ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ದಿನದ ಜಂಜಾಟ...ಅದೇ ಕೆಲಸದ ಒತ್ತಡ...ಒಂದಿಷ್ಟು ಲೈಫ್ ನಲ್ಲಿ ರಿಲೀಫ್ ಬೇಕು, ಗೊಂದಲದ ಗೂಡಾಗಿ ಹೋಗಿದ್ದ ತಲೆಗೆ ಒಂದಷ್ಟು ರಿಲ್ಯಾಕ್ಸ್ ಬೇಕು... ಅದೇ ಕೆಲ್ಸ...ಅದೇ ಕಚೇರಿ... ಅದೇ ರಾಜಕೀಯ... ಅದೇ ಕಾಲೆಳೆಯೋ ಮಂದಿ... ವಿಘ್ನ ಸಂತೋಷಿಗಳ ನಡುವೆ ಬದುಕಿ ಬೆಂಡಾಗಿ ಹೋಗಿದ್ದೆ... ನೂರಾರು ಯೋಚನೆ...ಯೋಜನೆ ... ತಲೆ ಅಕ್ಷರಶಃ ಭಾರ ಭಾರ... ಏನ್ ಮಾಡಿದ್ರೂ ಮನಸ್ಸು ನಿಯಂತ್ರಣದಲ್ಲಿ ಸಿಗ್ತಾ ಇಲ್ಲ... ತುಸು ನೆಮ್ಮದಿ, ಮನಕ್ಕೆ ಒಂದಷ್ಟು ಖುಷಿ ಬೇಕು ಎಂಬ ಆಶೆ ಮನೆಮಾಡಿತು.ದಕ್ಷಿಣ ಕನ್ನಡದ ಬಿಸಿಲ ಬೇಗೆ, ಇದೆಲ್ಲಕ್ಕಿಂತ ತುಸು ಮುಕ್ತಿಗೆ ಮನಸ್ಸು ಹಪಹಪಿಸುತ್ತಿತ್ತು. ದೂರದ ಗೆಳೆಯನಿಗೆ ಒಂದು ದೂರವಾಣಿ... ಹಾಗೇ ಒಂದು ರೌಂಡ್ ಹೋಗಿ ಬರೋಣವೆಂದೆ. ಸರಿ ಎಂದವನೇ 4*4 ಮಹೀಂದ್ರಾ ಏರಿ ಬಂದ.ಜೊತೆಗೆ ಕ್ಯಾಮರಾ ಹೆಗಲಿಗೇರಿಸಿ ಮಡಿಕೇರಿಯತ್ತ ಪಯಣ ಬೆಳೆಸಿದೆ. ದಕ್ಷಿಣ ಕನ್ನಡದಿಂದ ಮಡಿಕೇರಿಯತ್ತ ಸಾಗಿತು ನಮ್ಮೀ ಪಯಣ... ಹಾದಿಮಧ್ಯೆ ಕಲ್ಲಡ್ಕದ ಲಕ್ಷ್ಮೀಹೋಟೆಲ್ ನಲ್ಲಿ ಖಡಕ್ ಕೆಟಿ ಸವಿ ಸವಿದೆವು. ನೀರು ದೋಸೆಯ ಜೊತೆಗೆ ಚಟ್ನಿ...ಇನ್ನೂ ಕೈ ಪರಿಮಳ ಮಾಸಿಲ್ಲ. ನಾಲ್ಕು ಪ್ಲೇಟ್ ಬಾಳೆ ಹಣ್ಣಿನ ಬನ್ಸು ಕಟ್ಟಿಕೊಂಡು ಪಯಣ ಮುಂದುವರಿಸಿದೆವು.ಯಮಯಾತನೆ...ಮಡಿಕೇರಿಯ ರಸ್ತೆಯೆಂದರೆ ಉಸ್ಸಪ್ಪಾ...ನಮ್ಮ ಜೀಪಿಗೂ ಕಣ್ಣೀರು ಬರುತ್ತಿತ್ತು. ಮಡಿಕೇರಿಯತ್ತ ಎಂಟ್ರಿಕೊಡುತ್ತಲೇ ಸಾಕಪ್ಪಾ ಸಾಕೆಂಬಂತಾದರೂ ಹಿತವಾದ ಗಾಳಿ, ಆಹ್ಲಾದಕರ ತಣ್ಣನೆಯ ವಾತಾವರಣ...ಮುಖಕ್ಕೆ ಮುತ್ತಿಕ್ಕುತ್ತಿದ್ದ ಮೋಡ...ಎಲ್ಲವೂ ಸಂತಸ ನೀಡುತ್ತಿದ್ದವು.ಪೇಟೆ - ಪಟ್ಟಣದ ಜಂಜಾಟ, ಕಚೇರಿ ವಾತಾವರಣದಿಂದ ದೂರವಾದಷ್ಟು ಖುಷಿ...ಹೌದು ಎಂಬಷ್ಟರ ಮಟ್ಟಿಗೆ ಸಂತಸ ಮಡಿಕೇರಿಗೆ ಎಂಟ್ರಿ ಕೊಡುತ್ತಲೇ ನಮಗೆ ದೊರಕಿತ್ತು.
ಇಲ್ಲೇ ಇದ್ದು ಬಿಡೋಣ ಎಂಬಂತೆ!

ಮಡಿಕೇರಿಯ ವಾತಾವರಣವೇ ಹಾಗೆ... ಕೊಡವ ಸಂಸ್ಕೃತಿ, ಸಂಪ್ರದಾಯ, ಬೆಡಗು , ಬಿನ್ನಾಣ... ಆತಿಥ್ಯ ಅವೆಲ್ಲವೂ ಪ್ರವಾಸಿಗರಿಗೆ ಎಲ್ಲಿಲ್ಲದ ಖುಷಿಕೊಡೋದ್ರಲ್ಲಿ ಸಂದೇಹವಿಲ್ಲ. ಏನೇ ಆಗ್ಲಿ ಒಂದೆರಡು ದಿನವಾದ್ರೂ ಇಲ್ಲಿ ಉಳ್ಕೊಳ್ಳೇ ಬೇಕು ಎಂಬ ತೀರ್ಮಾನ ತೆಗೆದುಕೊಂಡೆವು.
ಮಡಿಕೇರಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಇದೀಗ ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಇಲಾಖೆಯ ಪರವಾನಿಗೆ ಪಡೆದ ಸುಮಾರು 30ರಷ್ಟು ಸ್ಟೇ ಹೋಂ ಮಡಿಕೇರಿಯಲ್ಲಿವೆ. ಹಿತವಾದ ವಾತಾವರಣದ ಮಡಿಕೇರಿಯಲ್ಲಿ ಒಂದೆರಡು ದಿನ ಇದ್ದು ಬಿಡೋಣ ಎಂದು ಬರುವವರ ಸಂಖ್ಯೆ ಅಧಿಕವಾಗುತ್ತಲೇ ಹೋಂ ಸ್ಟೇಗಳ ಸಂಖ್ಯೆಯೂ ಹೆಚ್ಚತೊಡಗಿವೆ. ಈಗ ನೂರಾರು ಸ್ಟೇ ಹೋಂಗಳು ಅಲ್ಲಲ್ಲಿ ತಲೆಯೆತ್ತಿಕೊಂಡಿವೆ. ಆದರೆ ಅವ್ಯಾವವೂ ಅಧಿಕೃತ ಪರವಾನಿಗೆಯಲ್ಲಿ ನಡೆಯುತ್ತಿಲ್ಲ.

ಅಂದೆಂದೋ ಮಡಿಕೇರಿಗೆ ಹೋದಾಗ ಪರಿಚಯವಾದ ಮೋಹನ ಮೊನ್ನಪ್ಪ ಹಾಗೂ ಶಶಿ ಮೊನ್ನಪ್ಪ ದಂಪತಿ ತಟ್ಟನೆ ನೆನಪಿಗೆ ಬಂದ್ರು. ಅಲ್ಲೇ ಒಂದು ಕಾಲ್. ಪ್ರೀತಿಯ ಸ್ವಾಗತ. ನಮ್ಮ ಹೋಂ ಸ್ಟೇ ನಿಮಗಾಗಿ ಸಿದ್ಧಪಡಿಸಿದ್ದೇವೆ. ಬನ್ನಿ ಎಂಬ ಪ್ರೀತಿಯ ಆಹ್ವಾನ. ಹೌದು ಆ ದಂಪತಿಗೆ ಪ್ರೀತಿಯ ಎರಡು ಮಕ್ಕಳು . ಮಗಳು ಮೈಥಲಿ. ಈಕೆಯ ಹೆಸರಲ್ಲೇ ಒಂದು ಸ್ಟೇ ಹೋಂ ನಿರ್ಮಿಸಿದ್ದಾರೆ. ಮನೆಯ ಸನಿಹದಲ್ಲೇ ಇದೆ. ವಿಶಾಲವಾದ ಡೈನಿಂಗ್ ರೂಂ. ಪ್ರತ್ಯೇಕ ಬೆಡ್ ರೂಂ. ಅಟೇಚ್ಡ್ ಬಾತ್ ರೂಂ. ವ್ಯವಸ್ಥಿತವಾದ ಬಾತ್ ರೂಂ ಅನ್ನೋದೇ ಸೂಕ್ತ. ಟಿ.ವಿ. , ಬೆಡ್, ಸಂಪೂರ್ಣ ವ್ಯವಸ್ಥೆ ಚೆನ್ನಾಗಿದೆ. ಕಾರು ಪಾರ್ಕಿಂಗ್ ಮಾಡೋದಕ್ಕೂ ವ್ಯವಸ್ಥೆಯಿದೆ. ಡ್ರೈವರ್ ರೂಂ ಪ್ರತ್ಯೇಕ. ಕೊಡಗಿನ ಸವಿ ಸವಿ ಊಟದ ರುಚಿ ಇಲ್ಲಿ ಲಭ್ಯ. ಅದಕ್ಕಿಂತಲೂ ಹೆಚ್ಚಾಗಿ ಈ ದಂಪತಿಗಳ ಸೇವೆ; ಕಾಳಜಿ...ಪ್ರೀತಿ ತುಂಬಿದ ನಾಲ್ಕು ಮಾತುಗಳು ಮನಸ್ಸು ತುಂಬಿ ಬರುವಂತೆ ಮಾಡಿತ್ತು.

ಹೆಚ್ಚೇನೂ ವೆಚ್ಛವಿಲ್ಲ. ಆದರೆ ಆ ಮೈಥಲಿ ರೆಸಾರ್ಟ್ ಸೇಫ್...ಅಷ್ಟೇ ಖುಷಿ ಕೊಡುವಂತಹುದು. ಕೊಡಗಿಗೆ ಹೋದರೆ ಒಮ್ಮೆ ಅಲ್ಲಿಹೋಗಿ ಬನ್ನಿ. ಅವರ ಆತಿಥ್ಯ ಸವಿದು ಬನ್ನಿ.

ಕೊಡಗು (ಕೂರ್ಗ್ ಎಂಬ ಆಂಗ್ಲೀಯ ಬಳಕೆಯೂ ಇದೆ) ಕರ್ನಾಟಕದ ಒಂದು ಜಿಲ್ಲೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ. ಕೊಡಗು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ದಕ್ಷಿಣ ಕನ್ನಡದ ಸೀಮೆಗೆ ಹೊಂದಿಕೊಂಡಂತೆ ಇದೆ, ಇದರ ಪಕ್ಕದ ಜಿಲ್ಲೆಗಳು - ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆ. ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆ. ಇಲ್ಲಿಯ ಜನಸಂಖ್ಯೆ ೫೪೫,೩೨೨ (೨೦೦೧ ರಲ್ಲಿ) ಇತ್ತು.

ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಕೊಡಗಿಗೆ ಇದೆ.ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ರಾಜ್ಯವಾಗಿತ್ತು.ಕ್ರಮೇಣ ಬ್ರಿಟಿಷರು ಕೊಡಗನ್ನು ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಿಸಿದರು.ಈ ಜಿಲ್ಲೆಯಲ್ಲಿ ಕಾಫಿಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೩/೧ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ, ಮುಖ್ಯವಾಗಿ ಮಡಿಕೇರಿಯಲ್ಲಿ: ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,ತಲಕಾವೇರಿ, ಸೊಮವಾರಪೇಟೆ ತಾಲುಕಿನಲ್ಲಿ: ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ದನ್ ದೇವಸ್ಥಾನ, ವೀರಭೂಮಿ,ದುಭಾರೆ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮನ ಕೆರೆ,ಮಲ್ಲಳ್ಳಿ ಜಲಪಾತ, ವಿರಾಜಪೇಟೆಯಲ್ಲಿ: ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್ ಇದೆ.

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು

- ಟೀಂ ಈ ಕನಸು.

3 comments:

Ravi said...

madikeri pravaasigarige tavarooru. Homestay ondu sundara kalpane. Kodagaru Aathithyakke hesaruvaasi. Madikeriya sundara homestayalli tangidha anubhava, madikeriya matthu kodavara vichaaravaagi thamma anisikegalannu thumba chennagi sundara chitragalondhige chitrisideeri. lekana chenngi moodibandhide.

Anonymous said...

ಉತ್ತಮ ಬರಹ. ಮೈಥಿಲಿ ಹೋಂ ಸ್ಟೇ ದೂರವಾಣಿ ಸಂಖ್ಯೆ ನೀಡಿದ್ದರೆ ಚೆನ್ನಾಗಿತ್ತು. ಅರುಣ್‌ ಕಾಸರಗುಪ್ಪೆ

KISHORE VIDYA KAVEESH said...

The first time I had been to Coorg in 2005 went in search of home stays visited around 6 of them was not satisfied with the cleanliness at last I found Maithili Home Stay. One of the Best Home Stay where, The Hospitality, Warmth, Affection Ambiance you feel like you are in your own home. Since then we have been visiting here regularly and referring our friends & relatives.
In any aspects you are guided well we are simply touched and fascinated.

Post a Comment