ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಡಿಕೇರಿ:ಕೊಡಗಿನಲ್ಲಿ ಹುಲಿಗಳ ಕಾರುಬಾರು.ಯಾವಾಗ ನೋಡಿದರೂ ಹುಲಿ ದಾಳಿಯ ಸುದ್ದಿ ಎಲ್ಲೆಡೆ ಕೇಳಿಬರುತ್ತಿವೆ. ಹುಲಿ ಹಿಡಿಯುವ ಹಲವು ಪ್ರಯತ್ನಗಳ ನಡುವೆ ಮತ್ತೊಮ್ಮೆ ಹುಲಿದಾಳಿಗೆ ದನವೊಂದು ಬಲಿಯಾಗಿದೆ. ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನಲ್ಲಿ ಹುಲಿ ದಾಳಿ ಮುಂದುವರಿದ್ದು, ರಾತ್ರಿಯ ಹೊತ್ತಲ್ಲಿ ಕೋಣಂಗೇರಿ ಬೊಳದಂಡ ಪೆಮ್ಮಯ್ಯ ಅವರ ಹಟ್ಟಿಯಿಂದ ಗಬ್ಬದ ಹಸುವನ್ನು ಸುಮಾರು 100 ಮೀ. ದೂರಕ್ಕೆ ಎಳೆದೊಯ್ದ ಹತ್ಯಮಾಡಿದೆ. ಆದರೆ ಕೊಡಗಿನಲ್ಲಿ ನಡೆಯುತ್ತಿರುವುದು ಹುಲಿ ದಾಳಿಯೋ ಅಥವಾ ಚಿರತೆಯ ಪ್ರಭಾವವೋ ಎಂಬುದು ಮತ್ತೊಂದು ಸಂದೇಹವಾಗಿದೆ.ಕಳೆದ ಹದಿನೈದು ದಿನಗಳಿಂದ ಹುಲಿಗಳ ಕಾಟ ಈ ವ್ಯಾಪ್ತಿಯಲ್ಲಿ ಹೆಚ್ಚಾಗಿವೆ. ಹುಲಿಯನ್ನು ಹಿಡಿಯುವ ಸಾಹಸವೂ ವ್ಯರ್ಥವಾಗಿವೆ.

ಸೋಮವಾರ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅರಣ್ಯಾಧಿಕಾರಿಗಳಿಗೆ ತತ್‌ಕ್ಷಣವೇ ಹುಲಿಯನ್ನು ಹಿಡಿಯಲು ಶ್ರಮಿಸುವಂತೆ ಆದೇಶಿಸಿದರು.
ಅರಣ್ಯ ಸಂರಕ್ಷಣಾ ಮುಖ್ಯ ಕಾರ್ಯನಿರ್ವಾಹಕ ವಿ.ಬಿ. ಸಿಂಗ್‌ ಅವರು ಹುಲಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ವಾರದೊಳಗೆ ಹುಲಿ ಹಿಡಿಯುವ ಭರವಸೆ ನೀಡಿದರು. ಅಲ್ಲದೇ 40 ಅರಣ್ಯ ಸಿಬಂದಿಯನ್ನು ಹುಲಿ ಹಿಡಿಯುವ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುವಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದ್ದಾರೆ.

0 comments:

Post a Comment