ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:55 PM

ಸುತ್ತೋಣ ಬನ್ನಿ...

Posted by ekanasu

ಈ ಕನಸು ಅವಾರ್ಡ್
ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ದ ಕೇದಾರೇಶ್ವರ ದೇವಾಲಯ

ಶಿವಶರಣರ ನಾಡು ಎಂದೇ ಪ್ರಸಿದ್ದಿ ಪಡೆದಿರುವ ಶಿಕಾರಿಪುರ ತಾಲೂಕು ಮಹಾನ್ ವಚನಕಾರರಾದ ಅಕ್ಕಮಹಾದೇವಿ, ಅಲ್ಲಮಪ್ರಭುವಿನಂತವರಿಗೆ ಜನ್ಮ ನೀಡಿದ ಪ್ರದೇಶ. ಇದಲ್ಲದೇ ಅನೇಕ ಐತಿಹಾಸಿಕ ಸ್ಮಾರಕಗಳನನ್ನು ತನ್ನಲ್ಲಿ ಇರಿಸಿಕೊಂಡಿದೆ. ಅದರಲ್ಲಿ ಹೊಯ್ಸಳ ಸಾಮ್ರಾಜ್ಯದ ಕೇದಾರನಾಥೇಶ್ವರ ದೇವಾಲಯವೂ ಕೂಡಾ ಒಂದು. ಈ ಸ್ಥಳವನ್ನು ಪುರಾಣ ಇತಿಹಾಸಗಳ ಪ್ರಕಾರ ವಿಷ್ಣುವಿನಿಂದ ಶಿಕ್ಷಿಸಲ್ಪಟ್ಟ ಬಲಿಚಕ್ರವರ್ತಿಯ ರಾಜ್ಯಭಾಗವೆಂದು ಗುರುತಿಸಲಾಗುತ್ತದೆ. ಈ ಸ್ಥಳವನ್ನು ನಗರಗಳಿಗೆಲ್ಲ ಮಾತೃ ನಗರವೆಂದು, ಅನಾದಿ ರಾಜಧಾನಿ ಎಂದು ಕರೆಯಲ್ಪಡುತ್ತಿತ್ತು.
ಇದೇ ಅಲ್ಲದೇ ತನ್ನ ಧಾರ್ಮಿಕ ಪ್ರತಿಭೆಯಿಂದ ದಕ್ಷಿಣ ಕೇದಾರವೆಂದು ಪ್ರಸಿದ್ದಿ ಪಡೆದಿತ್ತು. ಬಳ್ಳಿಗಾವೆ, ಬೆಳಗಾಮೆ, ಬಳ್ಳಿಗಾಮೆ, ಬಳ್ಳಿಗ್ರಾಮ ಹಾಗೂ ಬಲಿಪುರವೆಂದು ಪ್ರಖ್ಯಾತವಾಗಿದ್ದ ಸ್ಥಳ ಮೊದಲು ಚುಟು ಶಾತವಾಹನರ ಆಳ್ವಿಕೆಗೆ ಒಳಪಟ್ಟಿತ್ತು. ಬನವಾಸಿ 12000 ಎಂಬ ಹೆಸರಿನಿಂದ ಬನವಾಸಿ ಕದಂಬರ ರಾಜ್ಯದ ಭಾಗವಾಗಿತ್ತು. ಬಾದಾಮಿ ಚಾಲುಕ್ಯರು, ಮಾಳಖೇಡದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರ್ಯರು, ದೇವಗಿರಿ ಯಾದವರು, ದೋರ ಸಮುದ್ರದ ಹೊಯ್ಸಳರು ತದನಂತರ ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟ ಈ ನಾಡು ಅಂದಿನ ಪ್ರಮುಖ ವಿದ್ಯಾ ಕೇಂದ್ರವಾಗಿತ್ತು.

ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಕೇದಾರೇಶ್ವರ ದೇವಾಲಯ, ಹೊಯ್ಸಳ ಶೈಲಿಯ ತ್ರಿಕೂಟಾಚಲ ಮಂದಿರ. ಪೂರ್ವ- ಪಶ್ಚಿಮವಾಗಿ ನಿರ್ಮಿತವಾಗಿರುವ ಈ ದೇವಾಲಯದಲ್ಲಿ ಪಶ್ಚಿಮದ ಗರ್ಭಗೃಹಕ್ಕೆ ಒಂದು ಸುಖನಾಸಿ ಇದ್ದು, ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಅರ್ಧ ಮಂಟಪ ಸಹಿತ ಗರ್ಭಗೃಹವಿದ್ದು ಎಲ್ಲವೂ ಆರು ಸ್ತಂಭಗಳ ಮಹಾಮಂಟಪಕ್ಕೆ ತೆರೆದುಕೊಳ್ಳುತ್ತವೆ.ಮಹಾಮಂಟಪದ ಒಳಭಾಗದಲ್ಲಿ ದೇವಕೋಷ್ಠಗಳನ್ನು ನಿರ್ಮಿಸಿದ್ದಾರೆ. ಪಶ್ಚಿಮ ಹಾಗೂ ದಕ್ಷಿಣ ಗರ್ಭಗೃಹದಲ್ಲಿ ಶಿವಲಿಂಗಗಳಿದ್ದು, ಉತ್ತರದ ಗರ್ಭಗೃಹದಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.


ಈ ದೇಗುಲದ ವಾಯುವ್ಯ ದಿಕ್ಕಿನಲ್ಲಿ ನಕರೇಶ್ವರ ದೇವಾಲಯ ತ್ರಿಕೂಟಾಚಲ ದೇವಾಲಯ ಕಿರು ಮಾದರಿಯಿದ್ದು, ಇದನ್ನು ಪ್ರಭುದೇವರ ಮಂಟಪವೆಂದೂ ಕರೆಯಲಾಗುತ್ತಿತ್ತು.
ಪ್ರವಾಸಿಗರಿಗೆಂದೇ ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಯಾತ್ರಿ ನಿವಾಸವನ್ನು ನಿರ್ಮಿಸಿದೆ. ಊಟ-ತಿಂಡಿಗೆ 1 ಕಿ.ಮೀ ದೂರದಲ್ಲಿ ಶಿರಾಳಕೊಪ್ಪ ಪಟ್ಟಣವಿದ್ದು, ಉತ್ತಮ ವ್ಯವಸ್ಥೆ ಇದೆ.

ಚಿತ್ರ ಲೇಖನ:ದರ್ಶನ್ ಬಿ.ಎ

2 comments:

Anonymous said...

lekhana tumba chennagide, keep it up Darshan

Chandraprabha said...

Article is very nice...All the Best Darshan !

Post a Comment