ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:23 PM

ಬೋಳುಮರದ ಬವಣೆ...

Posted by ekanasu

ಈ ಕನಸು ಅವಾರ್ಡ್
ಅದು ಸೂರ್ಯಾಸ್ತಮಾನದ ಸಮಯ, ಎಕಾಂಗಿಯಾಗಿ ಕುಳಿತು ಗಾಢ ಯೋಚನೆ? ಏನೋ ಕಳೆದುಕೊಂಡ ನೆನಪು? ನಾ ಆಸರೆಯಾಗಿದ್ದ ಬೋಳುಮರವೇ ಹೇಳುತಿತ್ತು ನಾ ಎಲ್ಲವನ್ನೂ ಕಳೆದುಕೊಂಡಿದ್ದೇನೆ.. ನನ್ನೊಂದಿಗೆ ಯಾರೂ ಇಲ್ಲವೆಂದು!

ನಿಜಕ್ಕೂ ಆ ಮರದಲ್ಲಿ ಒಂದು ಸಣ್ಣ ಎಲೆಯೂ ಇರಲಿಲ್ಲ, ಆದರೂ ನನಗೆ ಆ ಮರ ಆಶ್ರಯ ನೀಡಿತ್ತು!. ಯಾವಾಗಲೂ ಬೋಳುಮರ ಏಕಾಂಗಿಗಳಿಗೆ ಹೆಚ್ಚು ಪ್ರಿಯವಂತೆ!? ನನಗೂ ಕೂಡಾ!? ಸೂರ್ಯಾಸ್ತಮಾನದ ಪ್ರತಿಕ್ಷಣವೂ ಕೂಡಾ ಸೂರ್ಯ ಆ ಮರವನ್ನು ನೋಡಿ ನಗುತಿದ್ದ.

ಆ ಮರ ಎಲ್ಲಕ್ಕೂ ತಣ್ಣಗೆ ಉತ್ತರ ನೀಡುತ್ತಿತ್ತು.ಅವರಿವರು ನನ್ನ ಜೀವನವನ್ನು ನೋಡಿ ನಗುತ್ತಿದ್ದರು. ಅವರಿಗೇನು ತಿಳಿದಿದೆ ನಮ್ಮ ಕಥೆ-ವ್ಯಥೆ ? ಆದರೆ ಸೂರ್ಯನಿಗಾದರೂ ಆ ಮರವನ್ನು ನೋಡಬೇಕೆಂಬ ಬಯಕೆಯಿಂದ ಪ್ರತಿನಿತ್ಯ ಬರುತಿದ್ದ, ಆ ಮರಕ್ಕೂ ಸೂರ್ಯನೆಂದರೆ ಬಲುಇಷ್ಟ.

ಆದರೆ ನನಗೆ? ಇದ್ದರೂ ಇಲ್ಲದಂತೆ, ಜೇನಿನಂತೆ ಇದ್ದ ನನ್ನ ಪ್ರೀತಿಯನ್ನು ಹೀರಲು ಅವರಿಗೆಲ್ಲಾ ಬಯಕೆ.
ನನ್ನ ಜೇನನ್ನು ನನ್ನ ಪ್ರೀತಿಯನ್ನು ಕಳೆದುಕೊಂಡ ಮೇಲಂತೂ ಅವರಿಗೆಲ್ಲಾ ಖುಷಿಯೋ ಖುಷಿ ಆದರೆ ನನಗೆ ಸೂರ್ಯನಂತೆ ಉರಿಯಲು ತಿಳಿದಿಲ್ಲ, ನಗಲೂ ತಿಳಿದಿಲ್ಲ. ಬೋಳುಮರದಂತೆಯೇ ನನ್ನ ಬದುಕು.. ಸಾಯುವುದಂತೂ ನಿಶ್ಚಿತ.. ಇಂದೋ ನಾಳೆಯೋ?

ಯಾವ ನೆರಳೂ ಸಿಗದ ಯಾವತ್ತೂ ಸ್ವಚ್ಚಂದ ತಂಪು ಗಾಳಿ ಬೀಸದ ಆ ಮರವನ್ನೇ ಪ್ರೀತಿಸುತ್ತೇನೆ. ಆ ಸೂರ್ಯ ಅದೆಷ್ಟು ಬಾರಿ ನಕ್ಕು ಹೋದರೂ ಆ ಬೋಳುಮರ ತನ್ನ ಅಸ್ತಿತ್ವವನ್ನು ಬದಲಾಯಿಸಿಲ್ಲ. ನಿರ್ಧಾರ ಬದಲಾಯಿಸಿಲ್ಲ. ಆದರೂ ಆ ಬೋಳುಮರಕ್ಕೆ ಸೂರ್ಯನಿದ್ದಾನೆ, ಆ ಸೂರ್ಯನಿಗೆ ಆ ಬೋಳುಮರವಿದೆ. ಆದರೆ ನನಗಾರು?

- ಸನತ್ ಕುಮಾರ್


1 comments:

Anonymous said...

bolu marakke neeru unisidare chiguri aasare aaga bahudalla......

Post a Comment