ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಇದೀಗ ಮಾಧ್ಯಮಗಳ ಸುಗ್ಗಿ!.ಕನ್ನಡದಲ್ಲಿ ಪತ್ರಿಕೆಗಳು ಸಂಖ್ಯೆ ಏರುತ್ತಿದೆ. ಅದೊಂದು ಖುಷಿಯೇ. ಆ ಮೂಲಕವಾದರೂ ಕನ್ನಡ ಗಟ್ಟಿಯಾಗುತ್ತಿದೆಯಲ್ಲಾ ಎಂಬ ಸಂತಸ. ಇದೀಗ ವಿ.ಆರ್.ಎಲ್ ಸಂಸ್ಥೆಯು ಹೊಸತಾಗಿ ಪತ್ರಿಕೆ ತರುವ ಕಾರ್ಯದಲ್ಲಿರುವಾಗಲೇ ಇದೇ ವಿ.ಆರ್.ಎಲ್ ಸಂಸ್ಥೆಯಿಂದ ಹೊರಬರುತ್ತಿದ್ದ ಉಷಾಕಿರಣ ಪತ್ರಿಕೆಯ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ವೆಂಕಟನಾರಾಯಣ ಸಂಪಾದಕತ್ವದಲ್ಲಿ ಕನ್ನಡದಲ್ಲಿ ಮತ್ತೊಂದು ಪತ್ರಿಕೆ ಹೊರಬಂದಿದೆ. ಸುವರ್ಣ ಟೈಮ್ಸ್ ಆಫ್ ಕರ್ನಾಟಕ.ಈಗಾಗಲೇ ಈ ಪತ್ರಿಕೆ ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ." ಜನಪರ ದನಿ " ಧ್ಯೇಯವಾಕ್ಯದೊಂದಿಗೆ ಈ ಹೊಸ ಪತ್ರಿಕೆ ಮೂಡಿಬರುತ್ತಿದೆ.ಪತ್ರಿಕೆ ಹೇಳಿಕೊಂಡಂತೆ ಜನರ ದನಿಯಾಗಿ ಜನಪರ ದನಿಯಾಗಿ ಈ ಪತ್ರಿಕೆಯನ್ನು ರೂಪಿಸಿ ಜನರ ಕೈಗಿಡುವುದು ಉದ್ದೇಶವಂತೆ. ಈ ಹೊಸ ಪತ್ರಿಕೆಗೆ "ಈ ಕನಸು.ಕಾಂ" ವತಿಯಿಂದ ಶುಭ ಹಾರೈಕೆಗಳು.

0 comments:

Post a Comment