ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಸುದ್ದಿಮಾಡಲು,ಹೋಗಿ,ಸುದ್ದಿಮನೆಯಲ್ಲಿ ಸುದ್ದಿಯಾದ ನಮ್ಮ "ಸತೀಶನ" ಕಥೆ.
ನಾವು,ಪತ್ರಿಕೋದ್ಯಮ,ವಿಭಾಗದ ವಿಧ್ಯಾರ್ಥಿಗಳು,ಸುದ್ದಿಮಾಡುವುದು,ಲೇಖನಗಳನ್ನು,ಬರೆಯುವುದು,ಬರೆದಂತಹವುಗಳನ್ನು,ವಿವಿಧ ಪತ್ರಿಕೆಗಳಿಗೆ ಕಳಿಸುವುದು,ನಂತರ ಅವುಗಳ ಪ್ರಕಟಣೆಗಾಗಿ ಕಾಯುವುದು ನಮ್ಮ ದಿನ ನಿತ್ಯದ ಕೆಲಸ.ನಮ್ಮ ವಿಭಾಗದಲ್ಲಿ ,ಪ್ರತಿ ಶನಿವಾರ ತಪ್ಪದೆ ವಿವಿಧ ಪತ್ರಿಕೆಗಳಲ್ಲಿ,ಹೆಸರು ಮಾಡಿದ ಹಿರಿಯ ಪತ್ರಕರ್ತರನ್ನು ಆಹ್ವಾನಿಸಿ,ಅವರಿಂದ ನಮಗೆ ಉಪನ್ಯಾಸ ಮಾಡಿಸುತ್ತಾರೆ. ಉಪನ್ಯಾಸದ ನಂತರ ಆ ಉಪನ್ಯಾಸದ ಬಗ್ಗೆ ಒಂದು ಸುದ್ದಿ ಮಾಡಬೇಕು ನಂತರ ವಿವಿಧ ಪತ್ರಿಕೆಗಳಿಗೆ ತಲುಪಿಸುವ ಕೆಲಸ ವಿಧ್ಯಾರ್ಥಿಗಳೇ ಮಾಡಬೇಕು.
ಹೀಗೆ ಒಂದು ದಿನ ನಮ್ಮ ವಿಭಾಗಕ್ಕೆ ಹೆಸರಾಂತ ಪತ್ರಿಕೆಯ ವರದಿಗಾರ ಆಗಮಿಸಿದ್ದರು .ಬಂದತಂಹ ವರದಿಗಾರ ತನ್ನ ಅನುಭವವನ್ನು ನಮ್ಮ ಜೊತೆಯಲ್ಲಿ ಮುಕ್ತವಾಗಿ ಹಂಚಿಕೊಂಡರು ಆನಂತರ ಪತ್ರಿಕೆಗಳಲ್ಲಿ ವರದಿ ಮಾಡುವದು ಹೇಗೆ ಎನ್ನುವುದರ ಬಗ್ಗೆ ತಿಳಿಸಿದರು.ಕೆಲವು ಗಂಟೆಗಳನಂತರ ಉಪನ್ಯಾಸ ಮುಗಿಯಿತು,ನಮ್ಮ ವಿಭಾಗದ ಉಪನ್ಯಾಸಕರಾದ,ಸುಭಾಷ ಬಣಗಾರ,ಮತ್ತು ಕುಮಾರಸ್ವಾಮಿ ,ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಸುದ್ದಿ ಸಿದ್ಧಪಡಿಸಿ ಪತ್ರಿಕೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನನಗು ನನ್ನ ಗೆಳೆಯರಾದ ಸತೀಶಕುಮಾರ,ಮತ್ತು ಮಂಜುನಾಥನಿಗೆ,ವಹಿಸಿದ್ದರು.

ಗುರುಗಳ ಮಾತಿಗೆ ತಲೆ ಬಾಗಿ ಸುದ್ದಿ ಕಚೇರಿಗಳತ್ತ ನಾವು ತೆರಳಿದೆವು... ಇಲ್ಲೇ ನೋಡಿ...ಸುದ್ದಿಕೊಡಲು ಹೋದಾತನೇ ಸುದ್ದಿಯಾದ ರಸಭರಿತ ಕಥೆ ಹುಟ್ಟಿದ್ದು!

ಪತ್ರಿಕಾ ಕಚೇರಿಯ ಒಳಹೊಕ್ಕೆವು. ಸಂಪಾದಕರು ಸ್ವಲ್ಪ ಕೆಲಸದ ಒತ್ತಡದಲ್ಲಿದ್ದರು. ನಮಗೆ ಕೊಂಚ ಕುಳಿತುಕೊಳ್ಳುವಂತೆ ಸೂಚಿಸಿದರು.ನಾವು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಸುದ್ದಿಮನೆ ತುಂಬಾ ಓಡಾಡಿ ಸೂಕ್ಷ್ಮ ವಿಚಾರ ತಿಳಿದುಕೊಳ್ಳತೊಡಗಿದೆವು. ಸಂಪಾದಕರ ದೃಷ್ಠಿ ಆಗಾಗ ನಮ್ಮತ್ತ ತಿರುಗುತ್ತಿತ್ತು.

ಸ್ವಲ್ಪ ಸಮಯದ ನಂತರ ಸಂಪಾದಕರು ಬಂದರು. ನಮ್ಮ ಕಡೆಗೆ ತಿರುಗೆ " ಎನ್ರಪ್ಪ ಸುದ್ದಿನಾ?" ಎಂದರು.ಮುಕ್ತ ಮಾತುಗಳು, ಆತ್ಮೀಯವಾಗಿ ವಿಚಾರ ವಿಮರ್ಶೆಗಳು ನಡೆದವು. ಏನತ್ಮಧ್ಯೆ ನಮ್ಮ ಬಿಡುವಿನ ವೇಳೆ ಹೇಗೆ ಕಳೆಯುತ್ತೀರಿ ಎಂಬ ಪ್ರಶ್ನೆ ಸಂಪಾದಕರಿಂದ ಬಂತು.

ನಾವು ಕೆಲಸ ಮಾಡ್ತಿವಿ ಎಂದೆವು. ಅದಕ್ಕೆ ಯಾವ ಕೆಲಸ ಮಾಡ್ತಿರಾ ಎಂಬ ಪ್ರಶ್ನೆ... ನಾನು ಆಟ ಆಡುವೆ ಸರ್ ಎಂದೆ.ನನ್ನ ಗೆಳೆಯ ಮಂಜುನಾಥ ನಾನು ಅಂಗಡಿಯಲ್ಲಿ ಕೆಲಸ ಮಾಡುವೆ ಎಂದ.ಇನ್ನೋರ್ವ ಗೆಳೆಯ ಸತೀಶನಿಗೆ ಕೇಳಿದರು ಆಗ ಸತೀಶ ಚಡಪಡಿಸಲು ಸುರುಮಾಡಿದ ಅವನ ವರ್ತನೆಯನ್ನು ಗಮನಿಸಿದ ನಾನು " ಸರ್"ನಮ್ಮ ಸತೀಶ ಕಾಲೇಜು ಮುಗಿದ ನಂತರ ರಾಜಕೀಯ ಮಾಡ್ತನೆ ಸಾರ್ ಎಂದೆ.

ನನ್ನ ಮಾತುಕೇಳಿದ ತಕ್ಷಣವೆ ಸತೀಶನಿಗೆ ನೀನು ರಾಜಕಾರಣಿನಾ? ಎಂದರು ಆಗ "ಸತೀಶ ಹೌದು'ಸರ್ ಎಂದು ತಲೆಯಾಡಿಸಿದ. ನನ್ ಗೆಳೆಯ ಮಂಜುನಾಥ ಸುಮ್ಮನಾಗಲಿಲ್ಲ. ನಮ್ ಸತೀಶ ಗುಲ್ಬರ್ಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 'ಬನ್ನೂರು ಗ್ರಾಮ ಪಂಚಾಯ್ತಿ ಸದಸ್ಯ ಎನ್ನಬೇಕೇ...!

ನಮ್ಮ ಮಾತು ಕೇಳಿದ ಸಂಪಾದಕರು ಆಶ್ಚರ್ಯಚಕಿತರಾದರು. ಅಲ್ಲಿ ಕುಳಿತಿದ್ದಾ ತಮ್ಮ ವರದಿಗಾರನನ್ನು ಕರೆದು ಸತೀಶನ ಬಗ್ಗೆ ಒಂದು ಸುಂದರವಾದ ಸುದ್ದಿಮಾಡಲು ಹೇಳಿದರು. ಕಾಲೇಜಿಗೆ ಹೊರಡಿ ನಾಳೆ ನಿಮ್ಮ ಗೇಳೆಯನ ಬಗ್ಗೆ ಪ್ರಕಟವಾಗುವ ಲೇಖನ ತಪ್ಪದೆ ಓದಿ ಎಂದರು.

ಮರುದಿನ ಪತ್ರಕೆಯಲ್ಲಿ ವರ್ಣರಂಜಿತವಾಗಿ ನಮ್ಮ ಸತೀಶನ ಕುರಿತಾದ ಲೇಖನ ಪ್ರಕಟವಾಗಿತ್ತು! ಗೆಳೆಯರೆ ನೋಡಿ ನಮ್ಮ ಸತೀಶ ಯಾವರೀತಿಯಲ್ಲಿ ಹೆಸರಾದ!

-ತೋಟೇಂದ್ರ.ಎಸ್.ಮಾಕಲ್.
ಪತ್ರಿಕೋದ್ಯಮ ವಿಭಾಗ.ಗುಲ್ಬರ್ಗಾ ವಿ.ವಿ.

3 comments:

Anonymous said...

suddhi maneyalli sudhhine mukhya alva.. so hagagi nimde suddi chenagide antha nim frnd baggene madidare.. nan agidru hage madtha idde. thumba cchenagide. all d best..

Darshan,
journalism student,
Alva's college, moodbidri..

shivu said...

Congrates Totendra s.makal,
suddi kodalu hogi suddiyadavana lekhana tumba chennagi barediddiri. all the best .....

Shivraj.V.Marchatahal
FUTERE JOURNALIST
Raichur

Amaresh Nayak said...

congrates, Totendra
namma sutta mutta iruva suddi tilidukondu suddi maduvadu impartent.
nimma suddi tumba channgide all the best,
Amaresh Nayak
Jalahalli.

Post a Comment