ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಮನುಷ್ಯನ ಜೀವನದಲ್ಲಿ ಪ್ರೇರಣೆ ಎನ್ನುವುದು ಅತ್ಯಂತ ಪ್ರಚೋದಕ ಶಕ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆ, ಮಾರ್ಗದರ್ಶನ ಅಗತ್ಯ. ಇಲ್ಲದಿದ್ದರೆ ಮುಂದುವರೆಯಲು ಅಸಾಧ್ಯವಾಗುತ್ತದೆ. ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಸಂಬಂಧಿಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಗೆಳೆಯ ಗೆಳತಿಯರಿರಬಹುದು. ಅವರಿಂದಲೂ ಪ್ರಗತಿಯ ಪಥ ಹೊಂದಲು ದಾರಿದೀಪವಾಗುತ್ತದೆ. ಹಾಗೆಯೇ, ನನ್ನ ಜೀವನದಲ್ಲಿಯೂ ಕೂಡ ಒಳ್ಳೆ ಗೆಳತಿಯಿಂದ ಸುಧಾರಿಸಿದೆ..ಬದಲಾದೆ... ನಾನು ಎಸ್.ಎಸ್.ಎಲ್.ಸಿ. ನಲ್ಲಿ 2ವರ್ಷ ಫೇಲಾಗಿ ಆಮೇಲೆ ಪಾಸಾಗಿ ಕಾಲೇಜಿಗೆ ಬಂದೆ. ಓದುವುದು ಅಂದರೆ ಬೇಸರ ಅನಿಸುತಿತ್ತು. ಆವಾಗ ನನ್ನ ಬಾಳಿನಲ್ಲಿ ಆಶಾ ಕಿರಣದಂತೆ ಬಂದವಳೆ ಈ ಗೆಳತಿ.


ದಿನಾಲು ಒಂದೆ ಬಸ್ಸಿನಲ್ಲಿ ಬರುವಾಗ ಅವಳ ಪರಿಚಯ ಮಾಡಿಕೊಂಡೆ. ಹೀಗೆ ದಿನ ಕಳೆದಂತೆ ಅವಳು ನನಗೆ ಕಾಲೇಜು ಅಂದರೆ ಮಜಾಮಾಡುವುದು ಅಲ್ಲ,ಬಂದು ದಿನಾಲು ಟೈಮ್ ಪಾಸು ಮಾಡುವುದಕಿಂತ ಓದಿನ ಕಡೆ ಗಮನ ಹರಿಸು ಅಂತ ಹೇಳಿದಳು. ಹೀಗೆ ಬಸ್ಸಿನಲ್ಲಿ ಪ್ರಯಣ ಮಾಡುವಾಗ ನನಗೆ ಸಲಹೆ ನೀಡುತ್ತಿದ್ದಳು.

ಅವಳು ಹೇಳಿದ ಮೇಲೆ ಸ್ವಲ್ಪ ಓದಿನ ಕಡೆ ಗಮನ ಹರಿಸಿದೆ. ಅವಳು ಕ್ಲಾಸಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದಳು. ಕ್ಲಾಸಿನ ಯಾವುದೇ ಕಾರ್ಯಕ್ರಮಗಳಲ್ಲಿ ಅವಳು ಮೊದಲು ಭಾಗವಹಿಸುತ್ತಿದ್ದಳು. ನಾನು ಸ್ವಲ್ಪಮಟ್ಟಿಗೆ ಎಲ್ಲ ಸ್ನೇಹಿತರಲ್ಲಿ ಹೊಂದಿಕೊಂಡೆ.ಹೀಗೆ ಕಾಲೇಜಿನಲ್ಲಿ ಸ್ನೇಹ ಮುಂದುವರೆಯಿತು. ದ್ವಿತೀಯ ವರ್ಷ ಪರೀಕ್ಷೆ ಬಂದವು ಅವಳದು ನಂದು ಒಂದೆ ಡೆಸ್ಕಿನಲ್ಲಿ ನೊಂದಣಿ ಸಂಖ್ಯೆ ಹಾಕಿದರು. ನನಗೆ ಭಯವಾಯಿತು. ಇವಳು ಯಾಕಪ್ಪ ಇಲ್ಲಿ ಬಂದಳು ಅನಿಸಿತು. ನಾನು ಏನಾದರು ಕಾಪಿ ಮಾಡಬಹುದಿತ್ತೆನಿಸಿತು.

ಅವಳು ಬಂದು ಪರೀಕ್ಷೆಯಲ್ಲಿ ಕುಳಿತಳು ನಾನು ಕುಳಿತು ಕೊಂಡೆ. ಏನಾದರೆ ತಿಳಿಯದಿದ್ದರೆ ನನಗೆ ಕೇಳೆಂದಳು. ನಾನು ನಿನಗೆ ಉತ್ತರ ಪತ್ರಿಕೆಯನ್ನು ಕೊಡುವೆ ನೋಡಿ ಬರೆ ಎಂದಳು. ಆದರೆ, ನನಗೆ ಹುಡಿಗಿಯ ಪೇಪರ್ ನೋಡಿ ಬರೆದರೆ ಮುಂದೆ ಅವಳಿಗೆ ನನ್ನ ಬಗ್ಗೆ ಅಸಹ್ಯ ಹುಟ್ಟಬಹುದೆಂದು ತಿಳಿದು, ನನಗೆ ಬಂದ್ದಷ್ಟು ಬರೆಯುತ್ತೇನೆಂದೆ. ಅವಳು ನಿನ್ನಿಷ್ಟ ಏನಾದರು ಮಾಡದೆಂದಳು.ಕೊನೆಯಲ್ಲಿ ಫಲಿತಾಂಶ ಬಂದಿತ್ತು. ಶೇಕಡಾ 50% ಬಂದರೆ ಅವಳದು 75% ಪಲಿತಾಂಶ ಬಂದಿತ್ತು. ನಿಜವಾಗಲು ಹೇಳಬೇಕೆಂದರೆ, ನನಗೆ ಓದಬೇಕೆನಿಸಿದು ಅವಳ ಸ್ನೇಹವಾದ ಮೇಲೆ.

ಮುಂದೆ ಅವಳು ಡಿ.ಎಡ್. ಆಯ್ಕೆ ಮಾಡಿಕೊಂಡಳು ನಾನು ಬಿ.ಎ. ಐಚ್ಛಿಕ ಕನ್ನಡ ಆಯ್ಕೆ ಮಾಡಿಕೊಂಡೆ. ತದ ನಂತರ ನಾನು ದಿನಾಲು ಅವಳ ಜೋತೆ ಫೊನ್ ಮುಖಾಂತರ ಮಾತಾನಡುತಿದ್ದೆ. ಹೀಗೆ ದಿನಕಳೆದಂತೆ ನಮ್ಮಿಬ್ಬರಲ್ಲಿ ಸ್ನೇಹ ಗಟ್ಟಿಗೊಳ್ಳುತ್ತಾ ಹೋಯಿತು. ಓದು ಬರಹ ಹಾಗೂ ಇಬ್ಬರು ಮನೆಗಳ ಸಮಸ್ಯೆಗಳ ಬಗ್ಗೆ ವಿಚಾರ ಮಡುತ್ತಲಿದ್ದೆವು. ಒಂದು ದಿನಾ ಫೊನ್ ಮಾಡಲಿಲ್ಲವೆಂದರೆ ಏನೋ ಕಳೆದುಕೊಂಡಂತೆ ಆಗುತ್ತಿತ್ತು.

ಈಗ ಅವಳು ನನ್ನ ಜೊತೆ ಮಾತು ಬಿಟ್ಟು ಒಂದು ವರ್ಷ ಕಳೆಯಿತು. . ಓ ಗೆಳತಿ ನೀನೇಕೆ ಹೀಗೆ? ಗೆಳಯ ಗೆಳತಿಯರ ಭಾವನೆಯಲ್ಲಿ ತೊಡಕಾಗಿ ಪ್ರೀತಿ-ಪ್ರೇಮವೆಂದು ಕಾಲ ಕಳೆಯುತ್ತೀರಿ. ಪ್ರೀತಿ-ಪ್ರೇಮವನ್ನು ಹೊರಬಿಟ್ಟು ಬಂದು ನಿಜವಾದ ಸ್ನೇಹದ , ಭಾವನೆಯ ಅರ್ಥ ತಿಳಿದುಕೊಳ್ಳಿ. ಗೆಳತಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತಿದೆ. ಏಕೆ ನೀನು ಹಾಗೆ ಮಾಡಲಿಲ್ಲ. ನಿಜವಾದ ಸ್ನೇಹಕ್ಕೆ ಬೆಲೆಯಿಲ್ಲವೇ? ಗೆದ್ದು ನಿಲ್ಲುವ ಹೊತ್ತಲ್ಲಿ, ಅರ್ಧದಲ್ಲಿ ಎದ್ದು ಹೋದರೆ (ಮರೆಯಾದರೆ) ಏನನ್ನಲಿ.

- ಅಶೋಕ ಬಿ. ಕಲಾಲ.
ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ .

4 comments:

Anonymous said...

geddu nilluv hottalli eddu hode lekkan tumba chennagi bredidira nimma gelti matte nimge sigli endu ashisuve. Prakash.B.Jalahalli

Amaresh Nayak said...

Geleya Ashok Kalal,
nijavada snehakke bele ide, nambikeyindale bareyiri, sada bareyuttiri.
Amaresh Nayak
Jalahalli.

shiva said...

halo sir nimma gelati nimmanu maretila yakendre nijavad priti marayagi erute .

shiva kumbar said...

havalu ninage sigal andamele niyake korugutiya gelaya havalu enobbar jothe eddaga ninu nensikodu nondabeda.

Post a Comment