ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಟೂಡೆಂಟ್ ಅವಾರ್ಡ್

ವಿಶ್ವವಿದ್ಯಾಲಯ,ಕಾಲೇಜುಗಳ ವಿದ್ಯಾರ್ಥಿ ಬರಹಗಾರರಿಗೆ ಒಂದು ಬಹಿರಂಗ ಮನವಿ.
ರಾಜ್ಯದಲ್ಲಿ ಪ್ರಮುಖವಾಗಿ ಐದರಿಂದ ಆರು ಹೆಸರುವಾಸಿ ಪತ್ರಿಕೆಗಳು, ವಿದ್ಯಾರ್ಥಿ ಬರಹಗಾರರಿಗಾಗಿಯೆ ತಮ್ಮ ಪತ್ರಿಕೆಗಳಲ್ಲಿ ನಮ್ಮಂತಹ ವಿದ್ಯಾರ್ಥಿಗಳಿಗೆ ಬರೆಯಲು ಸೂಕ್ತವೇದಿಕೆ ನಮಗೆ ಕಲ್ಪಿಸಿಕೊಟ್ಟಿವೆ. ಆ ವೇದಿಕೆಯಲ್ಲಿ ನಮ್ಮ ಕಾಲೇಜಿನ,ಕ್ಯಾಂಪಸ್,ಕಾರಿಡಾರನಲ್ಲಿ,ಕ್ಲಾಸರೂಂನಲ್ಲಿ,ಅಥವಾ ನಮ್ಮ ಗೆಳೆಯರ ನಡುವೆ ನಡೆಯುವ ಕೆಲವು ನೆನಪಿಡಬೇಕಾದ ರಸಭರಿತ ಪ್ರಸಂಗಗಳನ್ನು ಪತ್ರಿಕೆಗಳಲ್ಲಿ ಲೇಖನದ ಮುಖಾಂತರವಾಗಿ ನಮ್ಮ ಗೆಳೆಯರಿಗೆ ಅಥವಾ ಆಪ್ತರ ಜೊತೆ ಹಂಚಿಕೊಳ್ಳಲು ನಮ್ಮಂತಹ ಯುವ ಬರಹಗಾರರಲ್ಲಿ,ಅಡಗಿರುವ ಸೊಕ್ತ ಪ್ರತಿಬೆಯನ್ನು ಪ್ರದರ್ಶಿಸಲು ಪತ್ರಿಕೆಗಳು ಒಂದು ಸೂಕ್ತವಾದ ವೇದಿಕೆಯನ್ನು ಒದಗಿಸಿದೆ. ಆದರೆ ಇದನ್ನು ಸದುಪಯೋಗ ಪಡಿಸುವುದಕ್ಕಿಂತಲೂ ಹೆಚ್ಚು ದುರುಪಯೋಗ ಪಡಿಸಿಕಳ್ಳೊತಿರುವುದು ಖೇದಕರ ಅಂಶ.


ಇಂದಿನ ಯುವಜನತೆಯ ಬಹುತೇಕ ಲೇಖನಗಳು ತಮ್ಮ ಪ್ರೀತಿ ,ಪ್ರೇಮಕ್ಕೆ ಸಂಬಂದಿಸಿದ ವಿಷಯಕ್ಕೆ ಸಂಬಂಧಿಸಿದವು.
ತಾವು ಪ್ರೀತಿಸಿದ ಗೆಳತಿ ಅಥವಾ ಗೆಳೆಯ ಕೈ-ಕೊಟ್ಟು ಹೋದಾಗ, ತಮಗೆ ಆಗುವಂತಹ ನೋವು,ಯಾತನೆಯನ್ನು,ತಮ್ಮ ಲೇಖನಗಳಲ್ಲಿ ರಸಭರಿತವಾಗಿ ಕಟ್ಟಿಕೊಡುತ್ತಿರುವುದನ್ನು ನೋಡಿದಾಗ ಓದುಗರಿಗೂ ಹಲವು ಸಲ ಇರಿಸು- ಮುರಿಸಾಗುವ ಪ್ರಸಂಗ.

ಇನ್ನೂ ಕೆಲಮಂದಿ ಬಹರಗಾರರು ಒಂದು ಹೆಜ್ಜೆ ಮುಂದೆಹೋಗಿದ್ದಾರೆ, ಲೇಖನ ಬರೆಯುವ ಹುಮ್ಮಸ್ಸಿನಲ್ಲಿ ಮುಂದಾಲೋಚನೆ ಯಿಲ್ಲದೆ, ತಾವು ಪ್ರೀತಿಸಿದ ಪ್ರೇಯಸಿಯ ಹೆಸರನ್ನು ತಮ್ಮ ಲೇಖನದಲ್ಲಿ ಮುಕ್ತವಾಗಿ ಪ್ರಕಟಿಸಿ ಅವರ ತಂದೆ-ತಾಯಿಗಳಿಂದ ಹೊಡೆತ ತಿಂದ ಪ್ರಕರಣಗಳು ನಡೆದುಹೋಗಿವೆ.

ಇನ್ನು ಕೆಲವು ವಿದ್ಯಾರ್ಥಿಗಳು "ಟ್ಯಾಬ್ಲಾಯಿಡ್"ಪತ್ರಿಕೆಗಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿ ಅದೆ ನಿಜವಾದ ಲೇಖನ ನಾವು ಬರೆದರೆ ಅವರಂತೆ ಬರೆಯಬೇಕು ಎನ್ನುವ ಆಸೆಯಿಂದ, ತಾವು ಚಿಕ್ಕವರಿದ್ದಾಗ ಮಾಡಿದ ತಪ್ಪುಗಳನ್ನು ತಮ್ಮ ಲೇಖನಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತಿದ್ದಾರೆ!
ಉದಾಃನಾನು ಚಿಕ್ಕವನಿದ್ದಾಗ ಬೀಡಿಸೇದುತಿದ್ದೆ,ಗುಟ್ಕಾ,ತಿನ್ನುತಿದ್ದೆ,ಕಾಲೇಜಿನಲ್ಲಿ ಉಪನ್ಯಾಸಕರಿಗೆ ಎದರು ಮಾತನಾಡುತಿದ್ದೆ, ಎಂದು ಯಾವುದೆ ಅಂಜಿಕೆ ಅಳುಕಿಲ್ಲದೆ ತಮ್ಮ ಬಗ್ಗೆ ತಾವೆ ಬರೆದುಕೊಳ್ಳುತಿರುವುದನ್ನು ನೋಡಿದಾಗ ನನಗೆ ಕೆಲವು ಸಲ ಅಚ್ಚರಿಮೂಡುತ್ತದೆ.
ಪತ್ರಿಕೆಗಳು ನಮ್ಮಂತಹ ವಿದ್ಯಾರ್ಥಿಗಳಿಗೆ ಲೇಖನಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟಿರವುದೆ ಒಂದು ಬಹುದೊಡ್ಡ ಕೊಡುಗೆ ಎಂದು ಹೇಳಬಹುದು.

ಆ ಒಂದು ವೇದಿಕೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಲೇಖಕರಾಗಲು ಸಾಧ್ಯ.
ನಮ್ಮ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಎಷ್ಟೋ ಸಲ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ ,ಅಂಥವುಗಳ ಬಗ್ಗೆ ಒಂದು ಸುಂದರ ಲೇಖನವನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ನಮಗು ಮತ್ತು ನಮ್ಮ ಕಾಲೇಜು,ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರನ್ನು ತರಬಹುದು.
ಆದರಿಂದ ಎಲ್ಲಾ ನನ್ನಾ ಆತ್ಮಿಯ ಬರಹಗಾರ ಗೆಳೆಯರಲ್ಲಿ ನನ್ನ ಚಿಕ್ಕ ಮನವಿ, ನಮ್ಮಂತಹ ವಿದ್ಯಾರ್ಥಿಗಳಿಗೆ ಬರೆಯಲು, ಪತ್ರಿಕೆಗಳು ಪೂರ್ಣ ಸ್ವಾತಂತ್ರ ನೀಡಿವೆ ,ಆ ಸ್ವಾತಂತ್ರವನ್ನು ನಾವು ದುರುಪಯೋಗ ಪಡಿಸಿಕೋಳ್ಳುವುದರ ಬದಲು ಸದುಪಯೋಗ ಪಡಿಸಿಕೊಳ್ಳೋಣ.

-ತೋಟೇಂದ್ರ,ಎಸ್, ಮಾಕಲ್.
_ಪತ್ರಿಕೋದ್ಯಮ,ವಿಭಾಗ,ಗುಲ್ಬರ್ಗಾ ವಿ,ವಿ ಗುಲ್ಬರ್ಗಾ

2 comments:

s.magod said...

ಖಂಡಿತ ಒಪ್ಪಲೇ ಬೇಕಾದ ವಿಷಯ ಗೆಳೆಯಾ.ಮೊದಲೇ ಹಳ್ಳ ಹಿಡಿಯುತ್ತಿರುವ ಪತ್ರಿಕೋದ್ಯಮದಲ್ಲಿ ಇಂಥ ಸಂಗತಿಗಳನ್ನು ನೆನೆದರೆ ಚಿಂತೆಯಾಗುತ್ತದೆ.
---pisumathusatish

Anonymous said...

ಗೆಳೆಯ ತೋಟೇಂದ್ರ ನಿನ್ನ ಅನಿಸಿಕೆ ತುಂಬಾ ಚನ್ನಾಗಿ ಹೆಳಿದಿಯಾ. ಇದೇ ರೀತಿಯಾಗಿ ನಿನ್ನ ಬರವಣಿಗೆ ಹೀಗೆ ಮುಂದುವರಿಯಲಿ ಧನ್ಯವಾದಗಳು

ರಾಜಕುಮಾರ ಎಂ ದಣ್ಣೂರ
ಕೇಂದ್ರೀಯ ವಿ.ವಿ.ಗುಲಬಗಾ್

Post a Comment