ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:13 PM

ಇದು ರಸ್ತೆಯಲ್ಲ...

Posted by ekanasu

ಪ್ರಾದೇಶಿಕ ಸುದ್ದಿ
ವೇಣೂರು: ಇದು ರಸ್ತೆಯಲ್ಲ...ರಸ್ತೆಯಂತಿರುವಂತಹುದು..ಹೌದು...ಹೊಂಡಗಳೂ ಸಾರ್ ಹೊಂಡಗಳು...ಇಲ್ಲಿ ರಸ್ತೆಯೇ ಇಲ್ಲ...ಮೂಡಬಿದಿರೆ - ಬೆಳ್ತಂಗಡಿ ಹೆದ್ದಾರಿ ಎಂಬ ನಾಮಧೇಯ ಹೊಂದಿರುವ ಈ ರಸ್ತೆಯಲ್ಲಿ ಸಂಚರಿಸಿದರೆ "ಮೈ - ಕೈ " ಮೂಳೆ ಸಡಿಲಾಗುವುದರಲ್ಲಿ ಸಂದೇಹವಿಲ್ಲ.ವೇಣೂರು ಕೆಳಗಿನ ಪೇಟೆಯಿಂದ ತೊಡಗಿ ಸುಮಾರು ಎರಡು ಕಿಲೋಮೀಟರ್ ದೂರದ ತನಕ ರಸ್ತೆ ತೀವ್ರ ಕೆಟ್ಟು ಹೋಗಿದೆ.


ನಡುವೆ ಸಿಗುವ ಚಿಕ್ಕ ಸೇತುವೆಯಂತೂ ಈಗವೋ - ಮತ್ತೆಯೋ ಎಂಬಂತೆ ದಿನ ಎಣಿಸುವಂತೆ ಭಾಸವಾಗುತ್ತದೆ. ವಾಹನಗಳ ನಿರಂತರ ಸಂಚಾರ ಈ ಭಾಗದಲ್ಲಿದ್ದು ರಸ್ತೆ ರಿಪೇರಿ ಅತ್ಯಾವಶ್ಯಕವಾಗಿ ಆಗಬೇಕಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಲೇ ಬೇಕು.

ವೇಣೂರ ಬಾಹುಬಲಿಗೆ ಮಹಾ ಮಜ್ಜನದ ದಿನ ನಿಗಧಿಯಾಗಿದೆ. ಪ್ರವಾಸಿಗರ ಸಂಖ್ಯೆ ವೇಣೂರಿನತ್ತ ದಿನಂಪ್ರತಿ ಅತಿಯಾಗುತ್ತಿದೆ. ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅನುಕೂಲಕರ ರೀತಿಯಲ್ಲಿ ರಸ್ತೆಗಳ ದುರಸ್ತಿಕಾರ್ಯ ಆಗಲೇ ಬೇಕಾಗಿದೆ.

0 comments:

Post a Comment