ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಸದಾ ನಗುಮುಖ. ಸರಳ ಸಜ್ಜನ. ಮಾತುಗಳು ಅಷ್ಟೇ ಪ್ರೌಢ. ನಗುನಗುತ್ತಾ ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವ ವ್ಯಕ್ತಿತ್ವ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸೈಲೆಂಟ್ ಆಗಿಯೇ ಸಾಧಿಸಿ ಬಿಡುವ ವ್ಯಕ್ತಿ...ಆ ಕಾರಣಕ್ಕಾಗಿಯೇ ನನಗೆ ಖುಷಿ. ಇದು ಗೆಳೆಯ ಕುಂಬ್ಳೆಯ ಒಂದು ಸಣ್ಣ ಪರಿಚಯ.

ಕುಂಬ್ಳೆ ನನಗೆ ಆಪ್ತವಾಗಿದ್ದು ಎರಡು ಕಾರಣಕ್ಕೆ. ಒಂದು ಅವರ ಆತ್ಮೀಯತೆ, ಸಹಕಾರ ಮನೋಭಾವ...ಹೊಸ ಚಿಂತನೆ. ಇನ್ನೊಂದು ನಮ್ಮೂರಿನವರೆಂಬ ಕಾರಣಕ್ಕೆ. ಸಾಹಿತ್ಯವಲಯದಲ್ಲಿ ಹೆಸರು ಮಾಡಿದ ಕುಂಬ್ಳೆ ಮಾಧ್ಯಮ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿ ಸೈ ಎನಿಸಿಕೊಂಡವರು. ಈ ಎಲ್ಲಾ ಕಾರಣ ನಮ್ಮ ಸ್ನೇಹ ಮತ್ತಷ್ಟು ಆಪ್ತವಾದವು.

ಸಾಹಿತಿ ಅರವಿಂದ ಚೊಕ್ಕಾಡಿ ಹೀಗೇ ಮಾತನಾಡುತ್ತಾ ಮಾತೊಂದ ಹೇಳಿದರು. ಅದು ಸತ್ಯ ಕೂಡಾ. " ಕುಂಬ್ಳೆಯವರಿಗೆ ಒಳ್ಳೆ ಚಿಂತನಾ ಶಕ್ತಿ ಇದೆ. ಹೊಸ ಹೊಸ ಯೋಚನೆ, ಕ್ರಿಯಾಶೀಲ ಗುಣ ಅವರಲ್ಲಿದೆ". ಮೇಜು ತಟ್ಟಿ ಅವರೇನಾದರೂ ಹೇಳ ಹೊರಟರೆ ಅದೊಂದು ಗಂಭೀರ ವಿಚಾರವೆಂದೇ ಅರ್ಥ. ಹೇಳುವ ರೀತಿ, ಮಾತಿನ ಏರಿಳಿತ, ಪದಬಳಕೆ ಇದೆಲ್ಲವೂ ಅವರಷ್ಟೇ ಸುಂದರ.
ಈ ರೀತಿಯ ಗೆಳೆಯನಿಗೆ ಇದೀಗ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿದೆ. ಅದು ಖುಷಿ ಕೊಟ್ಟಿದೆ...

ಡಾ.ಧನಂಜಯ ಕುಂಬ್ಳೆ ಮೂಲತ: ಗಡಿನಾಡು ಕಾಸರಗೋಡಿನ ಕುಂಬಳೆಯವರು. ಸಾಹಿತ್ಯ, ಸಂಸ್ಕೃತಿ ಸಂಶೋಧನೆ ಕ್ಷೇತ್ರಗಳಲ್ಲಿ ಕ್ರಿಯಾಶೀಲರು. ಕಣ್ಣೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ವಿದ್ಯಾರ್ಥಿಯಾಗಿರುವಾಗಲೇ 'ಪಾಲ್ಗಡಲ ಮುತ್ತುಗಳು' ಎಂಬ ಹನಿಗವನ ಸಂಕಲನವನ್ನು ಸಂಪಾದಿಸಿದರು. ಚೊಚ್ಚಲ ಕವನಸಂಕಲನ 'ಮೊದಲ ಪಾಪ' ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅನುದಾನ ಹಾಗೂ ಮುಂಬೈ ಕರ್ನಾಟಕ ಸಂಘದ 'ಕಾರ್ನಾಡು ಸದಾಶಿವರಾವ್ ಕಾವ್ಯ ಪ್ರಶಸ್ತಿ ಲಭಿಸಿದೆ.

'ನಾನು ಮತ್ತು ಆಕಾಶ' ವಿಮರ್ಶಾ ಕೃತಿಗೆ 2003ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅನುದಾನ ಲಭಿಸಿದೆ. 'ಹಾಡು ಕಲಿತ ಹಕ್ಕಿಗೆ' ಎರಡನೇ ಕವನ ಸಂಕಲನ. 'ಕಜಂಪಾಡಿ ರಾಮ' ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಪ್ರಕಟಗೊಂಡ ವ್ಯಕ್ತಿ ಚಿತ್ರಣ ಕೃತಿ.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕಣ್ಣೂರು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ 'ತುಳು ಕವಿ ಅರುಣಾಬ್ಜ ಮತ್ತು ಕುಮಾರವ್ಯಾಸ : ತೌಲನಿಕ ಅಧ್ಯಯನ'ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ರಾಷ್ಟ್ರ, ರಾಜ್ಯ, ವಿಶ್ವವಿದ್ಯಾಲಯ ಮಟ್ಟದ ಹಲವು ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ಹಾಗೂ ರಾಜ್ಯ, ಜಿಲ್ಲಾ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯ ಕಾರ್ಯದಶರ್ಿಗಳಲ್ಲೊಬ್ಬರಾಗಿ ಇವರು ಸಕ್ರಿಯರು.

ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ನ ಪ್ರಾಯೋಜಕತ್ವದ 2011ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಕವಿ, ಲೇಖಕ ಡಾ ಧನಂಜಯ ಕುಂಬ್ಳೆ ಅವರ ಹಣತೆ ಹಾಡು ಎಂಬ ಕವನ ಸಂಕಲನ ಹಸ್ತಪ್ರತಿ ಗೆದ್ದುಕೊಂಡಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರ ನಗದು ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಬವು 2012 ಜನವರಿ 26ರಂದು ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿದೆ.

- ಎಚ್.ಕೆ.

2 comments:

Anonymous said...

congrats kumble sir..nimma sahitya seve heege sada munduvareyali, mattastu prashastigalu nimage labhisali endu harysuttene-sowmya sagara

Anonymous said...

congrats to kumble sir

Post a Comment