ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೀಪಾವಳಿ ಸ್ಪೆಷಲ್

ಬೆಳಕಿನ ಹಬ್ಬ ದೀಪಾವಳಿಯ ಸಡಗರದಲ್ಲಿ...
ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪ ಸಮೃದ್ದಿ ಮತ್ತು ಪ್ರಗತಿಯ ಸಂಕೇತ. ಎಲ್ಲೆಡೆ ಆಕಾಶಬುಟ್ಟಿಗಳ ಮಾರಾಟ ಭರ್ಜರಿಯಿಂದ ನಡೆಯುತ್ತದೆ. ಎಲ್ಲಾ ಅಂಗಡಿಗಳು ಈ ಬುಟ್ಟಿಗಳಿಂದ ರಾರಾಜಿಸುತ್ತವೆ. ಬಣ್ಣ ಬಣ್ಣಗಳಿಂದ ತುಂಬಿ ತುಳುಕುತ್ತಿದೆ. ದೀಪದಿಂದ ದೀಪವನ್ನು ಹಚ್ಚಿ ಪ್ರಗತಿಯತ್ತ ಮುನ್ನುಗ್ಗುವುದು ಈ ಹಬ್ಬದ ಸಂಕೇತ. ಜಾತಿ ಮತ ನೊಡದೇ ಎಲ್ಲರೂ ಕೂಡಿ ಈ ಹಬ್ಬವನ್ನ ಸಂಭ್ರಮ ಹಾಗೂ ಸಡಗರದಿಂದ ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರಮುಖವಾಗಿ ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ನರಕ ಚತುರ್ದಶಿಯಿಂದ ಆರಂಭವಾಗಿ ಬಲಿಪಾಡ್ಯಮಿಯ ದಿನ ಮುಕ್ತಾಯಗೊಳ್ಳುತ್ತದೆ.ರಾಕ್ಷಸ ನರಕಾಸುರನ ಸಂಹಾರವಾದ ಆ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಅಂದು ಹಿಂದುಗಳಿಗೆ ಪವಿತ್ರ ದಿನ ರಾಕ್ಷಸನ ಸಂಹಾರ ಆದ ಕಾರಣ ಪವಿತ್ರ ಸ್ನಾನ ಮಾಡಿ ಮೊದಲು ಸಿಹಿ ತಿನ್ನಲಾಗುತ್ತದೆ. ಕರ್ನಾಟಕದ ಹಲವು ಭಾಗಗಲ್ಲಿ ವಿಶೇಷವಾಗಿ ಆ ದಿನಕ್ಕೆಂದೇ ಕಜ್ಜಾಯವನ್ನು ತಯಾರಿಸಲಾಗಿರುತ್ತದೆ. ಇದು ಮೊದಲ ದಿನದ ವಿಶೇಷತೆ ಆದರೆ, ಎರಡನೇ ದಿನ ಅಮವಾಸ್ಯೆ ಅಂದು ಮಾತಾ ಶ್ರೀ ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಪ್ರತಿ ಮನೆಯಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಮಾತೆಯ ಆರಾಧನೆ ನಡೆಸಲಾಗುತ್ತದೆ.


ಮೂರನೇ ದಿನ ಬಲಿಪಾಡ್ಯಮಿ. ದೀಪಾವಳಿ ಹಬ್ಬದ ಪ್ರಮುಖ ದಿನ. ಈ ದಿನದ ವೈಶಿಷ್ಟ್ಯ ಎಂದರೆ, ಹಿಂದೆ ಬಲಿ ಚಕ್ರವರ್ತಿ ಎಂಬ ಮಹರಾಜ ಬಹಳ ಸುಭೀಕ್ಷೆಯಿಂದ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ. ಬಹಳ ದಾನವಂತನಾದ ಈತ ಯಾರು ಏನೇ ಕೇಳಿದರೂ ಇಲ್ಲ ಎಂದು ಹೇಳುತ್ತಿರಲಿಲ್ಲ. ಇದನ್ನು ಕಂಡ ದೇವತೆಗಳಿಗೆ ಇವನ ಮೇಲೆ ಅಸೂಹೆ ಹುಟ್ಟುಕೊಳ್ಳುತ್ತದೆ. ಆಗ ಮಹಾ ವಿಷ್ಣು ಈತನಲ್ಲಿಗೆ ಬ್ರಾಹ್ಮಣನ ವೇಷದಲ್ಲಿ ಬಂದು ಎಲೈ ಬಲಿ ಚಕ್ರವರ್ತಿಯೇ, ನಾನು ನನ್ನ ಮೂರು ಪಾದಗಳನ್ನಿಡಲು ಇಚ್ಛಿಸಿದ್ದೇನೆ.ಒಂದನ್ನು ಆಕಾಶದಲ್ಲಿ ಇಟ್ಟಿದ್ದೇನೆ ಇನ್ನೊಂದನ್ನು ಭೂಮಿಯ ಮೇಲೆ ಇಟ್ಟಿದ್ದೇನೆ ಮೂರನೇ ಪಾದವನ್ನು ಎಲ್ಲಿ ಇಡಲಿ ಎಂದು ಕೇಳಿದಾಗ, ನಿಸ್ವಾರ್ಥ ಚಕ್ರವರ್ತಿ ವಿಷ್ಣುವಿಗೆ ತನ್ನ ತಲೆಯ ಮೇಲಿಡಲು ಹೇಳುತ್ತಾನೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಶ್ರೀ ವಿಷ್ಣು ತನ್ನ ಪಾದವನ್ನು ಚಚಕ್ರವರ್ತಿಯ ತಲೆಯ ಮೇಲಿಡುತ್ತಾನೆ. ತಕ್ಷಣವೇ ಚಕ್ರವರ್ತಿ ಪಾತಾಳಕ್ಕೆ ಹೋಗುತ್ತಾನೆ. ಆಗ ವಿಷ್ಣುವಿನಲ್ಲಿ ಪ್ರಾರ್ಥಿಸಿ ಸ್ವಾಮಿ, ವರ್ಷದಲ್ಲಿ ಒಮ್ಮೆಯಾದರೂ ನನ್ನ ಪ್ರಜೆಗಳನ್ನು ಹಾಗೂ ರಾಜ್ಯವನ್ನು ನೋಡಲು ಅವಕಾಶ ಮಾಡಿ ಕೊಡು ಎಂದಾಗ, ವಿಷ್ಣುವು ದೀಪಾವಳಿಯ ಬಲಿಪಾಡ್ಯಮಿಯ ದಿನ ಬಲೀಂದ್ರನ ರೂಪದಲ್ಲಿ ಬಂದು ಹೋಗು ಎಂದು ಆಶೀರ್ವದಿಸುತ್ತಾನೆ. ಅಂತೆಯೇ ಪ್ರತೀ ದೀಪಾವಳಿಯ ಬಲಿಪಾಡ್ಯಮಿಯ ದಿನ ಸಗಣಿಯಲ್ಲಿ ಬಲೀಂದ್ರನನ್ನು ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

ಹೀಗೆ ಹಲವು ರೀತಿಗಳಲ್ಲಿ ದೀಪಾವಳಿಯನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲಾ ದೇವಾಲಯಗಳು, ಅಂಗಡಿ ಮುಂಗಟ್ಟುಗಳು ದೀಪಾಲಂಕೃತದಿಂದ ಕಂಗೊಳಿಸುತ್ತಿವೆ. ಎಲ್ಲರಿಗೂ ಈ ದೀಪಾವಳಿ ಹಬ್ಬ ಸಕಲ ಐಶ್ವರ್ಯ ಆರ್ಯೋಗ್ಯವನ್ನಿಡಲಿ ಎಂದು ಪ್ರಾರ್ಥಿಸುತ್ತಿದ್ದೇವೆ.

- ದರ್ಶನ್ ಬಿ.ಎಂ
ದ್ವಿತೀಯ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜು
ಮೂಡುಬಿದಿರೆ.

2 comments:

Anonymous said...

very nice
very nice pictures......
happy diwali.....

Manu shanbhog...

Anonymous said...

good,lekhana chennagide-sowmya

Post a Comment