ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ನಗರದ ವಿಜಯ ಕಮರ್ಷಿಯಲ್ ಕಾಂಪ್ಲೆಕ್ಸ್ ಮಣ್ಣಗುಡ್ಡೆ, ಇಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರಿಂದ ಉಚಿತ ಯೋಗ ತರಬೇತಿ ಶಿಬಿರ ಆರಂಭಗೊಂಡಿತು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗಾಗಿ 'ಯೋಗ'ವನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುವುದರಿಂದ ವಿಶೇಷವಾದ ಪ್ರಯೋಜನವು ದೊರೆಯುವುದು. ಅಲ್ಲದೆ ದಿನವಿಡೀ ಉಲ್ಲಾಸದಿಂದ ಲವಲವಿಕೆಯಿಂದ ಇರಬಹುದು ಎಂಬುದಾಗಿ ಮಂಗಳೂರಿನ ಮೂಡಾದ ನೂತನ ಕಮಿಶನರ್ ಅಜಿತ್ ಕುಮಾರ್ ಹೆಗ್ಡೆಯವರು ಯೋಗ ಶಿಬಿರದ ಉದ್ಘಾಟನಾ ಸಂಧರ್ಭದಲ್ಲಿ ಅಭಿಪ್ರಾಯಪಟ್ಟರು.


ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಕಾಲೇಜಿನ ಡೈರೆಕ್ಟರ್ ಡಾ| ದೇವರಾಜ್ ಅವರು, ದೇಶ-ವಿದೇಶದಲ್ಲಿ ಮನೆ ಮಾತಾಗಿರುವ ವಿದ್ಯೆಯನ್ನು ಕಲಿತು ಉಳಿಸಿ ಬೆಳೆಸಿ ಆರೋಗ್ಯಪೂರ್ಣ ಸ್ವಸ್ಥ ಸಮಾಜದ ನಿರ್ಮಾಣವಾಗಲಿ ಎಂದರು.

ವೇದಿಕೆಯಲ್ಲಿ ಹಿರಿಯ ಲೆಕ್ಕ ಪರಿಶೋಧಕರಾದ ಜಗನ್ನಾಥ್ ಕಾಮತ್ ಹಾಗೂ ಮನೋಹರ್ ದಂಡಕೇರಿ, ಉಪಸ್ಥಿತರಿದ್ದರು. ಸುಮಾರು ನಲುವತ್ತಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

0 comments:

Post a Comment