಖ್ಯಾತ ಬಾಲಿವುಡ್ ತಾರೆ ವಿವೇಕ್ ಒಬೆರಾಯ್ ಇದೀಗ ಕ್ಷೇತ್ರ ದರುಶನದಲ್ಲಿ ತಲ್ಲೀನರಾಗಿದ್ದಾರೆ. ಕರಾವಳಿಯ ಪ್ರಸಿದ್ಧ ಕ್ಷೇತ್ರಗಳತ್ತ ಈ ನಟನ ದೃಷ್ಠಿ ಬಿದ್ದಿದೆ. ಅದ್ಯಾಕೋ ಗೊತ್ತಿಲ್ಲ....ಕೊಲ್ಲೂರು ಮಾತೆಯ ದರುಶನ ಪಡೆದ ಈ ವಿವೇಕ್ ಒಬೆರಾಯ್ ಇದೀಗ ರವಿವಾರ ಮುಂಜಾನೆ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ ಮಧ್ಯಾಹ್ನ ಒಂದೂವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳಸಲಿದ್ದಾರೆ.

ಉಡುಪಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಇದೀಗ ಕೊಲ್ಲೂರಿನಲ್ಲಿ ತಂಗಿರುವ ಈ ತಾರೆ ನಾಳೆ ಬೆಳಗ್ಗೆ 4.30ಕ್ಕೆ ಅಲ್ಲಿಂದ ಹೊರಟು ಕಟೀಲು ಕ್ಷೇತ್ರಕ್ಕೆ 10ಗಂಟೆಗೆ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು.

0 comments:

Post a Comment