ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಈತ ತ್ಯಾಗ ಚಕ್ರೇಶ್ವರ.ಕ್ರಿ.ಶ.1604ರಲ್ಲಿ ವೇಣೂರಿನ ಎತ್ತರದ ಪ್ರದೇಶದಲ್ಲಿ ಈತನ ವಿಗ್ರಹ ಪ್ರತಿಷ್ಟಾಪಿಸಲ್ಪಟ್ಟಿತು.ಅಂದಿನಿಂದ ಇಂದಿನ ತನಕ ತ್ಯಾಗ - ವೈರಾಗ್ಯದ ಪ್ರತೀಕವಾಗಿ ವೇಣೂರಿನಲ್ಲಿ ಈತ ನೆಲೆನಿಂತಿದ್ದಾನೆ.ಸುಂದರ ಪ್ರಕೃತಿ ಸೌಂದರ್ಯದ ನೆಲೆವೀಡಾದ ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥಕ್ಷೇತ್ರವಾದ ಧರ್ಮಸ್ಥಳದಿಂದ 35ಕಿಲೋ ಮೀಟರ್ ದೂರದಲ್ಲಿ ವೇಣೂರು ಕ್ಷೇತ್ರವಿದೆ. ಕರ್ನಾಟಕದ ಪ್ರಸಿದ್ಧ ಜೈನ ಕ್ಷೇತ್ರವಾದ ವೇಣೂರು ಸಾಮರಸ್ಯದ ಸಂಗಮವಾಗಿ ಒಂದು ಬಾಂಧವ್ಯದ ನೆಲೆವೀಡಾಗಿ ಪ್ರಸಿದ್ಧಿ ಪಡೆದಿದೆ.
ಮೂಡಬಿದಿರೆಯಿಂದ ಬೆಳ್ತಂಗಡಿ ಮಾರ್ಗವಾಗಿ ಸಂಚರಿಸಿದರೆ ಕೇವಲ 20ಕಿಲೋಮೀಟರ್ ಕ್ರಮಿಸುತ್ತಲೇ ಈ ಕ್ಷೇತ್ರದ ದರುಶನವಾಗುತ್ತದೆ. ಹೆದ್ದಾರಿಯ ಎಡ ಪಾರ್ಶ್ವದಲ್ಲೇ ದಿಣ್ಣೆಯೊಂದರ ಮೇಲೆ ವಿರಾಟ್ ವಿರಾಗಿಯ 35 ಅಡಿಗಳೆತ್ತರದ ವಿಗ್ರಹ ಗೋಚರಿಸುತ್ತದೆ.

ಕ್ರಿ.ಶ. 1604ರಲ್ಲಿ ಏಕಶಿಲೆಯಿಂದ ಕೆತ್ತಲ್ಪಟ್ಟ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಸರಿ ಸುಮಾರು ಕಾರ್ಕಳದ ಗೊಮ್ಮಟೇಶ ವಿಗ್ರಹವನ್ನು ಒಂದಷ್ಟು ಹೋಲುವ ರೀತಿಯಲ್ಲಿ ಈ ವಿಗ್ರಹವಿದೆ. ಭವ್ಯ ಬಾಹುಗಳು, ನೀಳ ದಪ್ಪವಾದ ಕೈಗಳು, ತುಂಬಿದ ತುಟಿ, ತುಸು ಬಾಗಿದ ಮೂಗು, ವಿಶಾಲವಾದ ಕೆನ್ನೆಗಳು, ದೃಢವಾಗಿ ಉಬ್ಬಿದ ಕೊರಳು, ಗುಂಗುರು ಕೂದಲು, ನೀಳ ಕಿವಿ, ಮಂದಸ್ಮಿತ ಮುಖಾರವಿಂದದಿಂದ ಕೂಡಿದ ಸುಂದರ ವಿಗ್ರಹ ಇದಾಗಿದೆ.

ಬಾಹುಬಲಿ ಮೂರ್ತಿಯ ಪಕ್ಕದಲ್ಲಿ ಶಿಲಾ ಶಾಸನಗಳಿವೆ. ಈ ಶಾಸನಗಳಲ್ಲಿ ವಿಗ್ರಹ ಪ್ರತಿಷ್ಠಾಪನೆಯ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಪುಂಜಳಿಕೆಯ ಅರಸನಾದ ತಿಮ್ಮರಾಜನು ಶಾ.ಶ.1526ನೇ ಶೋಭಕೃತು ಸಂವತ್ಸರದ ಪಾಲ್ಗುಣ ಶುದ್ಧ 10 ಪುಷ್ಯ ನಕ್ಷತ್ರದ ಗುರುವಾರ ಅಂದರೆ ಕ್ರಿ.ಶ. 1604ರ ಮಾರ್ಚ್ ಒಂದರಂದು ಪ್ರತಿಷ್ಟಾಪಿಸಿದ ಎಂಬ ಉಲ್ಲೇಖ ಗೋಚರಿಸುತ್ತಿದೆ.

- ಟೀಂ ಈ ಕನಸು

2 comments:

shivakiran k said...

venoor na gommateshvara na bagge kiru parichya ......supper e kanasu team.....

shivakiran k said...

venoorina gommateshvarana bagge kiru parichaya supper e kanasu ......

Post a Comment