ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ದಟ್ಟ ಕಾನನದಲ್ಲಿ ಬೀಡುಬಿಟ್ಟ ಮರಗಳಿಗೆ ಹಸಿರು ಹೊದಿಕೆಯನ್ನು ಹೊದ್ದು ಚಳಿಯನ್ನು ದೂರಮಾಡುವ ಜೀವಗಳಿವು. ದಪ್ಪನೆ ಕೇಶರಾಶಿಯಲ್ಲಿ ಹನಿ ಹನಿಯಾಗಿ ಬೆಳೆದು ಮರದ ತುದಿಯವರೆಗೂ ಹಬ್ಬಿ ಆಕರ್ಶಕ ರಂಗೋಲಿಯನ್ನೆ ಬಿಡಿಸಿವೆ ಮರದ ತುಂಬೆಲ್ಲ. ಹಸಿರ ಹೊದಿಕೆಯ ಮೇಲೆ ಇನ್ನೆರಡು ಜೀವಗಳು ಜನ್ಮ ತಾಳಿವೆ! ವಿಸ್ಮಯ ಪ್ರಕೃತಿಯ ಅಂಗಳದಲ್ಲಿ ಕಂಡು ಕಾಣದಂತಿರುವ ಅದೇಷ್ಟೋ ವಿಚಾರಗಳು ಛಾಯಾಚಿತ್ರಗಾರನ ಕಾಮಾರಾ ಕಣ್ಣು ಸೆರೆಹಿಡಿಯುತ್ತವೆ. ಗೆಳೆಯ ನಾಗರಾಜ ವೈದ್ಯನ ಕಣ್ಣು ಗುರುತಿಸಿದ ಆಕರ್ಶಕ ಹಸಿರು ರಂಗವಲ್ಲಿಯ ಚಿತ್ತಾರವಿಲ್ಲಿದೆ. ಅರಬೈಲ್ ಕಾಡಿನಲ್ಲಿ ತೆಗೆದ ದೃಶ್ಯವಿದು.

- ಅಚ್ಯುತ ಕುಮಾರ, ಯಲ್ಲಾಪುರ

0 comments:

Post a Comment