ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:29 PM

ಜೀವ -ನೋವ

Posted by ekanasu

ಸಾಹಿತ್ಯ

ಮಾಯಾ ಮೋಹದ ಪಗಡೆಯಾಟ
ತಿರು ತಿರುಗಿ,ಕಾಯಿ ಉರುಳಿಸಿದರೂ
ತಲೆ ಮೇಲೆತ್ತಿ ಕೈ ಮುಗಿದರೂ
ಮಾಯೆಯ ಬಲೆ ಸುತ್ತುವರಿದು
ಕರಿ ಕಾರ್ಮೋಡ ದಟ್ಟೈಸಿ ನಡೆಸುತ್ತದೆ
ಆಟ-ಜೀವನ ಪಾಠ...ಕೌರವ ಪಾಂಡವ ವೈರ ಭಾವ
ವೈಭವೀಕರಣ ಸೋಲು-ಗೆಲುವಿನ
ನಿರೀಕ್ಷೆಯ, ಅನುಭವದ ವೇದ ಪಾಠ
ಕಾಯಿಗಳೆಷ್ಟೇ ಉರುಳಿಸಿದರೂ
ಬೀಳಬಹುದಾದ್ದು ಸರಿ ಬೆಸ ಸಂಖ್ಯೆಗಳು
ಸರಿಯಾದರೆ ಸರಿ ಬೆಸವಾದರೆ ಬೆಸ
ಜೀವನದ ಸಮರಸ ಭಾವ
ಸಮ್ಮಿಳಿತಗೊಂಡ ಜೀವ -ನೋವ

- ಸೌಮ್ಯ ಸಾಗರ

2 comments:

Anonymous said...

ಸಮರಸವೇ ಜೀವನ ಎನ್ನುತ್ತಲೇ
ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ!
ಎಲ್ಲಾ ನಿಮಗಾಗಿ ಎನ್ನುತ್ತಲೇ
ಸಮ್ಮಿಳಿತಗೊಂಡ ಜೀವ...!
ಇದುವೇ ಜೀವನ ಇದು ಜೀವ!
Deepak.

Unknown said...

gm akka nanu ninna tamma totendra s makal
ma journalisam student in gulbarga university ninna hage kavite bariyelu nnanu try madtini akka hage nimma kavitegagi nanu

Post a Comment