ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕೊಯಮತ್ತೂರು:ತಮಿಳ್ನಾಡಿನಲ್ಲಿ ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹಕ್ಕೆ ಹತ್ತು ಮಂದಿ ಬಲಿಯಾಗಿದ್ದಾರೆ.. ನೊಯ್ನಾ ನದಿಯಲ್ಲಿ ಆರು ವರ್ಷದ ಹುಡುಗಿಯೊಬ್ಬಳ ಶವವೂ ಸೇರಿದಂತೆ ಒಟ್ಟು ಮೂರು ಶವಗಳು ದೊರೆತಿವೆ ಎಂದಿರುವ ಅಧಿಕಾರಿಗಳು ಸುಕುಮಾರನ್‌ ನಗರದಲ್ಲಿ ದಿಢೀರ್‌ ಪ್ರವಾಹದಿಂದಾಗಿ ಈ ಪ್ರದೇಶದ ಗ್ರಾಮವೊಂದರಲ್ಲಿ ಗಂಡ ,ಹೆಂಡತಿ ಮತ್ತು ಮೂವರು ಮಕ್ಕಳು ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರವಾಹದಲ್ಲಿ ಕೊಚ್ಚಿಹೋದವರ ಶವಗಳು ಇನ್ನೂ ದೊರೆತಿಲ್ಲ.


ಪ್ರವಾಹದಲ್ಲಿ ಇಬ್ಬರು ಸೋದರಿಯರು ಮುಳುಗಿ ಸಾವನ್ನಪ್ಪಿದ್ದಾರೆ.ಮೃತರ ಕುಟುಂಬಗಳಿಗೆ ಘೋಷಿಸಲಾದ ಪರಿಹಾರವನ್ನು ಮುಖ್ಯಮಂತ್ರಿ ಜಯಲಲಿತಾ ಅವರು ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಹೇಳಿದ್ದಾರೆ.ಮಳೆಯ ತೀವ್ರತೆಯಿಂದಾಗಿ ಈರೋಡ್‌ನ‌ ಮೂಲಪಾಳಯಂನಲ್ಲಿ ಕಾಲುವೆಯ ದಂಡೆಯೊಡೆದ ಪರಿಣಾಮವಾಗಿ ವ್ಯಾಪಕ ಪ್ರದೇಶ ಜಲಾವೃತಗೊಂಡು ಜನರು ಮನೆಗಳಿಂದ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಯಿತು. ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿತು.

0 comments:

Post a Comment