ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:32 PM

ಅಮ್ಮನ ನೆನಪು

Posted by ekanasu

ಈ ಕನಸು ಅವಾರ್ಡ್
ಅಂದು ನಾ ಅನಾಥೆ..ಇಂದೂ ಕೂಡಾ.. ನನ್ನ ತಾಯಿಗಾಗಿ ನಾ ಬೀದಿ ಬೀದಿ ಅಲೆದಿದ್ದೆ. ನನ್ನ ಹೆತ್ತವಳು ಸಿಗದೆ ನನ್ನ ಬಾಳು ಬರಿದಾಗಿತ್ತು. ಅಮ್ಮಾ ನೀ ಸಿಗದೆ ನನ್ನ ಬಾಳು ಗುರುತು ಸಿಗದಂತಾಗಿತ್ತು. ನನ್ನ ಈ ಪರಿಸ್ಥಿತಿಗೆ ಕಾರಣ ನೀನೆಂದು ನಾ ಖಂಡಿತಾ ಅನ್ನುವುದಿಲ್ಲ.
ಆ ಕೆರೆಯ ಮಧ್ಯದಲ್ಲಿ ನಾನಿದ್ದೆ. ಆದರೆ ಆ ಕೆರೆ ಬತ್ತಿ ಹೋಗಿತ್ತು. ನೀನು ತೋರಿಸಿದ್ದ ಆ ಬಾನಿನ ಚಂದಮಾಮ ಇವತ್ಯಾಕೋ ಬಂದೇ ಇಲ್ಲ,.. ಯಾಕೆಂದರೆ ಆ ದಿನ ಅಮವಾಸ್ಯೆಯಂತೆ, ನಾ ಅಂದುಕೊಂಡಂತೆ ಏನೂ ನಡೆಯಲಿಲ್ಲ, ಸಿಗಲಿಲ್ಲ.


ಮುಂಜಾವಿನ ಬೆಳಕಿನಲ್ಲಿ ನಿನ್ನ ಹುಡುಕಲು ಹೊರಟಾಗ ಏನೋ ಆಸೆ.. ನೀನು, ನಿನ್ನ ಪ್ರೀತಿ ಮತ್ತೆ ಸಿಗುತ್ತದೆಂದು, ಆದರೆ ಹಗಲು ಇರುಳು ಕಳೆದರೂ ನೀ ಸಿಗಲಿಲ್ಲ. ನಾ ಯಾರಲ್ಲಿ ಮಾತನಾಡಲಿ? ಮಾತನಾಡಲು ದ್ವನಿಯೇ ಇಲ್ಲದಂತಾಗಿದೆ. ಅತ್ತುಬಿಡೋಣ ಅಂದರೆ ಕಣ್ಣಿನ ನೀರು ಆವಿಯಾಗಿದೆ. ಈ ನನ್ನ ಕೆದರಿದ ಕೂದಲನ್ನು ನೋಡಿ ಅನೇಕರು ಹೀಯಾಳಿಸಿದರು. ಆದರೆ ಅವರಿಗೇನು ಗೊತ್ತು ನನ್ನ ಮನದಾಳದ ಬಾವನೆ... ಹೊಟ್ಟೆಗೆ ತಂಗಳನ್ನವೂ ಇಲ್ಲ... ಅಮ್ಮಾ.. ನನ್ನ ಕಣ್ಣೆದುರು ಒಂದು ಬಾರಿ ಬಂದು ನೋಡಮ್ಮಾ...

ಸನತ್ ಕುಮಾರ್

0 comments:

Post a Comment