ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಎಂಟನೇ ವರುಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ ಅವರ ಸಾಧನೆಯ ನೋಟ ಇಲ್ಲಿದೆ. ಇದು ನಮ್ಮ ಓದುಗರಿಗಾಗಿ. ಹಿರಿಯರಾದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಒಂದು ಕಡೆ ಹೀಗೆ ಹೇಳಿದ್ದಾರೆ." ಕನ್ನಡದ ಹೊಲದಲ್ಲಿ ಕೃಷ್ಣಶಾಸ್ತ್ರಿಗಳು ಕೃಷಿಮಾಡಿ ತೆಗೆದ ಬೆಳೆಯಲ್ಲಿ ತಮಗಾಗಿ ತೆಗೆದದ್ದು ಒಂದು ಪಾಲಾದರೆ , ಇತರರಿಗಾಗಿ ತೆಗೆದದ್ದು ಮೂರು ಪಾಲು.ಇದು ಪ್ರೊ.ಎ.ಆರ್ ಕೃಷ್ಣಶಾಸ್ತ್ರಿಗಳನ್ನು ಕುರಿತ ಹೇಳಿಕೆ.ಈ ಮಾತು ಪ್ರೊ.ಕಲಬುರ್ಗಿ ಅವರಿಗೆ ಸಹ ಚೆನ್ನಾಗಿ ಅನ್ವಯಿಸುತ್ತದೆ" ಇಂತಹ ಹಿರಿಯ ಸಂಶೋಧಕ, ಸಾಹಿತಿ ಈ ಬಾರಿಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರು.ಮಲ್ಲೇಶಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧ್ರುಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ.ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ 'ಯರಗಲ್ಲಿ'ನಲ್ಲಿ, ಮಾಧ್ಯಮಿಕ ಶಿಕ್ಷಣ 'ಸಿಂಧಗಿ'ಯಲ್ಲಿ ಜರುಗಿತು.'ಅವಿಭಕ್ತ ಕುಟುಂಬ'ದಿಂದ ಬಂದವರು. ವಿಜಾಪುರ'ವಿಜಯಾ ಕಾಲೇಜ್' ನಲ್ಲಿ 'ಬಿ.ಎ'.(ಕನ್ನಡ)ಪದವಿಯನ್ನು ಪ್ರಥಮ ವರ್ಗದಲ್ಲಿ, 'ಪ್ರಥಮ ರ್ಯಾಂಕ್', ಮತ್ತು 'ಯು.ಜಿ.ಸಿ.ಶಿಷ್ಯವೇತನ', ದ ಸಯಾಯ ಪಡೆದು ಗಳಿಸಿದರು. ಬಳಿಕ, ೧೯೬೨ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.


೧೯೬೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. ೧೯೮೨ರಲ್ಲಿ ಅಲ್ಲಿಯೆ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

'ಡಾ| ಎಂ.ಎಂ.ಕಲಬುರ್ಗಿ'ಯವರು ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ, ಇತಿಹಾಸ, ಹಸ್ತಪ್ರತಿಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಲನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ 'ಶ್ರೀ ತೋಂಟದಾರ್ಯ ಮಠ'ದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ , ಬೆಳಗಾವಿಯ ನಾಗನೂರು ಮಠದ 'ವೀರಶೈವ ಅಧ್ಯಯನ ಅಕಾಡೆಮಿ'ಯ ಹಾಗು ಶಿವಮೊಗ್ಗೆಯ 'ಆನಂದಪುರ ಮಠ'ದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.


ಡಾ| ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernceಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷಪದ ಇವರದಾಗಿತ್ತು.


ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗು ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು,ಸದಾ ಓದು,ಬರಹ,ಚಿಂತನೆ,ಪ್ರಕಟಣೆ, ಮಾರ್ಗದರ್ಶನ,ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ.ಸಾಹಿತ್ಯ, ಶಾಸನ, ಜಾನಪದ,ನಾಮ ವಿಜ್ಞಾನ,ಗ್ರಂಥ ಸಂಪಾದನೆ,ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ "ಆಳ್ವಾಸ್ ನುಡಿಸಿರಿ 2011" ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ನಮನ

ನೀರು ನೀರಡಿಸಿತ್ತು, ಕವನ ಸಂಕಲನ, ನಾಟಕ: ಕೆಟ್ಟಿತ್ತು ಕಲ್ಯಾಣ, ಸಂಶೋಧನೆ:ಕೆಲವು ಸಂಶೋಧನ ಗ್ರಂಥಗಳು:ಮಾರ್ಗ (೧,೨,೩,೪)
ಕನ್ನಡ ಹಸ್ತಪ್ರತಿ ಶಾಸ್ತ್ರ
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕನ್ನಡ ಸಂಶೋಧನ ಶಾಸ್ತ್ರ
ಕನ್ನಡ ನಾಮವಿಜ್ಞಾನ
ಧಾರವಾಡ ಜಿಲ್ಲೆಯ ಶಾಸನಸೂಚಿ
ಮಹಾರಾಷ್ಟ್ರದ ಕನ್ನಡ ಶಾಸನಗಳು
ಶಾಸನಗಳಲ್ಲಿ ಶಿವಶರಣರು
ಶಬ್ದಮಣಿದರ್ಪಣ ಸಂಗ್ರಹ
ಕನ್ನಡ ಕೈಫಿಯತ್ತುಗಳು
ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
ಸ್ವಾದಿ ಅರಸು ಮನೆತನ
ಸಾರಂಗಶ್ರೀ

ಕನ್ನಡ ವಿಶ್ವವಿದ್ಯಾಲಯದ ಮೂಲಕ (೧)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (೨)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.

ಈ ಹಿರಿಯ ಸಂಶೋಧಕ, ಸಾಹಿತಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ನಾಡೋಜ ಪ್ರಶಸ್ತಿ, 'ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ'
'ಆರು ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ'
'ರಾಜ್ಯೋತ್ಸವ ಪ್ರಶಸ್ತಿ'
'ಪಂಪ ಪ್ರಶಸ್ತಿ'
'ವರ್ಧಮಾನ ಪ್ರಶಸ್ತಿ'
'ವಿಶ್ವಮಾನವ ಪ್ರಶಸ್ತಿ'
೨೦೦೬ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಇವರನ್ನರಸಿ ಬಂದ ಪ್ರಶಸ್ತಿಗಳು ಅನೇಕ.

0 comments:

Post a Comment