ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:21 PM

ಅಂಟಿಗೆ ಪಿಂಟಿಗೆ

Posted by ekanasu

ವೈವಿಧ್ಯ
ದೀಪಾವಳಿಯ ನಂತರ ಒಂದು ಅವಲೋಕನ...ಇದ್ಯಾಕಪ್ಪಾ ಎಂಬ ಭಾವನೆ ಮೂಡುವುದು ಸಹಜ...ದೀಪಾವಳಿಯ ಮೂರುದಿನಗಳ ಕಾಲ ಹಬ್ಬ ಮಾಡಿ ಸಂಭ್ರಮಿಸಿದರೆ ಸಾಲದು..ಬದಲಾಗಿ ಮತ್ತೂ ಮತ್ತೂ ಆ ನೆನಪು ಮನದಲ್ಲಿ ನಿರಂತರವಿರಬೇಕೆಂಬುದು ನಮ್ಮ ಬಯಕೆ..ಅದಕ್ಕಾಗಿ ಒಂದೊಂದು ಆಚರಣೆಯ ಬಗೆಗೆ ಮತ್ತೊಮ್ಮೆ ಅವಲೋಕನ...ಈ ಬಾರಿ ಅಂಟಿಗೆ ಪಿಂಟಿಗೆ ಕುರಿತು ಅರ್ಪಿತಾ ರಾವ್ ಬರೆದಿದ್ದಾರೆ...ಓದಿ ಅಭಿಪ್ರಾಯಿಸಿರಿ. - ಸಂ.
ಅಂಟಿಗೆ ಪಿಂಟಿಗೆ ಎಂಬುದು ಮಲೆನಾಡಿನ ಕೆಡೆಗಳಲ್ಲಿ ಪ್ರಸಿದ್ಧಿ .ಮಲೆನಾಡಿನಲ್ಲಿ ಒಂದು ಸಂಪ್ರದಾಯವಿದೆ . ದೀಪಾವಳಿಯ ಪಾಡ್ಯದ ದಿನದಂದು ರಾತ್ರಿ ಊರಿನ ಕೆಲವು ಮಂದಿ ಒಟ್ಟು ಗೂಡಿ ಮನೆಮನೆಗೂ ಹಾಡುಹೇಳುತ್ತಾ ಹೋಗುವುದು ಇದನ್ನೇ ಅಂಟಿಗೆ ಪಿಂಟಿಗೆ ಎಂದು ಕರೆಯುತ್ತಾರೆ. ರಾತ್ರಿ ಸುಮಾರು ಹತ್ತು ಗಂಟೆಯಿಂದ ಪ್ರಾರಂಭಿಸಿದರೆ ಬೆಳಗಿನ ಜಾವ ಐದು ಗಂಟೆಯವರೆಗೆ ಹಾಡುಹೇಳುತ್ತಾ ಶುಭ ಕೋರುತ್ತಾರೆ .


ಮಲೆನಾಡಿನ ಹಳ್ಳಿಗಳು ಸಾಲುಕೇರಿ. ಒಂದು ಊರಿನಲ್ಲಿ ಕನಿಷ್ಠ ಐವತ್ತು ಮನೆಗಳಿರುತ್ತದೆ.ಊರಿನ ಕೆಲವು ಜನರು ಸೇರಿ ಈ ಅಂಟಿಗೆ ಪಿಂಟಿಗೆ ಗೊಸ್ಕರವೇ ಒಂದು ತಿಂಗಳಿನಿಂದ ಹಾಡು ಹೇಳುವ ಅಭ್ಯಾಸ ಪ್ರಾರಂಭಿಸುತ್ತಾರೆ.ಇದಕ್ಕೆ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲ .ಹಿರಿಯರಿಂದ ಈಗಿನ ಯುವಪೀಳಿಗೆಯವರು ಆಸಕ್ತಿ ಇರುವವರು ಸೇರಿಕೊಂಡು ಹಾಡುಕಲಿಯುತ್ತಾರೆ.

ಪಾಡ್ಯದ ದಿನ ರಾತ್ರಿ ಕೋಲಿಗೆ ಬೆಂಕಿ ಹಚ್ಚಿಕೊಂಡು ಹಣತೆ ಹಿಡಿದು ಪ್ರಾರಂಭಿಸುವ ಈ ಹಾಡಿನ ತಂಡ ಮೊದಲು ಊರಿನ ದೇವರಗುಡಿ ಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಾರೆ.ಪ್ರತಿಯೊಬ್ಬರ ಮನೆಯಲ್ಲೂ ಅಂಟಿಗೆ ಪಿಂಟಿಗೆ ಯವರು ತಂಡ ಹಣತೆಗೆ ಎಣ್ಣೆ ಹಾಕಲಾಗುತ್ತದೆ.ಆ ದೀಪ ಬೆಳಗಿನವರೆಗೆ ಆರದಂತೆ ನೋಡಿಕೊಳ್ಳಲಾಗುತ್ತದೆ.ಹಾಡುತ್ತಾ ಬಂದವರಿಗೆ ಅಕ್ಕಿ ,ಅಡಿಕೆ , ಕಾಣಿಕೆ, ಹೋಳಿಗೆ ಇವನ್ನೆಲ್ಲ ಕೊಡುವುದು ಇಲ್ಲಿಯ ಪದ್ಧತಿ.
ಹೀಗೆ ಒಂದು ಮನೆ ನಂತರ ಇನ್ನೊಂದು ಮನೆಗಳಿಗೆ ಹೋಗಿ ದೇವರ ನಾಮಗಳನ್ನು ಹಾಡುತ್ತ ಹೋಗುವುದು ಅಲ್ಲಿಯ ಜನರಿಗೆ ಸಂಭ್ರಮ .ಇದು ಮಲೆನಾಡಿನ ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ . ಅದನ್ನು ಈಗಲೂ ಜನ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ.

1 comments:

Anonymous said...

malenadina kelavu bhagagalalli e sampradaya nashisi hoguttide,hageye lekhana antige pintigeya kelavu acharaneya bagge purna vivaragalannu olagondilla.. tandadavaru 2 tandagalalli iruttare,habba hadalikke horataga 2 tandagalu mukha mukhi agalikkilla,hacchida deepa ellu kuda aari hogalikke illa,tandada mukhyasta koneya dina samaradhane madi tandada janarige hagu samartyaviddare uravarige uta hakisuvudu paddati- sowmya sagara

Post a Comment