ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೈಗ್ರೇನ್ ತಲೆನೋವಿನ (ಅರೆತಲೆನೋವು) ನಿವಾರಣೆಗೆ ಯೋಗ ಸಹಕಾರಿ

ಇತ್ತೀಚಿನ ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ಬಹಳಷ್ಟು ಮಂದಿಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಕಾಡುತ್ತಿರುವುದು ಕಂಡುಬರುತ್ತದೆ. ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗವನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಮೈಗ್ರೇನ್ ತಲೆನೋವಿನಿಂದ ಬಳಲುವ ಮಂದಿ ಇಂದು ಹೆಚ್ಚಾಗಿದೆ. ಸರ್ವೇ ಒಂದು ಈ ಅಂಶವನ್ನು ದೃಢಪಡಿಸಿದೆ. ವಿವಿಧ ಕಾರಣಗಳು ಈ ಮೈಗ್ರೇನ್ ತಲೆನೋವಿಗಿದೆ ಎಂಬುದು ಪ್ರಯೋಗಗಳಿಂದ ಲಭಿಸಿದ ಮಾಹಿತಿ. ಈ ಮೈಗ್ರೇನ್ ತಲೆನೋವು ಶಾಪವೆಂದು ನಂಬುವ ಮಂದಿ ಅನೇಕರಿದ್ದಾರೆ. ಏನೇ ಇರಲಿ ಇದಕ್ಕೂ ಒಂದು ಔಷಧಿಯಿದೆ. ಇದನ್ನೂ ಗುಣಪಡಿಸಬಹುದಾಗಿದೆ. "ಯೋಗ ಚಿಕಿತ್ಸೆ" ಮೂಲಕ ಮೈಗ್ರೇನ್ ನಿವಾರಣೆ ಸಾಧ್ಯ ಎಂಬ ಅಭಿಪ್ರಾಯ ನಮ್ಮ ಅಂಕಣಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರದ್ದು... ಈ ಮಾಹಿತಿ ಈ ಕನಸು.ಕಾಂ ಓದುಗರಿಗಾಗಿ...

ಮೈಗ್ರೇನ್ ಸಮಸ್ಯೆಗೆ ಕಾರಣಗಳು ಹಲವಾರು :

- ಪದೇ ಪದೇ ಮನಸ್ಸಿಗೆ ಕಿರಿಕಿರಿಯಾಗುವುದು. ಅತಿಯಾದ ಒತ್ತಡದ ಕೆಲಸಮಾಡುವವರಲ್ಲಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಿಂದ ಬಳಲುತ್ತಿರುತ್ತಾರೆ. ಸುತ್ತಮುತ್ತಲಿನ ಪರಿಸರ ಮತ್ತು ಪುರುಸೊತ್ತು ಇಲ್ಲದ ಆಧುನಿಕ ನಗರ ಜೀವನ ಶೈಲಿಯಿಂದಾಗಿ ಸಾಕಷ್ಟು ಒತ್ತಡಗಳಿಗೆ ಗುರಿಯಾಗುತ್ತಾರೆ. ಆರೋಗ್ಯವಂತರಾಗಿರಬೇಕೆಂದು ಎಲ್ಲರೂ ಇಚ್ಚಿಸುತ್ತಾರೆ ಆದರೆ, ಅದರಲ್ಲಿ ಎಲ್ಲರೂ ಸಫಲರಾಗುವುದಿಲ್ಲ.


- ಅತಿಯಾದ ಶಬ್ದ ಮಾಲಿನ್ಯ
- ಹೆಚ್ಚಿನ ಬೆಳಕು
- ಶಾರೀರಿಕ ವ್ಯಾಯಾಮ ಕೊರತೆಗಳು, ಯಾ ಅತೀ ವ್ಯಾಯಾಮಗಳನ್ನು ಮಾಡುವುದು.
- ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಯಾಗುವುದರಿಂದ.
- ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡದಿಂದ
- ಅತಿಯಾದ ಮಧ್ಯಪಾನ
- ಕೆಲವೊಮ್ಮೆ ಕಛೇರಿಯಲ್ಲೂ ಅತಿಯಾದ ಕೆಲಸ ಕಾರ್ಯಗಳ ಒತ್ತಡದಿಂದ, ಅತಿಯಾದ ಚಿಂತನೆಯಿಂದ,
- ಸಮಯಕ್ಕೆ ಸರಿಯಾಗಿ ಉತ್ತಮ ಆಹಾರವನ್ನು ಸೇವಿಸದೇ ಇರುವುದು (ಅನಿವಾರ್ಯವಾದ ಆಹಾರ ಪದ್ದತಿ) ಹಾಗೂ ಶುದ್ಧ ನೀರನ್ನು ಸೇವಿಸದೇ ಇರುವುದು.
- ದೂಳಿನ ಅಲರ್ಜಿ.
- ತುಂಬಾ ಹೊತ್ತು ಕಂಪ್ಯೂಟರ್ನಲ್ಲಿ ಕೆಲಸ ನಿರ್ವಹಣೆ ಹಾಗೂ ಇತ್ಯಾದಿ ಕಾರಣಗಳಿವೆ.ಮೈಗ್ರೇನ್ ತಲೆನೋವಿನಲ್ಲಿ ಹಣೆಯ ಒಂದೇ ಬದಿಯಲ್ಲಿ ಅತಿಯಾದ ನೋವು ವಾಂತಿ, ದೇಹದ ಚಲನೆಯಾದ ನೋವಿನ ಅನುಭವ, ಮೈಗ್ರೇನ್ ತಲೆನೋವು ದಿನಾಲೂ ಬರಬಹುದು. ದಿನ ಬಿಟ್ಟು ಬರಬಹುದು, ವಾರಕ್ಕೊಮ್ಮೆ.- ಮೆದುಳಿನ ರಕ್ತನಾಳಗಳು ಹಿಗ್ಗಿದಾಗ ಇತ್ಯಾದಿ ಸಮಸ್ಯೆಯಿಂದ ತುಂಬಾ ನೋವಿನ ವೇದನೆ ಅನುಭವಿಸಬೇಕಾಗುತ್ತದೆ.
ತೀವ್ರ ತರದ ತಲೆನೋವು ಬಂದಾಗ ವ್ಯಕ್ತಿ ಶಾಂತ ಸ್ಥಳದಲ್ಲಿ ಒಂದೆಡೆ ವಿಶ್ರಾಂತಿ ಪಡೆಯಲು ಬಯಸುತ್ತಾನೆ.

ಈ ಮೈಗ್ರೇನ್ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ದೃಢಪಟ್ಟ ಯೋಗ ಬಹಳಷ್ಟು ನಿಯಂತ್ರಣಗೊಳಿಸಬಹುದು. ಪತಂಜಲ ಋಷಿ ತಿಳಿಸಿದ ಯಮ, ನಿಯಮ ಪಾಲಿಸಿ ಉತ್ತಮ ಜೀವನ ಶೈಲಿ ಸೂಕ್ಷ್ಮವಾದ ಕೆಲವು ಅಗತ್ಯವಿರುವ ಯೋಗಾಸನಗಳನ್ನು ಪ್ರಾಣಯಾಮಗಳನ್ನು ಅಭ್ಯಾಸ ಮಾಡುತ್ತಾ ಕೊನೆಯಲ್ಲಿ ಶವಾಸನ ಮಾಡಿ ಧ್ಯಾನ ಮಾಡಬೇಕು. ಯೋಗಾಸನಗಳನ್ನು ಶಿಸ್ತು ಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ನಡೆಸಿದರೆ ದೇಹದ ಒಳಗಿನ ಅಂಗಗಳಿಗೆ ವ್ಯಾಯಾಮ, ಮತ್ತು ಚೆನ್ನಾಗಿ ರಕ್ತಪರಿಚಲನೆ ಜರಗುತ್ತದೆ. ಯೋಗಾಸನಗಳಿಂದ ಪ್ರತಿಯೊಂದು ಅಂಗಗಳು ನವ ಚೈತನ್ಯವುಂಟಾಗುತ್ತದೆ. ಇದರಿಂದ ದೈಹಿಕ ಆರೋಗ್ಯ ಹೆಚ್ಚಿ ತಾಳ್ಮೆ, ಶಾಂತಿ ಒದಗಿ ನರಮಂಡಲ ಚೈತನ್ಯಶೀಲವಾಗುವುದು.

ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟುಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುವುದು ನಾಡಿ ಶುದ್ದಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು. ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ದೀಕರಣವಾಗಿ ಅದು ಸಶಕ್ತವಾಗುವುದು.

ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ ಹಾಗು ಮನಸ್ಸು ಅರಳುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ.

ಮೈಗ್ರೇನ್ ತಲೆನೋವು ಪೀಡಿತರಿಗೆ ಇರುವ ಸರಳ ಯೋಗದ ಸಂಕ್ಷಿಪ್ತ ಪಟ್ಟಿ.
- ಆರಂಭದಲ್ಲಿ ಇಷ್ಟದೇವರ ಪ್ರಾರ್ಥನೆ.
- ಕಪಾಲ ಬಾತಿ, ತ್ರಾಟಕ ಕ್ರಿಯೆ.
- ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ (ಸಾಧ್ಯವಾಗುವವರಿಗೆ) ತುಸು ವಿಶ್ರಾಂತಿ.
ಯೋಗಾಸನಗಳು : ಅರ್ಧ ಚಕ್ರಾಸನ, ಪಾದ ಹಸ್ತಾಸನ, ಪಾರ್ಶ್ವೋತ್ತಾನಾಸನ, ಪದ್ಮಾಸನ, ಯೋಗ ಮುದ್ರಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಸರ್ವಾಂಗಾಸನ, ಹಲಾಸನ, ಮಕರಾಸನ, ಊಧ್ರಮುಖ ಶ್ವಾನಾಸನ, ಅದೋ ಮುಖ ಶ್ವಾನಾಸನ, ಶವಾಸನ.
- ಸರಳ ಪ್ರಾಣಯಾಮ, ನಾಡಿ ಶುದ್ಧಿ ಪ್ರಾಣಯಾಮ, ಉಜ್ಜಯೀ ಪ್ರಾಣಯಾಮ.
- ಧ್ಯಾನ-ಉಸಿರನ್ನು ಗಮನಿಸುವ ಹಾಗೂ ಇಷ್ಟ ದೇವರ ಧ್ಯಾನ ಅಭ್ಯಾಸ ಮಾಡಬೇಕು

0 comments:

Post a Comment