ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನವದೆಹಲಿ: ಟೀವಿ ಮಾಧ್ಯಮಗಳ ಸ್ವಯಂ ನಿಯಂತ್ರಣವು ಇದ್ದೂ ಇಲ್ಲದಂತಿರುವ ವ್ಯವಸ್ಥೆಯಾಗಿದೆ ಇದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರ ನೇರ ನುಡಿ. ಟಿ.ವಿ.ಮಾಧ್ಯಮಗಳ ಇತ್ತೀಚೆನ ಧೋರಣೆಗಳಿಂದ ಬೇಸತ್ತ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ. ಮಾರ್ಕಂಡೇಯ ಕಾಟು ಇದೀಗ ಈ ಮಾಧ್ಯಮಗಳಿಗೆ ನೇರ ಪ್ರಶ್ನೆ ಎಸೆದಿದ್ದಾರೆ. 'ನೀವು (ಟೀವಿ ಚಾಲೆನ್‌ಗಳು) ಪತ್ರಿಕಾ ಮಂಡಳಿಯ ವ್ಯಾಪ್ತಿಗೆ ಬರಲು ಒಪ್ಪದಿದ್ದರೆ ಲೋಕಪಾಲ ವ್ಯಾಪ್ತಿಗೆ ಒಳಪಡಲು ಸಿದ್ಧವೇ' ಎಂದು ಮಾರ್ಕಾಂಡೇಯ ಕಾಟು ಪ್ರಶ್ನಿಸಿದ್ದಾರೆ.


ನಾವು ಯಾರಿಗೂ ಉತ್ತರದಾಯಿತ್ವ ಹೊಂದಿಲ್ಲ ಎಂದು ಟೀವಿ ವಾಹಿನಿಗಳು,ಟೀವಿ ಮಾಧ್ಯಮಗಳು ತಪ್ಪಿಸಿಕೊಳ್ಳುವುದಾದರೂ ಹೇಗೆ ಎಂದು ಕಾಟು ಪ್ರಶ್ನಿಸಿದ್ದಾರೆ.ಇಂದಿನ ದಿನದಲ್ಲಿ ಸ್ವಯಂ ನಿಯಂತ್ರಣ ಎನ್ನುವುದು ಅರ್ಥವಿಲ್ಲದ ಪದವಾಗಿ ಹೋಗಿದೆ. ಟೀವಿ ವಾಹಿನಿಗಳು ಜನ ಸಮೂಹದ ಮೇಲೆ ಭಾರೀ ಪ್ರಭಾವ ಹೊಂದಿರುವುದರಿಂದ ಅವು ಕೂಡಾ ಜನರಿಗೆ ಉತ್ತರದಾಯಿತ್ವ ಹೊಂದಿರುತ್ತವೆ ಎಂದು ಕಾಟು ಹೇಳಿದರು.

ನೀವು ಸ್ವಯಂ ನಿಯಂತ್ರಣದ ಹಕ್ಕಿನ ಬಗ್ಗೆ ಮಾತನಾಡುತ್ತೀರಿ. ಆದರೆ ನಿಮಗೆ ನೆನಪಿರಲಿ, ಸುಪ್ರೀಂ ಮತ್ತು ಹೈಕೋರ್ಟ್‌ ನ್ಯಾಯಾಧೀಶರು ಸಹ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಹೊಂದಿಲ್ಲ. ಸಂಸತ್ತು ಅವರಿಗೆ ವಾಗ್ಧಂಡನೆ ವಿಧಿಸಬಹುದಾಗಿದೆ ಎಂದು ಟೀವಿ ವಾಹಿನಿಗಳಿಗೆ ಮತ್ತೂಮ್ಮೆ ಎಚ್ಚರಿಸಿದ್ದಾರೆ.

0 comments:

Post a Comment