ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಎಂಟನೇ ವರುಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ - 2011 ಇದರ ಸರ್ವಾಧ್ಯಕ್ಷರಾಗಿರುವ ನಾಡೋಜ ಡಾ.ಎಂ.ಎಂ.ಕಲಬುರ್ಗಿ ಅವರ ಮನದಾಳದ ಮಾತುಗಳು." ಕಲ್ಪಿತ ಸಾಹಿತ್ಯದ ವ್ಯಾಖ್ಯಾನ ಬೇಡ. ಘಟಿತ ವಿಚಾರಗಳನ್ನಿರಿಸಿ ಸಂವಾದ ಮಾಡುವುದು ಸಖ್ಯ ; ನಿರ್ದಿಷ್ಟೀಕರಣದ ಸಾಹಿತ್ಯ ಪ್ರಸ್ತುತವಾಗಿದೆ. ಸಾಮಾನ್ಯೀಕರಣ ಬೇರೆ,ನಿರ್ದಿಷ್ಟೀಕರಣ ಬೇರೆ. ಈ ವ್ಯತ್ಯಾಸವನ್ನು ಇಂದಿನ ಸಾಹಿತಿಗಳು ಅರಿಯಬೇಕಾದ ಅಗತ್ಯವಿದೆ " ಇದು ಆಳ್ವಾಸ್ ನುಡಿಸಿರಿ - 2011 ಇದರ ಸರ್ವಾಧ್ಯಕ್ಷ ನಾಡೋಜ ಡಾ.ಎಂ.ಎಂ. ಕಲಬುರ್ಗಿ ಅವರ ನೇರ ಮಾತುಗಳು.

ಸೃಜನ ಸಾಹಿತ್ಯವನ್ನು ಕಲ್ಪಿತ ವಿಚಾರವನ್ನಿರಿಸಿ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದ ಕಲಬುರ್ಗಿ ಅವರು ವಲಸೆ ಧರ್ಮಗಳ ಪ್ರಾಭಲ್ಯ ಹೆಚ್ಚಾಗಿದೆ. ನಮ್ಮನ್ನು ಆಳಿದ್ದು ವಲಸೆ ಧರ್ಮ.
ಕನ್ನಡಿಗರಿಗೆ ಸಹನಾ ಮನೋಭಾವ, ಸಹನಾ ಮನೋಧರ್ಮ ಅಧಿಕ. ಅಸ್ಮಿತೆ ಬಹಳ ಶತಮಾನದಿಂದ ನಾಶವಾಗಿದೆ. ಬದುಕು ಎಂಬುದು ಬಹುತ್ವದ ಮಿಶ್ರಣ.ಬಹುತ್ವ ಇರಲಿ.ಆದರೆ ಸ್ಥಳೀಯತೆಯ ಮೇಲೆ ದಾಳಿ ಮಾಡುವುದು ಮಾತ್ರ ಸರಿಯಲ್ಲ. ಸ್ಥಳೀಯತೆಗೆ ಪೋಷಣೆ ನೀಡುವ ರೀತಿಯಲ್ಲಿ ಬಹುತ್ವ ವಿದ್ದರೆ ಅದು ಚೆನ್ನ .ಇಂದು ನಮ್ಮ ನಾಡಿನಲ್ಲಿಯೇ ನಾವು ದ್ವಿತೀಯ ದರ್ಜೆ ಪ್ರಜೆಗಳಾಗುತ್ತಿದ್ದೇವೆ. ಇದು ದುರಂತ ಎಂದು ಹೇಳಿದ್ದಾರೆ.

ಸಂಸ್ಕೃತಿಯಿಂದ ಭಾಷೆ - ಭಾಷೆಯಿಂದ ಸಾಹಿತ್ಯ ಇವೆಲ್ಲವೂ ಒಂದಕ್ಕೊಂದು ಪೂರಕವಾದದ್ದು ಎಂದ ಕಲುಬುರ್ಗಿ ಅವರು
ಅಧಿಕಾರದ ಮೀಸಲಾತಿ ಒಂದು ಅಥವಾ ಹೆಚ್ಚೆಂದರೆ ಎರಡು ತಲೆಮಾರಿಗೆ ಸೀಮಿತವಾಗಲೇ ಬೇಕು ಎಂದು ಒತ್ತಾಯಿಸಿದ್ದಾರೆ. ಮತ(ಓಟು)ಕ್ಕಾಗಿ ಇಂದು ಮೀಸಲಾತಿ - ರಾಜಕಾರಣ ನಡೆಯುತ್ತಿದೆ , ಮತಕ್ಕಾಗಿ ಸವಲತ್ತು ನೀಡುವ ರಾಜಕೀಯ ಮೇಲಾಟಗಳು ಸರಿಯಲ್ಲ ಎಂದು ಕಠುವಾಗಿ ಹೇಳಿದರು.

ಮತ ನಿರಪೇಕ್ಷ ಸಮಾಜದ ಅವಶ್ಯಕತೆ ಇಂದಿದೆ ಎಂದವರು ಒತ್ತಿ ಹೇಳಿದರು.
ಸರಕಾರಗಳು `ಜಾತಿ ವ್ಯವಸ್ಥೆಗೆ' ಬೆಂಬಲ ನೀಡುತ್ತಿದೆ. ಸರಕಾರವೇ ಇಂದು ಪರಿಷಿಷ್ಟ ಜಾತಿ ಪರಿಶಿಷ್ಟ ಪಂಗಡ ಎಂಬ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕುತ್ತಿದೆ. ಆ ಹೆಸರಿನಲ್ಲಿ ವಸತಿ ನಿಲಯಗಳನ್ನು ನಿರ್ಮಿಸುತ್ತಿದೆ. ಇದು ಜಾತಿ ವ್ಯವಸ್ಥೆಯನ್ನು ಸರಕಾರವೇ ರೂಪಿಸಿದಂತಾಗುತ್ತದೆ. ಈ ವಸತಿ ನಿಲಯಗಳು, ಹಾಸ್ಟೆಲ್ ವ್ಯವಸ್ಥೆಗಳು ಒಂದು ಜಾತಿಗೆ ಸೀಮಿತವಾಗುವ ಬದಲಾಗಿ ಎಲ್ಲರಿಗೂ ಸಮಾಜವಾಗಿ ದೊರಕುವಂತಾಗಲಿ. ಜಾತಿಯ ಹೆಸರು ಎಲ್ಲೂ ಬಳಕೆಯಾಗುವುದು ಸರಿಯಲ್ಲ ಎಂದು ಕಲುಬುರ್ಗಿ ಅಭಿಪ್ರಾಯಿಸಿದ್ದಾರೆ.

ಸಂದರ್ಶನ : ಹರೀಶ್ ಕೆ.ಆದೂರು

1 comments:

BIDIRE said...

tumba chennagide....edannu noduvaga....kaleda sala vaidehiyavara sandarshanda nenapu agutade

Post a Comment