ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕಾಸರಗೋಡು/ಮಂಗಳೂರು: ಏನೇ ಹೇಳಿ ಇದೀಗ ಮಾಹಿತಿ ತಂತ್ರಜ್ಞಾನ ಕ್ಷೇತ್ರ ತುಂಬಾ ಅಭಿವೃದ್ಧಿ ಹೊಂದಿದೆ. ಇಂದು ಹೊಸ ಹೊಸ ಆವಿಷ್ಕಾರಗಳು ಮಾಹಿತಿ ತಂತ್ರಜ್ಞಾನ, ಗಣಕ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಜಾಗತೀಕರಣ, ಉದಾರೀಕರಣ, ಮೊದಲಾದವುಗಳ ಪ್ರಭಾವ ಅತಿಯಾಗುತ್ತಿರುವ ಪ್ರಸಕ್ತ ಸನ್ನಿವೇಷದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿದೆ. ಬದಲಾಗುವ ಕಾಲಮಾನಕ್ಕೆ ಅನುಗುಣವಾಗಿ ಯಾವ ರೀತಿಯ ಶಿಕ್ಷಣ ಮಕ್ಕಳಿಗೆ ನೀಡಿದರೆ ಒಳ್ಳೆಯದು ಎಂಬ ಚಿಂತೆ ಇಂದಿನ ಹೆತ್ತವರನ್ನು ಬಿಡದೆ ಕಾಡುತ್ತಿದೆ. ಶಿಕ್ಷಣಕ್ಕೂ ಮಕ್ಕಳ ಚಟುವಟಿಕೆಗಳಿಗೂ ಒಂದು ಪೂರಕವಾದಂತಹ ಸಂಬಂಧವಿದೆ. ಇದೀಗ ಈ ಎಲ್ಲಾ ವಿಚಾರಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸತೊಂದು ತಂತ್ರಾಂಶ(ಸಾಫ್ಟ್ ವೇರ್) ಅಭಿವೃದ್ಧಿ ಪಡಿಸಿರುವುದು ಗಮನಾರ್ಹ.ಈ ನೂತನ ಸಾಫ್ಟ್ ವೇರ್ ಹೆಸರು ಎಜು ಅಲರ್ಟ್ ಎಂದು. ಮಗುವಿನ ಚಟುವಟಿಕೆಗಳ ವಿವರಗಳನ್ನು ಸಾಫ್ಟ್ ವೇರ್ ಮೂಲಕ ನೀಡಿದ್ದೇ ಆದಲ್ಲಿ ಮಗುವಿಗೆ ಯಾವ ರೀತಿಯ ಶಿಕ್ಷಣ ಸೂಕ್ತ ಎಂಬುದನ್ನು ಅದು ತಿಳಿಸುತ್ತದೆ. ಇಷ್ಟೇ ಅಲ್ಲದೆ ಮಗುವಿನ ಹಾಜರಾತಿ, ಮಕ್ಕಳ ಪರೀಕ್ಷಾ ಪ್ರಗತಿ ವಿಚಾರಗಳನ್ನೂ ಅದು ತಿಳಿಸುತ್ತದೆ.

ಇಂತಹ ಅತ್ಯಾಧುನಿಕ ಸಾಫ್ಟ್ ವೇರ್ ತಯಾರಿಸಿದ ಕೀರ್ತಿ ಕೇರಳ ರಾಜ್ಯಕ್ಕೆ ಸಲ್ಲಬೇಕು.ಮೂಲತಃ ಕೇರಳದವರಾದ ನರೇಂದ್ರನ್, ಸಂಜಯ್ ಹಾಗೂ ರಾಜೀವ್ ಎಂಬವರು ಈ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದಾರೆ.ಇದು ಅತ್ಯಂತ ಕನಿಷ್ಟ ದರದಲ್ಲಿ ಲಭ್ಯವಾಗುವ ಸಾಫ್ಟ್ ವೇರ್.ಕೇರಳದಲ್ಲಿ ಈಗಾಗಲೇ ಹತ್ತು ಶಾಲೆಗಳಲ್ಲಿ ಈ ಸಾಫ್ಟ್ ವೇರ್ ಬಳಸಿದ್ದಾರೆ.

0 comments:

Post a Comment