ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಪ್ಪಿನಂಗಡಿ: ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಿ. ಉತ್ತಮ ಚಿಂತನೆಯ ಮೂಲಕ ಸಮಾಜದ ಸೇವಕನಾಗುವ ಮೂಲಕ ದೊಡ್ಡವರೆನಿಸಿಕೊಳ್ಳಿ; ಹಣ, ಪ್ರತಿಷ್ಠೆಹೊಂದಿದವರು ನಿಜವಾಗಿ ದೊಡ್ಡವರಲ್ಲ.ಬದಲಾಗಿ ಸಮಾಜದ ಪ್ರತಿಯೊಬ್ಬರನ್ನೂ ತಲುಪಲು ಸಾಧ್ಯವಾದ , ಉತ್ತಮ ಮನಸ್ಥಿತಿ ಹೊಂದಿದ ವ್ಯಕ್ತಿಗಳು ನಿಜವಾದ ದೊಡ್ಡವರು ಎಂದು ಶಂಕರಾಚಾರ್ಯ ಪರಂಪರಾ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಶ್ರೀಗಳು ಪೆರಾಜೆ (ಮಾಣಿಮಠ)ಮಠ ದಲ್ಲಿ ಸೇರಿದ್ದ ಸಮಸ್ತ ಶಿಷ್ಯವರ್ಗವನ್ನುದ್ದೇಶಿಸಿ ಅನುಗ್ರಹ ಆಶೀರ್ವಚನ ನೀಡಿದರು. ಮಾನವ ಜೀವನದಲ್ಲಿ 60 ಎಂಬುದು ಪ್ರಮುಖ ಘಟ್ಟ.ಅರುವತ್ತು ಅರಳುವ ಹಾಗೂ ಮರಳುವ ಸಮಯ. ಜೀವನದ ಪ್ರಮುಖ ಘಟ್ಟದಲ್ಲಿ ಮನಸ್ಸು ಅರಳಿ; ಪರಿಪಕ್ವವಾದಂತಹ ಸಮಯ ಈ ಷಷ್ಟ್ಯಬ್ಧ. ನಂತರ ವ್ಯಕ್ತಿ ಮರಳಿ ಯೌವನಕ್ಕೆ ತೆರಳುತ್ತಾನೆ. ಆ ಹುಮ್ಮಸ್ಸು ಮೂಡುವ ಸಮಯ ಎಂದರ್ಥ ಎಂದು ವ್ಯಾಖ್ಯಾನಿಸಿದರು.ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳು "ಶ್ರೀ ರಾಮ ಕಥಾ" ಆದಿಕವಿಯ ಆವಿರ್ಭಾವ ಡಿ.ವಿ.ಡಿ ಬಿಡುಗಡೆಗೊಳಿಸಿದರು.

ತ್ಯಾಗದ ಮನೋಭಾವ ಅತ್ಯುನ್ನತವಾದುದು. ಸಮಾಜದಲ್ಲಿ ಪ್ರತಿಯೊಬ್ಬರೂ ತ್ಯಾಗದ ಮನೋಭಾವವನ್ನು ರೂಢಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸಮರ್ಥ; ಹಾಗೂ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂದು ಶ್ರೀಗಳು ಸೂಚ್ಯವಾಗಿ ತಿಳಿಸಿದರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರ್ಗಿ ಅವರ ಷಷ್ಟ್ಯಬ್ದ ಪೂರ್ತಿ ಸಮಾರಂಭ ಪೆರಾಜೆಯ ಮಾಣಿ ಮಠದಲ್ಲಿ ಈ ಸಂದರ್ಭದಲ್ಲಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು.3 comments:

Anonymous said...

ಒಳ್ಳೇ ವರದಿ ಅಭಿನಂದನೆಗಳು.
BALYA S BHAT.

bhatjalsur said...

ಚಿತ್ರಗಳು ಬರಹಗಳು ಉತ್ಕೃಷ್ಟವಾಗಿ ಮೂಡಿಬಂದಿವೆ..
ಕಾರ್ಯಕ್ರಮದಲ್ಲಿ ನಾನೂ ಪ್ರತ್ಯಕ್ಷ ಭಾಗಿಯಾದ ಕಾರಣ ವಿಶ್ವಾಸದಿಂದ ಹೇಳಬಲ್ಲೆ..! :)

ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಜಾಲ್ಸೂರು

madanna manila said...

ನನಗೆ ಬರಲಾಗಲಿಲ್ಲ... ಭಾಗವಹಿಸಿದಂತೆ ಆಯಿತು.. ಪ್ರಯತ್ನಕ್ಕೆ ಅಭಿನಂದನೆ ಗಳು.. ಫೋಟೋ ಉತ್ಕೃಷ್ಟ ವಾಗಿದೆ.. ವರದಿ ಸರಳವಾಗಿ ನೇರ ವಾಗಿ ತಿಳಿಸುತ್ತಿದೆ.. ಸರ್...

Post a Comment