ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:30 PM

ಉಚಿತ ಯೋಗ ತರಬೇತಿ

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ಇಲ್ಲಿನ ವಿಜಯ ಕಮರ್ಷಿಯಲ್ ಕಾಂಪ್ಲೆಕ್ಸ್, ಪ್ರಾಥಮಿಕ ಸರಕಾರಿ ಶಾಲೆ ಎದುರು, ಮಣ್ಣಗುಡ್ಡೆ, ಇಲ್ಲಿ ಸಮಾಜಮುಖೀ ಕಾರ್ಯಕ್ರಮದ ಅಂಗವಾಗಿ 'ಉತ್ತಮ ಜೀವನ ಶೈಲಿಗಾಗಿ ಹಾಗೂ ಆರೋಗ್ಯ ರಕ್ಷಣೆಗಾಗಿ ಯೋಗ' ಎಂಬ ಧ್ಯೇಯದಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಅಂತರ ರಾಷ್ಟ್ರೀಯ ತೀರ್ಪುಗಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ತರಗತಿಯನ್ನು ನಡೆಸಲಿದ್ದಾರೆ.ನವೆಂಬರ್17 ಗುರುವಾರದಿಂದ 30.ರ ವರೆಗೆ ಪ್ರತಿದಿನ ಬೆಳಿಗ್ಗೆ 6.45 ರಿಂದ 7-45ರ ವರೆಗೆ ನಡೆಯಲಿವೆ. (ಭಾನುವಾರ ರಜೆ )

ಈ ಶಿಬಿರದಲ್ಲಿ ಸರಳ ವ್ಯಾಯಾಮಗಳು, ಸೂರ್ಯನಮಸ್ಕಾರ, ಕ್ರಿಯೆಗಳು, ಮುದ್ರೆಗಳು, ಯೋಗಾಸನಗಳು, ಸರಳ ಪ್ರಾಣಾಯಾಮಗಳು, ಹಾಗೂ ಸರಳಧ್ಯಾನಗಳನ್ನು ಕಲಿಸಿ ಕೊಡಲಾಗುವುದು. ಮೊದಲ 60 ಮಂದಿಗೆ ಆದ್ಯತೆ. ಆಸಕ್ತರು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ : ವಿಜಯ ಕಮರ್ಷಿಯಲ್ ಕಾಂಪ್ಲೆಕ್ಸ್ ಕಛೇರಿ. ಕಚೇರಿ ದೂ.ವಾ.ಸಂಖ್ಯೆ: 0824-4268524 ಯನ್ನು ಸಂಪರ್ಕಿಸಬಹುದು.

0 comments:

Post a Comment