ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:21 PM

ದಿವ್ಯ ಪ್ರೇಮ...!

Posted by ekanasu

ಸಾಹಿತ್ಯ

ಕಾವ್ಯ


ಪುರಾಣಯುಗದಲ್ಲೊಂದು ಮಹಾಶಕ್ತಿ ವಿಶ್ವಾಮಿತ್ರನ್!
ಮನವಂತು ಅವನ್ ಮೇನಕೆಯೊಳ್ ಕೂಡಿದನ್
ಆ ಸುರಸುಂದರಿ ಈಯಲ್ಕೆ ದಿವ್ಯಶಿಶು
ನೆನೆಯುತೇನೋ ಸರಿದನ್ ಆಗಲೇ ಬ್ರಹ್ಮರ್ಷಿ ಆಶು
ಕನಲ್ದಿ ಉಸುರಿದಳ್ ಏನೀ ಬೇಜವಾಬ್ದಾರಿ...?ಪೊತ್ತು ಸಾಗುತ ಹೃದಯ ಭಾರೀ
ಚಿತ್ರವಿದು ಪ್ರಕಟಗೊಂಡಿತು ಮನದೋಳ್
ಅದಕಾಗಿ ನಡುಕಮಾದುದು ಹೃದಯದೋಳ್
ನಗೆ ಹೃಸ್ವಗೊಳಿಸಿದುದು ಶಿವಾಟ್ಟಹಾಸ
ತಿರುಗಿದುದತ್ತ ಸಮಸ್ತ ಕೈಲಾಸ
ದೇವಗಣ ಮಣಿದುದಾಗ ನೆನಸಿ ತಾಂಡವ ನೃತ್ಯ
ಸಂಗತವಿದ್ದುದಲ್ಲಿ ಶಿವ ಶಿವೆಯರ ಪ್ರೇಮಕೃತ್ಯ...

- ಆರ್.ಎಂ.ಶರ್ಮ, ಮಂಗಳೂರು.

0 comments:

Post a Comment