ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹೊಸದಿಲ್ಲಿ :ಕೇಂದ್ರ ಸರಕಾರಕ್ಕೆ ನೈತಿಕತೆ ಇಲ್ಲ. ಜನತೆಯ ಮೇಲೆ ದಿನ ದಿನವೂ ಬೆಲೆಯೇರಿಕೆಯ ಹೊಡೆತ ನೀಡುತ್ತಾ ಬಂದಿದೆ. ನಿರಂತರವಾಗಿ ಆಹಾರೋತ್ಪನ್ನ, ದೈನಂದಿನ ಬಳಕೆ ವಸ್ತುಗಳ ಮೇಲೆ ದರ ಏರಿಕೆ ಮಾಡಿ ಜನ ಜೀವನಕ್ಕೆ ತೀವ್ರ ತೊಂದರೆ ನೀಡುತ್ತಿದೆ. ಇದೀಗ ಮತ್ತೊಮ್ಮೆ ಪೆಟ್ರೋಲ್ ದರ ಏರಿಕೆ ಮಾಡಿರುವುದರಿಂದಾಗಿ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್‌ ದರ ಹೆಚ್ಚಳವನ್ನು ಕೇಂದ್ರ ಸರಕಾರ ತತ್‌ಕ್ಷಣ ಹಿಂದೆಗೆದುಕೊಳ್ಳಬೇಕು. ಇಲ್ಲವೇ ತಾನು ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳನ್ನು ಸ್ಥಗಿತಗೊಳಿಸುವುದಾಗಿ ಬಿಜೆಪಿ ನೇರ ವಾಗ್ದಾಳಿ ಮಾಡಿದೆ.


ವಾಸ್ತವಾಂಶವೆಂದರೆ ಅಂತಾರಾಷ್ಟ್ರೀಯ ಕಚ್ಛಾ ತೈಲದ ಬೆಲೆ ಕುಸಿದ ದಿನವೇ ಕೇಂದ್ರ ಸರಕಾರ ಬೆಲೆಯೇರಿಕೆ ಮಾಡಿದೆ.ಇದು ನಾಚಿಕೆಗೇಡಿನ ವಿಷಯವಾಗಿದೆ. ಪೆಟ್ರೋಲ್‌ ಲೀ.ಗೆ 1.80 ರೂ. ಹೆಚ್ಚಳ ಮಾಡಿದ್ದನ್ನು ಪ್ರಕಟಿಸಿದ ದಿನದಂದೇ ಅಂತಾರಾಷ್ಟ್ರೀಯ ಕಚ್ಛಾ ತೈಲದ ಬೆಲೆ ಕುಸಿತವಾಗಿದ್ದವು.ಸಂಸ್ಕರಿತ ಪೆಟ್ರೋಲನ್ನು ದಿಲ್ಲಿಯಲ್ಲಿ ಲೀ.ಗೆ 34 ರೂ.ನಲ್ಲಿ ಮತ್ತು ಮುಂಬಯಿಯಲ್ಲಿ 36 ರೂ.ನಲ್ಲಿ ಮಾರಾಟ ಮಾಡಬಹುದಾಗಿದೆ ಎಂದವರು ವಾಸ್ತವಾಂಶ ತೆರೆದಿಟ್ಟಿದ್ದಾರೆ.
ಇತರ ರಾಜಕೀಯ ಪಕ್ಷಗಳ ಮೇಲೆ ಬೊಟ್ಟುಮಾಡುವ ಯುಪಿಎ ಸರಕಾರ ಮೊಟ್ಟಮೊದಲು ತನ್ನ ಹುಳುಕನ್ನು ತಿದ್ದಿಕೊಳ್ಳಲಿ. ಯುಪಿಎ ಮಿತ್ರಪಕ್ಷಗಳು ಕೂಡ ಈ ದರ ಹೆಚ್ಚಳಕ್ಕೆ ಹೊಣೆಯಾಗಿವೆ. ಮುಂಬರುವ ಅಧಿವೇಶನ ಸುಗಮವಾಗಿ ನಡೆಯಬೇಕೆಂದಿದ್ದರೆ, ಸರಕಾರ ತತ್‌ಕ್ಷಣ ದರ ಹೆಚ್ಚಳವನ್ನು ಹಿಂದೆಗೆದುಕೊಳ್ಳಬೇಕು. ದರ ಹೆಚ್ಚಳಕ್ಕೆ ಯಾವುದೇ ಸಮರ್ಥನೆ ಇಲ್ಲವೆಂದು ಬಿಜೆಪಿ ವಕ್ತಾರ ಪ್ರಕಾಶ್‌ ಜಾವಡೇಕರ್ ಆಗ್ರಹಿಸಿದ್ದಾರೆ.


ಬೆಲೆಯೇರಿಕೆ ವಿಷಯದಲ್ಲಿ ಪ್ರಧಾನೀ ಭೇಟಿ - ಮಮತಾ

ಬೆಲೆಯೇರಿಕೆ ವಿಷಯದಲ್ಲಿ ತನ್ನ ಪಕ್ಷ ರಾಜಿ ಮಾಡಿಕೊಳ್ಳದು ಎಂದು ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಕೋಲ್ಕತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಅವರು ಪಕ್ಷದ ಸಂಸದರು ಮಂಗಳವಾರ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಮಾಡಿ ವಿಷಯ ಪ್ರಸ್ತಾವಿಸಲಿದ್ದಾರೆ.ಡೀಸೆಲ್‌ ಮತ್ತು ಅಡುಗೆ ಅನಿಲದ ದರಗಳನ್ನು ಕೂಡ ಹೆಚ್ಚಿಸುವ ಪ್ರಸ್ತಾವವಿದೆ.ಬೆಲೆಯೇರಿಕೆಯಿಂದ ಜನರು ಈಗಾಗಲೇ ತತ್ತರಿಸಿದ್ದಾರೆ. ನಾವು ಇದನ್ನು ಸಮ್ಮತಿಸುವುದಿಲ್ಲ ಎಂದು ಮಮತಾ ಹೇಳಿದರು.

0 comments:

Post a Comment