ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:45 PM

ಓ ಮನಸೇ

Posted by ekanasu

ಈ ಕನಸು ಅವಾರ್ಡ್
ಮನಸಿನ ಪುಟಗಳು ತೆರೆಯುತಿವೆ
ನನ್ನೆದೆ ಗೂಡಲ್ಲಿ
ಯಾರೋ ಮಾತಾಡುವ ಹಾಗೆ
ಭಾವನೆಗಳ ಜೊತೆಗೆ


ಕಣ್ಣಂಚಿನ ನಡುವೆ ನಡೆಯುತಿದೆ
ನೆನಪುಗಳ ಅಲೆಯಲ್ಲಿ
ಸಾಗುತಿದೆ ಈ ಜೀವನ
ಅದರಲ್ಲಿ ನಾವು ಶೂನ್ಯಗಣ

ಭಾವನೆಗಳ ಮೇಲೆ
ಮನಸಿನ ಉಯ್ಯಾಲೆ
ತೂಗುತಿದೆ ಮನಸಲ್ಲಿ
ಕನಸಿನ ಜೊತೆ ಜೊತೆಗೆ

ಅಂತರಾಳದ ತಳದಿಂದ
ಪ್ರೀತಿಯ ತೇರ ಹರಿಯಯುತಿದೆ
ಬಾನಿನ ಅಂಚಿಗೆ ಸಾಗುತಿದೆ
ನೆನಪಿನ ಪುಟಗಳು ಹಾರುತಿದೆ

- ದರ್ಶನ್ ಬಿ.ಎಂ
ದ್ವಿತೀಯ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ

0 comments:

Post a Comment