ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮೂಡಬಿದಿರೆ:ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಬೆಂಗಳೂರು ಇದರ ಸಹಯೋಗದೊಂದಿಗೆ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕನ್ನಡ ನುಡಿತೇರು ಜಾಗೃತಿ ಜಾಥಾ ಮೂಡಬಿದಿರೆಯಲ್ಲಿ ಅಕ್ಟೋಬರ್ 14ರಂದು ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮೂಡಬಿದಿರೆ ವಿದ್ಯಾಗಿರಿಯಲ್ಲಿ ನುಡಿತೇರು ಜಾಥಾ ಸ್ವಾಗತ ನಡೆಯಲಿದೆ. ಅಪರಾಹ್ನ 2.45ಕ್ಕೆ ಸ್ವರಾಜ್ಯ ಮೈದಾನದಲ್ಲಿ ಕಲಾತಂಡದ ಸಮಾವೇಶ.3ಗಂಟೆಗೆ ಮೂಡಬಿದಿರೆ ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸ್ವರಾಜ್ಯ ಮೈದಾನದಿಂದ ಮುಖ್ಯರಸ್ತೆಯಾಗಿ ಹನುಮಾನ್ ದೇವಸ್ಥಾನದ ಬಳಿ ಎಡಕ್ಕೆ ತಿರುಗಿ ವೆಂಕಟ್ರಮಣ ದೇವಸ್ಥಾನ - ಅರಮನೆ ರಸ್ತೆಯಾಗಿ ಪದ್ಮಾವತೀ ಕಲಾ ಮಂದಿರ ತಲುಪಿ ಸಭಾ ಕಾರ್ಯಕ್ರಮ ನಡೆಯಲಿದೆ. 3.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಜಾಗೃತಿ ಜಾಥಾದ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

0 comments:

Post a Comment