ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಲ್ಕಿ: ಮಂಗಳೂರಿನಿಂದ ಮುಂಬಯಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಉತ್ತರಕನ್ನಡದ ಯಲ್ಲಾಪುರ ಸಮೀಪದ ಕೂಡ್ಲುಗದ್ದೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದ ಘಟನೆಯಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂಲ್ಕಿ ಬಳಿಯ ಕೆ.ಎಸ್.ರಾವ್ ನಗರದ ಒಂದೇ ಮನೆಯ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು ಅವರ ತಾಯಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಪಟ್ಟವರನ್ನು ರಂಜಿತ್ (11), ರಶಿತಾ (7) ಎಂದು ಗುರುತಿಸಲಾಗಿದ್ದು ಇವರು ಮೂಲ್ಕಿ ಕೆ.ಎಸ್.ರಾವ್.ನಗರದ ನಿವಾಸಿ ಜಯರಾಮ ಎಂಬುವವರ ಮಕ್ಕಳಾಗಿದ್ದಾರೆ. ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಪತ್ನಿ ಮಮತಾ ಎಸ್.ಸನಿಲ್ ಹಾಗೂ ಆಕೆಯ ಸಹೋದರ ಪ್ರಸಾದ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.ಕಾರ್ಕಳದ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಸುಶೀಲ ಎಂಬುವವರ ಮಗಳಾದ ಮಮತಾರವರು ಮುಂಬಯಿಯಲ್ಲಿ ಭಾನುವಾರ ನಡೆಯಲಿದ್ದ ತಮ್ಮ ಸಂಬಂದಿಕರ ಮದುವೆಗೆಂದು ಸಹೋದರನೊಂದಿಗೆ ತೆರಳಿದ್ದರು. ಪತಿ ಜಯರಾಮ ಕೆ.ಎಸ್.ರಾವ್.ನಗರದಲ್ಲಿನ ಸಹೋದರ ಸಂಬಂದಿಯ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದು ಅವರು ಪ್ರಯಾಣ ಬೆಳಸಿರಲಿಲ್ಲ.ಬಾಲಕ ರಂಜಿತ್ ಕಾರ್ಕಳದಲ್ಲಿಯೇ ಅಜ್ಜಿ ಮನೆಯಲ್ಲಿ ನೆಲೆಸಿದ್ದು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದನು ಬಾಲಕಿ ರಶಿತಾ ತಂದೆ ತಾಯಿಯೊಂದಿಗೆ ಇದ್ದು ಮೂಲ್ಕಿಯ ನಾರಾಯಣ ಗುರು ಆಂಗ್ಲ ಮಾದ್ಯಮಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮಕ್ಕಳ ತಾಯಿ ಮಮತಾರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಕರುಳಿನ ಕುಡಿಗಳ ಸಾವಿನ ಅಘಾತದಿಂದ ಅವರು ಹೊರಬಂದಿಲ್ಲ.
ಮುಂಬಯಿಗೆ ಪ್ರಯಾಣಿಸಲು ರೈಲಿನಲ್ಲಿ ಟಿಕೇಟ್ ಸಿಗದೇ ಇದ್ದುದರಿಂದ ಕೊನೆ ಕ್ಷಣದಲ್ಲಿ ಖಾಸಗಿ ಬಸ್ಸಿನಲ್ಲಿ ಮೂಲ್ಕಿಯಿಂದ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.

ವರದಿ: ಭಾಗ್ಯವಾನ್ ಮೂಲ್ಕಿ

0 comments:

Post a Comment