ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2011 ರ ಪೂರ್ವಭಾವೀ ಸಮಾಲೋಚನಾ ಸಭೆ ಹಾಗೂ ಘಟಕಗಳ ರಚನಾ ಸಮಾಲೋಚನಾ ಸಭೆ ಅಕ್ಟೋಬರ್ 20ರಂದು ಶಿರಸಿಯ ಟಿ.ಎಸ್.ಎಸ್ ಸಭಾಂಗಣದಲ್ಲಿ ಸಾಯಂಕಾಲ 3.30ಕ್ಕೆ ನಡೆಯಲಿದೆ. 21ರಂದು ಹೊನ್ನಾವರ ಶರಾವತಿ ಸರ್ಕಲ್ ನಲ್ಲಿರುವ ನ್ಯೂ ಇಂಗ್ಲೀಷ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದೆ. 23ರಂದು ಮಂಡ್ಯದ ಶ್ರೀ ನಂಜುಂಡೇಶ್ವರ ಸಮುದಾಯ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಹಾಗೂ 23ರಂದು ಸಾಯಂಕಾಲ 3 ಗಂಟೆಗೆ ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಭವನದಲ್ಲಿ ಈ ಸಮಾಲೋಚನಾ ಸಭೆಗಳನ್ನು ಆಯೋಜಿಸಲಾಗಿದೆ. ಕನ್ನಡಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 comments:

BIDIRE said...

ಶುಭವಾಗಲಿ......

Post a Comment